ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ಧಿ: ಡಾ.ಅಲ್ಲಮಪ್ರಭು ಮಹಾಸ್ವಾಮಿ

Ravi Talawar
ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ಧಿ: ಡಾ.ಅಲ್ಲಮಪ್ರಭು ಮಹಾಸ್ವಾಮಿ
WhatsApp Group Join Now
Telegram Group Join Now

ಬೆಳಗಾವಿ:  ಒಂದು ಜೀವವನ್ನು ಉಳಿಸಬೇಕಿದ್ದರೆ ವೈದ್ಯರೇ ಆಗಬೇಕೆಂದಿಲ್ಲ. ಆಪತ್ಕಾಲದಲ್ಲಿ ಸಹಾಯ ಮಾಡುವುದರಿಂದಲೂ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯ.   ರಕ್ತದಾನವು ಜೀವಗಳನ್ನು ಉಳಿಸುವುದಲ್ಲದೆ, ದಾನಿಗಳ ಅರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ   ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

ನಗರದ ರಾಮತೀರ್ಥನಗರದ ಸಭಾಭವನದಲ್ಲಿ  ಸುರೇಶ ಯಾದವ ಪೌಂಡೇಶನ್ ಹಾಗೂ ಕೆಎಲ್‌ಇ ಬ್ಲಡ್ ಬ್ಯಾಂಕ್ ಮತ್ತು ರೋಹನ್  ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ತ ರಕ್ತದಾನ ಮತ್ತು ಆರೋಗ್ಯ ಶಿಬಿರ  ಉದ್ಘಾಟಿಸಿ, ದಿವ್ಯ ಸಾನಿದ್ಯ ವಹಿಸಿ  ಅವರು ಮಾತನಾಡಿದರು.

ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗಲಿದೆ.  ಮತ್ತು ಹೃದಯದ ಅರೋಗ್ಯ ಸುಧಾರಿಸಬಹುದು. ರಕ್ತದಾನದಿಂದ ಸಗಾರವಾಗಿ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ತೃಪ್ತಿಯನ್ನು ನೀಡುತ್ತದೆ. ಮತ್ತೆ ಯುವಕರಂತೆ ಕಾಣಲು ಸಹಕಾರಿಯಾಗಲಿದೆ ಎಂದು ಶ್ರೀಗಳು ಹೇಳಿದರು.

ಅಧ್ಯಕ್ಷ  ಸುರೇಶ ಯಾದವ  ಅವರು ಮಾತನಾಡಿ,  ರಕ್ತದಾನ ಮಾಡುವದರಿಂದ ಕ್ಯಾಲೋರಿಗಳ್ ದಹನ, ಹೃದಯದ ಅರೋಗ್ಯ, ಕಬ್ಬಿಣದ ನಿಯಂತ್ರಣ, ಮಾಣಿಸಿಕ್ ತೃಪ್ತಿ ದೊರೆಯುತ್ತದೆ. ಪ್ರತಿ ಪಿಂಟ್ ರಕ್ತವು ಅಪಘಾತಗಳು, ಶಸ್ತ್ರಚಿಕಿತ್ಸೇಗಳು ಮತ್ತು ಇತರ ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯ ವಿರುವ ಸಹಾಯ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು.
ಅದಲ್ಲದೆ ಕ್ಯಾನ್ಸರ್, ತೀವ್ರಗಾಯಗಳು ಮತ್ತು ಇತರ ಕಾಯಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ  ಸಹಾಯವಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಮಾಜಿ ಕೆಎಂಡಿಸಿ (KMDC )ಅಧ್ಯಕ್ಷರಾದ ಮುಕ್ತಾರ ಪಠಣ ಅವರು ಮಾತನಾಡಿ,  ರಕ್ತದಾನವು ಸಮುದಾಯದ ಸದಸ್ಯರ ನಡುವೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಸಂಕೇತವಾಗಿದೆ.

ರಕ್ತದಾನ ಮಾಡುವುದು ಬೆದರಿಸುವಂತೆ ಕಾಣಿಸಬಹುದು. ಆದರೆ ಇದು ಯಾರೊಬ್ಬರ ಜೀವವನ್ನು ಉಳಿಸಲು ಸಹಾಯ ಮಾಡುವ ಸುಲಭ ಪ್ರಕ್ರಿಯೆ.
ರಕ್ತದಾನ ಮಾಡುವುದರಿಂದ ಅಗತ್ಯವಿರುವವರಿಗೆ ಸಿಗುವ ಪ್ರಯೋಜನೆಗಳಿಗೆ ಅಂತ್ಯವಿಲ್ಲ.  ಅಮೇರಿಕನ್ ರೆಡ್ ಕ್ರಾಸ್ ಪ್ರಕಾರ. ಒಂದು ರಕ್ತದಾನದಿಂದ್ ಮೂರು ಜೀವಗಳನ್ನು ಉಳಿಸಬಹುದು ಎಂದರು.

ಸುರೇಶ ಯಾದವ ಫೌಂಡೇಶನ್ ದ ರಕ್ತದಾನ ಶಿಬಿರದಲ್ಲಿ ಸುಮಾರು 200 ಜನ ಅರೋಗ್ಯ ತಪಾಸನೆ ಮಾಡಿಸಿಕೊಂಡರು. ಸುಮಾರು 50 ಜನ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ  ಡಾ. ರೋಹನ್ ಕಮತಗಿ, ಕೆಎಲ್‌ಇ  ಬ್ಲಡ್ ಬ್ಯಾಂಕಿನ ಡಾ.ಎಸ್‌  ಜಿರಗಿ ,  ಡಾ. ವಿಠಲ್ ಮಾನೆ, ಪೂರ್ಣಿಮಾ ಯಾದವ, ಸಂತೋಷ ಮೆರೆಕಾರ್ ,   ಮುಕ್ತಾರ್ ಪಠಾನ್ ಅವರು  ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿರಾದಾರ್, ಡಿಕ್ಸಿತ, ಪಾಟೀಲ್, ತೋರಗಲ್, ಕೊಲ್ಕರ್  ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article