ತಂತ್ರಜ್ಞಾನವನ್ನು ಜಾಗರೂಕತೆ ಯಿಂದ ಬಳಸಿ – ಡಾ.ಗವಿಮಠ

Pratibha Boi
ತಂತ್ರಜ್ಞಾನವನ್ನು ಜಾಗರೂಕತೆ ಯಿಂದ ಬಳಸಿ – ಡಾ.ಗವಿಮಠ
WhatsApp Group Join Now
Telegram Group Join Now

ಜಮಖಂಡಿ:ತಂತ್ರಜ್ಞಾನ ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಿದೆ, ಉದ್ಯೋಗ, ವ್ಯಾಪಾರ, ಕೃಷಿ, ಮನರಂಜನೆ, ವಿದ್ಯಾಭ್ಯಾಸ ಸೇರಿದಂತೆ ಪ್ರತಿ ಹಂತದಲ್ಲೂ ಅನಿವಾರ್ಯವಾಗಿ ಮಾರ್ಪಟ್ಟಿದೆ. ತಂತ್ರಜ್ಞಾನವನ್ನು ಅವಶ್ಯಕತೆಗೆ ಅನುಗುಣವಾಗಿ, ಜಾಗರೂಕತೆಯಿಂದ ಬಳಸಬೇಕಾಗಿದೆ ಎಂದು ಮುಧೋಳದ ಎಸ್‌.ಆರ್‌ ಕಂಠಿ ಕಾಲೇಜಿನ ಗಣೀತಶಾಸ್ತ್ರವಿಭಾಗದ ಮುಖ್ಯಸ್ಥ ಡಾ.ಎಂ.ಕೆ.ಗವಿಮಠ ತಿಳಿಸಿದರು. ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ತಂತ್ರಜ್ಞಾನ ಜಗತ್ತನ್ನು ಹೇಗೆ ಬದಲಾಯಿಸಬಲ್ಲದು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನವ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ತಂತ್ರಜ್ಞಾನ ಹೆಜ್ಜೆ ಹಾಕಿದ್ದು, ನಮ್ಮಜೀವನ ಶೈಲಿಗೆ ನೂತನರೂಪ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಸಂವಹನ, ಶಿಕ್ಷಣ, ಆರೋಗ್ಯ, ವಾಣಿಜ್ಯ, ಕೃಷಿ ಮತ್ತು ಉದ್ಯಮಗಳಲ್ಲಿ ತಂತ್ರಜ್ಞಾನ ದಿಂದಕ್ರಾಂತಿಕಾರಿ ಬದಲಾವಣೆಗಳು ಸಂಭವಿಸಿವೆ. ಮೊಬೈಲ್ ಫೋನ್, ಇಂಟರ್ನೆಟ್, ಮೋಬಲ್ ಆ್ಯಪ್‌ಗಳು, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮುಂತಾದವುಗಳಿಂದ ಎಲ್ಲವೂ ಸ್ಮಾರ್ಟ್ಆಗುತ್ತಿದೆ. ಮನೆಬಾಗಿಲಿನಲ್ಲಿಯೇ ವಸ್ತುಗಳನ್ನು ಆರ್ಡರ್ ಮಾಡುವುದು, ವೈದ್ಯಕೀಯ ಸಲಹೆ ಪಡೆಯುವುದು, ಬ್ಯಾಂಕ್ ವ್ಯವಹಾರ ನಡೆಸಬಹುದಾಗಿದೆ. ಶಿಕ್ಷಣದತ್ತ ನೋಡಿದರೆ, ಆನ್‌ಲೈನ್ ಕಲಿಕೆ ವಿದ್ಯಾರ್ಥಿಗಳಿಗೆ ಹೊಸ ಅಧ್ಯಾಯವನ್ನೇತೆರೆಯುತ್ತಿದೆ. ತಂತ್ರಜ್ಞಾನ ಜಗತ್ತನ್ನು ಒಂದೆಡೆ ಸೇರಿಸಿ, ಸೀಮೆ, ಗಡಿತೊಡೆದು ಹಾಕುತ್ತಿದೆ. ಆದ್ದರಿಂದ, ಸರಿಯಾಗಿ ಮತ್ತು ಜವಾಬ್ದಾರಿ ಯಿಂದ ತಂತ್ರಜ್ಞಾನವನ್ನು ಬಳಸಿದರೆ, ಅದು ನಮ್ಮ ಭವಿಷ್ಯವನ್ನು ಬೆಳಗಿಸಬಲ್ಲ ಶಕ್ತಿಯಾಗಿದೆ”ಎಂದುಹೇಳಿದರು

ಕಾರ್ಯಕ್ರಮದಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಸುನಂದಾ.ಎಸ್. ಶಿರೂರ ವಹಿಸಿ. ಮಾತನಾಡಿ ಸಂವಹನ, ಶಿಕ್ಷಣ, ಆರೋಗ್ಯ, ಉದ್ಯಮ, ಕೃಷಿ ಹಾಗೂ ದಿನಚರಿಯಾದ ಕೆಲಸಗಳಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಬೆಳವಣಿಗೆಯು ಹೆಂಗಸರಲ್ಲಿ ಸಹ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಇಂದು ಮಹಿಳೆಯರು ಮನೆಯಲ್ಲಿಯೇ ಕುಳಿತು ಉದ್ಯೋಗ ಮಾಡುತ್ತಿದ್ದಾರೆ, ಆನ್‌ಲೈನ್ ಶಿಕ್ಷಣ ಪಡೆದುತಮ್ಮ ಸಾಮರ್ಥ್ಯವನ್ನು ಬೆಳೆಸುತ್ತಿದ್ದಾರೆ. ತಂತ್ರಜ್ಞಾನದಿಂದ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿದಂತೆಯೇ, ಆತ್ಮವಿಶ್ವಾಸವೂ ಹೆಚ್ಚಾಗಿದೆ. ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ, ಉದ್ದಿಮೆಗಳನ್ನೂ ಆರಂಭಿಸುತ್ತಿದ್ದಾರೆ. ಆರೋಗ್ಯ ಸೇವೆಗಳಿಂದ ಗ್ರಾಮೀಣ ಮಹಿಳೆಯರೂ ಸದುಪಯೋಗ ಪಡೆಯುತ್ತಿದ್ದಾರೆ. ತಂತ್ರಜ್ಞಾನವು ಹೆಂಗಸರಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತಿದೆ, ಎಂದು ಅಭಿಪ್ರಾಯ ಪಟ್ಟರು. ಎಮ್. ಎಮ್. ಮಂಟೂರ ,ಡಾ. ಎಸ್. ಎಸ್. ಸಿದ್ದಾಪೂರ, ಡಾ. ಎಸ್. ಎನ್. ಬಜಂತ್ರಿ, ಸವಿತಾ ಪಾಟೀಲ ಮಾತನಾಡಿದರು.

 

ಕು. ಪೂಜಾ ಮುತ್ತೂರ ಸಂಗಡಿಗರು ಪ್ರಾರ್ಥಿಸಿದರು.ಕು. ಪಾರ್ವತಿ ಸಾವಳಗಿ ಸ್ವಾಗತಿಸಿದರು ಕು. ಅಕ್ಷತಾ ಮುಚ್ಚಂಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿಡಾ. ವಿ. ಆರ್. ದಳವಾಯಿ, ಡಾ. ಎ. ವಾಯ್. ಕಾಂಬಳೆ, ಶಿವಲೀಲಾ, ಎ. ಎಸ್. ಪೂಜಾರಿ, ಆರ್. ಎಸ್. ಜಾಧವ, ಎಸ್. ಪಿ. ಸಜ್ಜನ, ಡಾ. ಡಿ. ಬಿ. ಚನ್ನಪ್ಪಗೋಳ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article