ಜನರಲ್ಲಿ ನೇತ್ರ-ದೇಹದಾನ ಜಾಗೃತಿ ಮೂಡಿಸಿ: ಡಾ.ದಡ್ಡಿ

Pratibha Boi
ಜನರಲ್ಲಿ ನೇತ್ರ-ದೇಹದಾನ ಜಾಗೃತಿ ಮೂಡಿಸಿ: ಡಾ.ದಡ್ಡಿ
WhatsApp Group Join Now
Telegram Group Join Now
ಜಮಖಂಡಿ: ಜನರಲ್ಲಿ ನೇತ್ರದಾನ ಮತ್ತು ದೇಹದಾನದ ಜಾಗೃತಿ ಕಡಿಮೆಯಿದ್ದು, ಜಾಥಾಗಳ ಮೂಲಕ ಜನರಲ್ಲಿ ಜಾಗೃತಿ, ಅರಿವು ಮೂಡಿಸಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ತಾಲೂಕಾಧ್ಯಕ್ಷ ಡಾ.ಹೆಚ್.ಜಿ.ದಡ್ಡಿ ಹೇಳಿದರು.
ನಗರದ ಬಸವಭವನ ಆವರಣದಲ್ಲಿ ಶನಿವಾರ ನಗರದ ಕುಂಚನೂರ ರಸ್ತೆಯಲ್ಲಿರುವ ಎಂ.ಎA.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ವಿವಿಧ ೧೨ ಕಾಲೇಜುಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿ ದೃಷ್ಠಿದೋಷ ಇರಬಹುದು, ಆದರೇ ನಿರ್ಲಕ್ಷ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು. ನೇತ್ರದಾನ ಮಹತ್ವದಾಗಿದ್ದು, ಓರ್ವ ಮೃತ ವ್ಯಕ್ತಿ ನೇತ್ರದಾನದಿಂದ ಇಬ್ಬರಿಗೆ ದೃಷ್ಠಿ ಲಭ್ಯವಾಗತ್ತದೆ. ಮಣ್ಣಲ್ಲಿ ಮಣ್ಣು ಮಾಡುವ ಬದಲಾಗಿ ನೇತ್ರದಾನ ಮಾಡಬೇಕೆಂದರು.
ಮುತ್ತಿನಕAತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚರ‍್ಯರು ಮಾತನಾಡಿ, ಮನುಷ್ಯನಿಗೆ ಕಣ್ಣು ಪ್ರಮುಖ ಆಗಿದೆ. ಮೃತ ನಂತರ ನಾವು ನೇತ್ರ ದಾನ ಮಾಡುವ ಮೂಲಕ ಇನ್ನೊಬ್ಬರ ಜೀವನಕ್ಕೆ ಬೆಳಕು ಆಗಬೇಕು. ಭವಿಷ್ಯದಲ್ಲಿ ನೇತ್ರದಾನಕ್ಕಿಂತ ಯಾವುದೇ ಶ್ರೇಷ್ಠ ದಾನವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ ಅನೀಲ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ, ಡಾ. ದೀಪಾ ಮುಗಳಿ  ಎ.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಬಡಿಗೇರ, ಎಂ.ಎ.ಜೋಶಿ ಆಸ್ಪತ್ರೆ, ಎ.ಜಿಎಂ. ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು ಜಮಖಂಡಿ, ಜೀವನ ಆರೋಗ್ಯ ಪ್ಯಾರಾ ಮೆಡಿಕಲ್ ಜಮಖಂಡಿ, ಹುನ್ನೂರ ಪದವಿಪೂರ್ವ ಕಾಲೇಜು ಸಹಿತ ೧೨ ಕಾಲೇಜಿನ ಪ್ರಾಚರ‍್ಯರು, ವಿದ್ಯಾರ್ಥಿಗಳು
WhatsApp Group Join Now
Telegram Group Join Now
Share This Article