ಆರೋಗ್ಯ ವಿಶ್ವ ವಿದ್ಯಾಲಯ ಈ ವರ್ಷ ರಾಮನಗರಕ್ಕೆ: ಕುಲಪತಿ ಡಾ.ಭಾಗವಾನ್

MK HasiruKranti
ಆರೋಗ್ಯ ವಿಶ್ವ ವಿದ್ಯಾಲಯ ಈ ವರ್ಷ ರಾಮನಗರಕ್ಕೆ: ಕುಲಪತಿ ಡಾ.ಭಾಗವಾನ್
WhatsApp Group Join Now
Telegram Group Join Now
ಬಳ್ಳಾರಿ, ಮಾ.20..:ಸಧ್ಯ ಬೆಂಗಳೂರಿನಲ್ಲಿದ್ದು. ಆರೋಗ್ಯಕ್ಕೆ ಸಂಬಂಧಿಸಿದ 1500 ಕ್ಕೂ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜೀವ್ ಗಾಂಧಿ ಆರೋಗ್ಯ ವಿವಿಯನ್ನು ಈ ವರ್ಷ ರಾಮನಗರದಲ್ಲಿನ 216 ಎಕರೆಯ ಕ್ಯಾಂಪಸ್ ಗೆ ಸ್ಥಾಳಂತರಿಸಲಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ, ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು. ದೇಶದಲ್ಲಿ. ಡ್ರಗ್ಸ್ ಹಾವಳಿ ಹೆಚ್ಚಿರುವುದರಿಂದ ನಶ ಮುಕ್ತ ಭಾರತ ಅಭಿಯಾನ ಹಮ್ಮಿಕೊಂಡಿದ್ದು ಈಗಾಗಲೇ 16 ಜಿಲ್ಲೆಗಳಲ್ಲಿ ಕೈಗೊಂಡಿದೆ. ಬಳ್ಳಾರಿಯಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆದಿದೆ. ರಾಜ್ಯದ ಪ್ರತಿ ಕಾಲೇಜಿನಲ್ಲಿ ಕಾರ್ಯತಂಡ ರಚಿಸಿ ಡ್ರಗ್ಸ್ ಹಾವಳಿ ತಡೆಗೆ ಕಾರ್ಯಕ್ರಮ ರೂಪಿಸುತ್ತಿದೆಂದರು.
ಅಂಗಾಂಗದಾನದ ಬಗ್ಗೆ ಸಹ ಅರಿವು ಮೂಡಿಸುತ್ತಿದೆ. ರಾಜ್ಯದಲ್ಲಿ 58 ಸಾವಿರ ಜನ ಅಂಗಾಂಗದಾನಕ್ಕೆ ನೋಂದಣಿ ಮಾಡಿದ್ದಾರೆ. ಹೆಚ್ಚಿಸಬೇಕು ಎಂದು ಜಾಗೃತಿ ಕಾರ್ಯ ಹೆಚ್ಚಿಸಿದೆ. ನೋಂದಣಿ ಮಾಡಿದ ತಕ್ಷಣ ಅಂಗಾಗ ನೀಡಬೇಕಿಲ್ಲ. ದೇಹ ನಿಷ್ಕ್ರಿಯೆಯಾದಾಗ ಪಡೆಯಲಿದೆಂದರು. ಈ ವರೆಗೆ ಕುರಿತ ನಡೆದ ವಾಕಥಾನ್ ನಲ್ಲಿ 85 ಸಾವಿರ ಜನ ಪಾಲ್ಗೊಂಡಿದ್ದಾರೆ.
ರಾಜ್ಯದ 25 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಭೋದನಾ ಸಿಬ್ಬಂದಿ ಸಮಸ್ಯೆ ಇದೆ ಈ ಬಗ್ಗೆ ತುಂಬಲು ಸರ್ಕಾರದ ಗಮನಕ್ಕೆ ತಂದಿದೆಂದು ತಿಳಿಸಿದರು.ವಿಮ್ಸ್ ಬಳ್ಳಾರಿಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆಂದು ಸಮರ್ಥಿಸಿಕೊಂಡರು.
ಸುದ್ದಿಗೋಷ್ಟಿಯಲ್ಲಿ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಗಾಣಿಗೇರ,  ದದಿಶಾಭೋದ್ ಫೌಂಡೇಶನ್ ನ ಶಿವನಾಗಿರೆಡ್ಡಿ,  ಆರೋಗ್ಯ ವಿವಿಯ ಸಿಂಡಿಕೇಟ ಸದಸ್ಯರಾದ ಮಧುಸೂಧನ, ಓಬಳರೆಡ್ಡಿ ಮೊದಲಾದವರು ಇದ್ದರು
WhatsApp Group Join Now
Telegram Group Join Now
Share This Article