Ad imageAd image

ಡಾ. ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ಅದಮ್ಯ ನಾಯಕ: ಸುಭಾಷ ಪಾಟೀಲ 

Ravi Talawar
ಡಾ. ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ಅದಮ್ಯ ನಾಯಕ: ಸುಭಾಷ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ,ಏಪ್ರಿಲ್15: ಜೀವನದಲ್ಲಿ ಕಠಿಣ ಪರಿಸ್ಥಿಯನ್ನು ಎದುರಿಸಿ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಜಾತೀಯ ಬೆಂಕಿಯ ಬಲೆಯ   ನಡುವೆಯೂ ಬೆಳೆದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಅದಮ್ಯ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ  ಸುಭಾಷ ಪಾಟೀಲ ಹೇಳಿದರು.
ನಗರದ ಬಿಜೆಪಿ ಕಛೇರಿಯಲ್ಲಿ ಭಾರತ ರತ್ನ ಡಾ. ಬಿ.ಅರ್.ಅಂಬೇಡ್ಕರ್  133 ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ್ದಾರೆ ಎಂದು ಹೇಳಿದರು.
ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ಮಹಾ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ನಮಗೆಲ್ಲ ನ್ಯಾಯ ಒದಗಿಸಿದ ಅದಮ್ಯ ಚೇತನ. ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟದ ಜೀವನವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿಗೆ ಸಿಲುಕಿದ ಅಂಬೇಡ್ಕರ್ ಕುಟುಂಬ, ಭಾರೀ ಅವಮಾನ ಎದುರಿಸಿದರು. ಇದರಿಂದ ಆ ಕಾಲದಲ್ಲಿ ಅಂಬೇಡ್ಕರ್ ಮನಸ್ಸಿನಲ್ಲಿ ನೋವು ಮತ್ತು ಆಕ್ರೋಶ ಹುದುಗಿತ್ತು ಎಂದರು.
ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತು. ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಅಗ್ರ ನಾಯಕರಲ್ಲಿ ಒಬ್ಬರಾದರು.
ಅದೆಷ್ಟೋ ನೊಂದ ಸಮುದಾಯದ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಅಂಬೇಡ್ಕರ್, ತಮ್ಮ ಜ್ಞಾನದ ಮೂಲಕ ಭಾರತದ ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡರು. ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥವಾಗಿದ್ದು, ಈ ಪವಿತ್ರ ಗ್ರಂಥದ ಗಂಧದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಹಿಂದುಳಿದ ಸಮುದಾಯಗಳ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ಪ್ರೇರಣೆಯಾದರು ಎಂದರು.
ಬಾಲ್ಯದಲ್ಲಿ ಸಮಾಜದಿಂದ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ದಲಿತರ ಹಕ್ಕುಗಳಿಗಾಗಿ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಹೋರಾಡಿದ ಅಂಬೇಡ್ಕರ್ ಜನ್ಮದಿನದ ಈ ದಿನವು ಎಲ್ಲಾ ಭಾರತೀಯ ಜನರಿಗೆ ರಾಷ್ಟ್ರದ ಸಾಮಾಜಿಕ ಪ್ರಗತಿಯನ್ನು ಪ್ರತಿಬಿಂಬಿಸಲು ಅನುವು ಮಾಡಿಕೊಡುತ್ತದೆ. ಭಾರತದ
ಶಿಕ್ಷಣ ಮತ್ತು ಸಮಾನತೆಗಾಗಿ ನಡೆಸಿದ ಇವರ ಹೋರಾಟ ಶ್ಲಾಘನೀಯ ಎಂದರು.
 ಇವರು ಕೆಳಜಾತಿ ಸಮುದಾಯಕ್ಕೆ ಸೇರಿದವರು ಮತ್ತು ತಮ್ಮ ಬಾಲ್ಯದ ವರ್ಷಗಳಲ್ಲಿ ತಾರತಮ್ಯವನ್ನು ಎದುರಿಸಿದರು ಬಿ.ಆರ್. ಅಂಬೇಡ್ಕರವರು ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅನೇಕ ಸಾಹಸಗಳನ್ನು ಅನುಸರಿಸಿದರು ಮತ್ತು ವಿದೇಶದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪದವಿಯನ್ನು ಪಡೆದ ಮೊದಲ ಭಾರತೀಯರಾದರು. ಮಹಾನ್ ನಾಯಕ ಭಾರತದ ಜಾತಿ ಆಧಾರಿತ ವ್ಯವಸ್ಥೆಗಾಗಿ ಸಕ್ರಿಯವಾಗಿ ಕೆಲಸ ಮಾಡಿದರು ಮತ್ತು ಆದ್ದರಿಂದ ಅವರ ಜನ್ಮದಿನವನ್ನು ದೇಶದಲ್ಲಿ “ಸಮಾನತೆ ದಿನ’ ಎಂದು ಆಚರಿಸಲಾಗುತ್ತದೆ ಎಂದರು.
ಕೃಷಿ ಮತ್ತು ಶಿಕ್ಷಣ ಕ್ಷೇತ್ರ, ಆರೋಗ್ಯ ಸಮುದಾಯ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಬೆಳೆಯಲು ಬಾಬಾಸಾಹೇಬರಿಂದ ಜನರು ಪ್ರೇರೇಪಿಸಲ್ಪಟ್ಟರು. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ  ದಿನವನ್ನು ಆಚರಿಸುವ ಮೂಲಕ,  ದಲಿತರು ಮತ್ತು ಅಸ್ಪೃಶ್ಯರ ಉನ್ನತಿಗೆ ಬಾಬಾಸಾಹೇಬರ ಕೊಡುಗೆಯನ್ನು ನೆನಪಿಸಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಮೊರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ  ಯಲ್ಲೇಶ ಕೊಲಕಾರ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ್, ರಂಜನಾ ಕೊಲಕಾರ, ಪೃಥ್ವಿಸಿಂಗ್ , ಸಂತೋಷ ದೇಶನೂರ, ವಿಠಲ ಸಾಯಣ್ಣವರ, ಭಾಗ್ಯಶ್ರೀ ಕೊಕಿತಕರ, ಸುಭಾಷ ಸಣ್ಣವಿರಪ್ಪನವರ, ವೀರಬದ್ರ ಪೂಜಾರಿ, ಬಿಷ್ಠಪ್ ಮಾದರ, ಕಪೀಲ ತ್ಯಾಗಿ, ಬಸವರಾಜ ತಳವಾರ, ಸೊಮಣ್ಣ ಕೊಲಕಾರ, ದೇಮಣ್ಣ ತಳವಾರ, ಅನ್ನಪೂರ್ಣ ತಳವಾರ ಮುಂತಾದವರು ಇದ್ದರು.
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ನ್ಯಾಯಶಾಸ್ತ್ರಜ್ಞರಾಗಿದ್ದರು. ವಾಲ್‌ಪೇಪರ್‌ಗಳು, ವಾನ್ ಸಂವಿಧಾನ ಸಭೆಯ ಚರ್ಚೆಗಳಿಂದ ಭಾರತದ  ಸಂವಿಧಾನವನ್ನು ರಚಿಸುವ ಸಮಿತಿಯ ನೇತೃತ್ವ ಬಾಬಾಸಾಹೇಬರಿಗೆ ಸಿಕ್ಕ ಪ್ರತಿಪಲವೆ ಪ್ರಪಂಚದ ಅತಿದೊಡ್ಡದಾದ ಸಂವಿಧಾನ ಭಾರತಕ್ಕೆ ಸಿಕ್ಕಿದೆ -ಎಫ್.ಎಸ್.ಸಿದ್ದನಗೌಡರ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರು
WhatsApp Group Join Now
Telegram Group Join Now
Share This Article