ಹೊಸಪೇಟೆ (ವಿಜಯನಗರ): ನಮಗೆ ಅವಶ್ಯಕತೆ ಇರುವ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕರೀದಿಸ ಬಹುದು.ಇಂದಿನ ಧಾರ್ಮಿಕತೆ ಮಟ್ಟ ಕೆಳಕ್ಕಿಳಿದಿದೆ.ಮಾನಸಿಕ ಮತ್ತು ಧಾರ್ಮಿಕವಾಗಿ ವಿಕಾಸ ವಾಗಬೇಕಾದ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಮೊಬೈಲ್ ಆಕ್ರಮಿಸಿ ಕೊಂಡಿದ್ದು ಇದರಿಂದಾಗಿ ಅಂಥಹ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ, .ಸಂಸ್ಕಾರವಂತ ಮಕ್ಕಳನ್ನು ಹುಡುಕುವುದು ಕಷ್ಟಕರ ಅಂತಹ ಮಕ್ಕಳನ್ನು ಎಲ್ಲಿಂದ ತರಬೇಕು ಎಂದು ಬಸವ ಸಂಸ್ಕೃತಿ ಅಭಿಯಾನ ವಿಜಯನಗರ ಹೊಸಪೇಟೆ, ಇವರು ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿನ ಎಂ.ಎಂ.ಕಲ್ಬುಗಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಲ್ಲಿ ರೇವಣಕೀಯ ವೃತೀಶಾನಂದ ಸ್ವಾಮೀಜಿಗಳು ವಿಷಾದ ವ್ಯಕ್ತ ಪಡಿಸಿದರು.
ಮಕ್ಕಳು ದುಡಿದಾಗ ಮಾತ್ರ ದೇಶ ವಿಕಾಸ ವಾಗುತ್ತದೆ ಎಂದ ಅವರು ವಿದ್ಯೆಯನ್ನು ಪೂರ್ಣಗೊಳಿಸಿ ದುಡಿಮೆಗೆ ಆದ್ಯತೆ ಕೊಡಬೇಕು ಎಂರ್ಥದಲ್ಲಿ ಅವರು ಕಲಿಕೆಯ ನಂತರ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಬೆಳಕು ಚೆಲ್ಲಿದರು.ಈ ವೇದಿಕೆಯಲ್ಲಿ ವಿದ್ಯಾರ್ಥಿಗಳು ಸ್ವಾಮೀಜಿಗಳು ಆಶ್ಚರ್ಯಪಡುವಂತ ಪ್ರಶ್ನೆಗಳನ್ನು ಕೇಳಿದರು. ಕೆಲ ಪ್ರಶ್ನೆಗಳಿಗೆ ಸ್ವಾಮೀಜಿಗಳು ಹಾರಿಕೆ ಉತ್ತರ ಕೊಟ್ಟರೆ , ಕೆಲ ಪ್ರಶ್ನೆಗಳಿಗೆ ಆದ್ಯಾತ್ಮಿಕ ಪ್ರಶ್ನೆಗಳನ್ನು ಕೇಳಲು ವಿದ್ಯಾರ್ಥಿಗಳಿಗೆ ಹೇಳಿದರು.
ವಿದ್ಯಾರ್ಥಿನಿ ಮುಕ್ತಾ: ಲಿಂಗಾಯಿತ ಧರ್ಮದಲ್ಲಿ ಕರ್ಮ ಇಲ್ಲವಾ?ಸ್ವಾಮೀಜಿ(ಉತ್ತರ):ಬಾಲ್ಕಿ ಸ್ವಾಮಿಗಳು; ಲಿಂಗ ಸಂಧಾನ ಮಾಡಿಕೊಳ್ಳುವವರಿಗೆ ಕರ್ಮ ಸಿದ್ದಾಂತ ಇಲ್ಲ, ಲಿಂಗವಂತರಿಗೆ ಕರ್ಮಇಲ್ಲ, ಪುಃರ್ನಜನ್ಮ ಇಲ್ಲ,ಕರ್ಮ ಪೂರ್ವಜನ್ಮಕ್ಕೆ , ಲಿಂಗ ಅನುಸಂಧಾನದ ನಂತರ ಕರ್ಮಇಲ್ಲ , ಕರ್ಮ ಇದ್ದಲ್ಲಿ ಪುಃರ್ನಜನ್ಮ ಇಲ್ಲ.
ಪ್ರಶ್ನೆ:ಲಿಂಗವಂತ ಎಂದರೆ ಯಾರು?
ಉತ್ತರ: ಲಿಂಗ ಕಟ್ಟಿಕೊಂಡು ಅನೇಕ ದೇವರುಗಳನ್ನು ಪೂಜಿಸುವವನು ಲಿಂಗವಂತ ಅಲ್ಲ, ಏಕೋಪಾಸನ ಮಾಡುವ .ಯಾರು ಗುರುಗಳಿಂದ ಲಿಂಗ ಕಟ್ಟಿಸಿ ಕೊಳ್ಳುವರೋ ಅವರೇ ಲಿಂಗವಂತರು.
ಪ್ರಶ್ನೆ:ವೀರಶೈವ ಲಿಂಗಾಯತಕ್ಕೂ -ಲಿಂಗಾಯತಕ್ಕೂ ಇರುವ ವ್ಯತ್ಯಾಸ ಏನು:?ಉತ್ತರ:ಇಷ್ಟ ಲಿಂಗ ಪೂಜೆ ಮಾಡುವವರು ಲಿಂಗಾಯಿತರು, ಸ್ಥಾವರ ದೈವಗಳನ್ನು ಪೂಜಿಸಿವವರು ವೀರ ಶೈವರು, ವೀರಶೈವ ಶೈವ ಧರ್ಮದಿಂಧ ಪ್ರಾಚೀನ ಕಾಲದಿಂದ ಬಂದಿದೆ, ಲಿಂಗಾಯಿತ ಹನ್ನೆರಡನೇ ಶತಮಾನದಿಂಧ ಹುಟ್ಟಿದ್ದು, ಧರ್ಮ ಒಂದೇ ಕೆಲ ತಾತ್ವಿಕ ವ್ಯತ್ಯಾಸಗಳಿಂದ ಬದಲಾವಣೆಗೆ ಒಳಪಟ್ಟಿವೆ .ವೈದಿಕ ಪ್ರೇರಣೆಗಳಿಂದ ಎಲ್ಲ ದೇವರುಗಳೆಂದು ನಂಭಿ ಪೂಜೆ ಮಾಡುವವರು ಲಿಂಗಾಯಿತರಲ್ಲ.*ಧಾರ್ಮಿಕ ಮೌಲ್ಯ ಎನ್ನುವುದು ಕುಲ ದಲ್ಲಿ ಅಲ್ಲ , ಕಾಯಕದಲ್ಲಿದೆ ಎಂzವರು ಸ್ವಾಮೀಜಿಗಳು.ಬಸವಣ್ಣ ಅಖಂಡ ಸಮಾಜ ನಿರ್ಮಾಣ ಮಾಡಲು ತಿಳಿಸಿದರು
ವಿರಕ್ತ ಮಠಗಳ ಸ್ವಾಮೀಜಿಗಳು ಬಸವಣ್ಣನವರನ್ನು ಧರ್ಮಗುರುಗಳೆಂದು ಒಪ್ಪಿಕೊಳ್ಳುತ್ತಿಲ್ಲ ಏಕೆ.? ಉತ್ತರ :ತೋಂಟದ ಸಿದ್ದರಾಮಸ್ವಾಮಿಗಳು; ಅವರಲ್ಲಿ ಮೌಡ್ಯ ತುಂಬಿದೆ.
ಇಷ್ಟ ಲಿಂಗ ಪೂಜೆ ಮಾಡುವುದರಿಂದೆ ಅಂತರಿಂಗ ಶುದ್ದಿ ಹೇಗೆ ಆಗುತ್ತದೆ.? ಉತ್ತರ: ಜಗದ್ಗುರು ತೋಂಟದ ಸಿದ್ದರಾಮ ಸ್ವಾಮಿಗಳು ಡಂಬಳ;: ಇಷ್ಟ ಲಿಂಗ ಪೂಜೆಯಿಂದ ಮನಸ್ಸು ಕೇಂದ್ರೀಕೃತವಾಗಿ ಬಾಹ್ಯ ನೋಟ ಕಡಿಮೆಯಾಗಿ ಅಂತರಂಗ ಶುದ್ದಿ ಯಾಗಲು ಆರಂಭಿಸುತ್ತದೆ.
ಕುಂ. ವೀ ಅವರ ಉತ್ತರ:ಹನ್ನೆರಡನೇ ಶತಮಾನದಲ್ಲಿ ಜಾತಿವ್ಯವಸ್ಥೆ ಇತ್ತು .ಬಸವಣ್ಣ ನವರು ಇದನ್ನು ಸಂಪೂರ್ಣ ತಿರಸ್ಕರಿಸಿದ್ದರು.ಜಾತೀಯ ಸಮಾನತೆಯೇ ನಮ್ಮ ಸಂಸ್ಕೃತಿ , ನಾಲ್ಕು ವಿರಕ್ತ ಮಠಗಳು ಒಂದಾದರೆ ಬಸವ ಧರ್ಮ ಅಭಿವೃದ್ದಿ ಯಾಗುತ್ತದೆ .
*ಪ್ರಶ್ನೆ:ಲಿಂಗಾಯತರು ಅನ್ಯ ಮತದ ವಿವಾಹ ಏಕೆ ವಿರೋಧಿಸುತಾರೆ ?ಉತ್ತg ನಾಡೋಜ. ಡಾ:ಚೆನ್ನಬಸವ ಪಟ್ಟದೇವರು ಹಿರೇಮಠ ಬಾಲ್ಕಿ :: ಧರ್ಮಎಂದರೆ ನೈತಿಕತೆಯನ್ನು ಅಳವಡಿಸಿಕೊಳ್ಳವುದಾಗಿದೆ, ಯಾವುದೇ ಧರ್ಮದಲ್ಲಿ ನೈತಿಕತೆಯನ್ನು ಅಳಡಿಸಿಕೊಂಡಿದ್ದಾರೆಂದರೆ ಅಂತಃಹ ಧರ್ಮವನ್ನು ಲಿಂಗಾಯತರು ವಿರೋಧಿಸುವುದಿಲ್ಲ,ನೈತಿಕ ನಿಯಮಗಳ ಆಚರಣೆ ಇಲ್ಲದ ಸಮಾಜದಲ್ಲಿ ಸಂಘರ್ಷಗಳು ಇರುತ್ತವೆ ಇದನ್ನು ಲಿಂಗಾಯತ ಧರ್ಮ ವಿರೋದಿಸುತ್ತದೆ ,ಯಾವುದೇ ಧರ್ಮವಿರೋಧಿ ಲಿಂಗಾಯತರು ಅಲ್ಲ.
ಪ್ರಶ್ನೆ : ಸಾಂಸ್ಕೃತಿಕ ನಾಯಕ, ವಿಶ್ವಮಾನವ ರಾಗಿರುವ ಬಸವಣ್ಣ ನವರ ಹೊರತಾಗಿ ಕೆಲ ಪಕ್ಷಗಳು ,ಜೈ ಶ್ರೀಕೃಷ್ಣ , ಜೈ ಶ್ರೀರಾಮ್ ಎನ್ನುತ್ತಾರೆ. ಇದು ಸಮಂಜಸವೇ ಎಂಬ ಪ್ರಶ್ನೆಗೆ ವೇದಿಕೆಯಲ್ಲಿ ಉತ್ತರ ದೊರಕಲಿಲ್ಲ .ವೇಧಿಕೆಯಲ್ಲಿ ಅನೇಕ ಮಠದ ಸ್ವಾಮಿಗಳು , ಹಾಗು ವಿಜಯನಗರ ಶಾಸಕ ಗವಿಯಪ್ಪ, ಹೂವಿನಹಡಗಲಿಯ ಮಾಜಿನ ಶಾಸಕ ಹಾಲಪ್ಪ , ನಿವೃತ್ತ ಪ್ರೋ. ಶಿವಾನಂದ ಮತ್ತಿತರರು ಇದ್ದರು.
ಪ್ರಶ್ನೆ: ಮೈಸೂರು ದಸರಾ ಗೆ ಬಾನು ಮುಷ್ತಾಕ್ರನ್ನು ಅವ್ಹಾನಿಸಿದ್ದು ಸಮಸಮಾಜ ನಿರ್ಮಾಣದ ಕನಸುಳ್ಳವರು ವಿರೋಧಿಸುತ್ತಿರುವುದು ಏಕೆ.? ಎಂಬ ಪ್ರಶ್ನೆಗೆ ಶಭಿಕರಿಂದಲೇ ಈ ಪ್ರಶ್ನೆಗೆ ಉತ್ತರಿಸ ಬೇಡಿ ಎಂಬ ಕೂಗಿನಿಂದಾಗಿ ಸಭೆ ಮೌನಕ್ಕೆ ತೆರಳಿತು