ಧಾರವಾಡ,08 : ಡಾ. ಅಜಿತ ಪ್ರಸಾದರವರ ಅಮೃತ ಮಹೋತ್ಸವ ಬರಿ ಸಂಸ್ಥೆಗಳನ್ನು ಕಟ್ಟುವುದು ಮಖ್ಯವಲ್ಲ ಅದಕ್ಕೆ ಯಾವುದೇ ಚ್ಯುತಿ ಬರದಂತೆ ಕಾಪಾಡಿಕೊಂಡು ಹೋಗುವುದು ಮುಖ್ಯ. ಅದರ ಕಷ್ಟ-ಸುಖಗಳಲ್ಲಿ ನಿಂತು ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಮುಖ್ಯ. ಆ ಕೆಲಸ ಸಮಾಜದ ಪ್ರತಿಯೊಂದು ರಂಗದಲ್ಲೂ ಉತ್ತಮ ಭಾಂದವ್ಯ ಹಾಗೂ ಒಳ್ಳೆಯ ವ್ಯಕ್ತಿತ್ವ ಹೊಂದಿದವರಿಂದ ಮಾತ್ರ ಸಾಧ್ಯ ಅದನ್ನು ಡಾ. ಅಜಿತ ಪ್ರಸಾದರವರು ಮಾಡಿ ತೋರಿಸಿದ್ದಾರೆ.
ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಜೆ.ಎಸ್.ಎಸ್ ಸಂಸ್ಥೆಯನ್ನು ಬೆಳೆಸಿ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ ಎಂದು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ. ಡಾ. ಅಜಿತ ಪ್ರಸಾದರವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರು
ಡಾ. ಅಜಿತ ಪ್ರಸಾದರವರ ಅಭಿನಂದನಾ ಗ್ರಂಥ “ಸುಮೇರು” ಬಿಡುಗಡೆ ಮಾಡಿ, ಮಾತನಾಡಿ ವಜ್ರಕುಮಾರರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ವೀರೇಂದ್ರ ಹೆಗ್ಗಡೆಯವರು ಡಾ. ಅಜಿತ ಪ್ರಸಾದರವರ ಕೈಗೆ ಹಸ್ತಾಂತರಿಸಿದರು. ವ್ಯಕ್ತಿಯು ಹೇಗೆ ಬಾಳುತ್ತಾನೆ ಎಂದು ಮಹತ್ವದ ವಿಷಯವಾಗಿದೆ. ಅವರು ಹೋಗುವಾಗ ತಮ್ಮ ಹೆಜ್ಜೆಗುರುಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಮಾದರಿಯಾಗಬೇಕು. ಸಂಸ್ಥೆ ನಡೆಸಲು ಧೈರ್ಯ, ಛಲ, ತಾಳ್ಮೆ, ಸಮಯ ಪ್ರಜ್ಞೆ ಮುಂತಾದ ಗುಣಗಳನ್ನು ಹೊಂದಿರಬೇಕು ಅವುಗಳನ್ನು ಅಜಿತ ಪ್ರಸಾದರಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದು. ಅದರಂತೆ ಜೆ.ಎಸ್.ಎಸ್ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಷಾನ ದಾಸೋಹ ಮಾಡುತ್ತಿದೆ ಎಂದು ಹೇಳಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ನಡೆಸುವುದು ಸಾಧಾರಣವಾದ ವಿಷಯವಲ್ಲ. ಡಾ. ನ. ವಜ್ರಕುಮಾರರವರ ಗರಡಿಯಲ್ಲಿ ಬೆಳೆದು ಆಡಳಿತ ಕೌಶಲ್ಯಗಳನ್ನು ತಿಳಿದುಕೊಂಡು ಭೋಧನೆ ಅಲ್ಲದೇ ಆಡಳಿತದಲ್ಲಿಯೂ ಕೂಡ ಸಕ್ರೀಯವಾಗಿ ಡಾ. ಅಜಿತ ಪ್ರಸಾದರವರು ಸುಮಾರು 53 ವರ್ಷ ದುಧೀರ್ಘವಾದ ಸೇವೆಯನ್ನು ಸಂಸ್ಥೆಗೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗ ಕಾರಣರಾದರು ಎಂದು ಡಾ. ಅಜಿತ ಪ್ರಸಾದರವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಧಾರವಾಡ ಶಹರ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಬೆಲ್ಲದರವರು ಮಾತನಾಡಿದರು. 1973 ರಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ತೆಗೆದುಕೊಮಡ ನಂತರ ಡಾ. ನ. ವಜ್ರಕುಮಾರ ಹಾಗೂ ಡಾ. ಅಜಿತ ಪ್ರಸಾದರವರ ಸಮರ್ಥ ಆಡಳಿತದಿಂದಾಗಿ ಜೆ.ಎಸ್.ಎಸ್ ಸಂಸ್ಥೆ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಶ್ರೀಯತುರು ಕೇವಲ ಸಂಸ್ಥೆಗೆ ಮಾತ್ರ ಸೀಮಿತವಿರದೇ ಸಮಾಜದ ಪ್ರಗತಿಯಲ್ಲೂ ಸಹ ನಮಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಭಾರತ ಪತ್ರಿಕೆಯನ್ನು ಸಹ ಬಿಡುಗಡೆಗೊಳಿಸಿದರು.
ಹು-ಧಾ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್ ಅವರು ಮಾತನಾಡಿ ಡಾ. ಅಜಿತ ಪ್ರಸಾದರವರ ತಾಳ್ಮೆ ಮತ್ತು ದಕ್ಷತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕುವ ನಿಟ್ಟಿನಲ್ಲಿ ಶ್ರೀಯುತರು ಕೇವಲ ಪಠ್ಯವಷ್ಟೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಮನ್ನಣೆ ನೀಡಿ ಅವರ ಶ್ರೇಯೊಭಿವ್ರದ್ಧಿಗೆ ಕಾರಣವಾಗಿದ್ದಾರೆ. ಇದರಿಂದ ಜೆ.ಎಸ್.ಎಸ್ ಸಂಘ ಸಂಸ್ಥೆಗಳಿಗೆ ಭದ್ರವಾದ ಬುನಾದಿಯನ್ನು ಹಾಕಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಟಗಿಟ್ಟ ಡಾ. ಅಜಿತ ಪ್ರಸಾದರವರನ್ನು ಕೊಂಡಾಡಿದರು.
ಮಾಜಿ ಸಂಸದರಾದ ಐ.ಜಿ ಸನದಿಯವರು ಮಾತನಾಡಿ ಮನುಷ್ಯ ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತಾನೋ ಮುಖ್ಯವಲ್ಲ. ಇದ್ದಷ್ಟು ದಿನ ಸಮಾಜಕ್ಕೆ ಅವರು ನೀಡಿದ ಸೇವೆ ಸ್ಮರಿಸುವಂತಾಗಬೇಕು. ಅಂತಹ ಸಾಧನೆಯನ್ನು ಡಾ. ಅಜಿತ ಪ್ರಸಾದರವು ಮಾಡಿ ತೋರಿಸಿದ್ದಾರೆ ಎಂದು ಡಾ. ವಜ್ರಕುಮಾರವರ ಮತ್ತು ಡಾ. ಅಜಿತ ಪ್ರಸಾದರವರು ಸಂಸ್ಥೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಡಾ. ಅಜಿತ ಪ್ರಸಾದರವರದು ವಿಶಿಷ್ಠವಾದ ಹಾಗೂ ಬಹುಮುಖ ವ್ಯಕ್ತಿತ್ವ, ಜನಸಾಮಾನ್ಯರಲ್ಲಿ ತಾವು ಕೂಡ ಜನಸಾಮಾನ್ಯರಂತೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ದಕ್ಷ ಆಡಳಿತಗಾರ, ಬರಹಾಗಾರ, ಪ್ರಾಧ್ಯಾಪಕ, ವಿದ್ವಾಂಸ, ಸಂಶೋಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಮಿತ್ರರು ಮುಂತಾದ ಗುಣಗಳನ್ನು ಹೊಂದಿದ ಸಹನಾಮೂರ್ತಿ ಡಾ. ಅಜಿತ ಪ್ರಸಾದರವರು. ಇವರ ಶಿಸ್ತು, ಸಮಯ ಪ್ರಜ್ಷೆ, ನಿಷ್ವಾರ್ಥ ಸೇವೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಇದಕ್ಕೆ ಸಂಪೂರ್ಣವಾಗಿ ಅವರಿಗೆ ಬೆಂಬಲವಾಗಿ ನಿಂತ ಅವರ ಶ್ರೀಮತಿ ವಾಣಿಶ್ರೀ ಪ್ರಸಾದರವರ ಪ್ರೋತ್ಸಾಹ ಸ್ಮರಣೀಯ ಎಂದ ಅಭಿಪ್ರಾಯಪಟ್ಟರು.
ಶಾಸಕರಾದ ಶ್ರೀ ಎನ್.ಹೆಚ್ ಕೋನರಡ್ಡಿಯವರು ಮಾತನಾಡಿ ಡಾ. ಅಜಿತ ಪ್ರಸಾದರವರು ಅತ್ಯಂತ ಮೃದು ಹಾಗೂ ಇನ್ನೋಬ್ಬರ ವ್ಯಕ್ತಿತ್ವವನ್ನು ಗೌರವಿಸುವ ಗುಣಾಂಶ ಹೊಂದಿದವರು. ಸದಾ ಎಲ್ಲರೊಮದಿಗೆ ನಗುನಗುತ್ತ ತಾಳ್ಮೆಯ ಮಾತುಗಳಿಂದ ಜನರ ಹಾಗೂ ವಿದ್ಯಾಥಿಗಳ ಮನಸ್ಸನ್ನು ಗೆದ್ದವರು. 1973 ರಲ್ಲಿ 200 ವಿದ್ಯಾರ್ಥಿಗಳಿದ್ದ ಸಂಸ್ಥೆ 4 ಕ್ಯಾಂಪಸ್ಗಳಲ್ಲಿ 22000 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಷ್ಟು ಉನ್ನತ ಶಿಖರ ತಲುಪಿದೆ ಇದರ ನಾಗಾಲೋಟಕ್ಕೆ ಸಾರಥಿಯಾದವರು ಡಾ. ಅಜಿತ ಪ್ರಸಾದರವರು ಎಂದರು.
ಸನ್ಮಾನ ಸ್ವೀಕರಿಸಿದ ಡಾ. ಅಜಿತ ಪ್ರಸಾದರವರು ಮಾತನಾಡಿ 1944 ರಲ್ಲಿ ಸ್ಥಾಪನೆಯಾದ ಜೆ.ಎಸ್.ಎಸ್ ಸಂಸ್ಥೆ ನಡೆದು ಬಂದ ದಾರಿ ಅವರಿಗೆ ಮಾರ್ಗದರ್ಶಕರಾಗಿದ್ದ, ಡಾ. ವೀರೇಂದ್ರ ಹೆಗ್ಗಡೆ, ಡಾ. ನ. ವಜ್ರಕುಮಾರ ಮತ್ತು ಅನೇಕ ಹಿರಿಯ ಉಪನ್ಯಾಸಕರ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು. ಸಂಸ್ಥೆಯ ಅಭಿವೃದ್ಧಿಯ ವಿಚಾರವಾಗಿ ಯಾವುದೇ ಹಿಂಜರಿಕೆ ಬೇಡ, ಜೊತೆಗೆ ನಾನಿದ್ದೇನೆ ಎಂಬ ಖಾವಂದರರ ಭರವಸೆ ನಾನು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲು ಪ್ರೇರಣೆಯಾಯಿತು ಅಷ್ಟೆ ಅಲ್ಲದೇ ಸಿಬ್ಬಂದಿಗಳ ಸೇವೆ, ಅವಿರತ ಶ್ರಮ, ರಾಜಕೀಯ ಮುಖಂಡರ ಬೆಂಬಲ, ಧಾರವಾಡ ಜಿಲ್ಲಾಡಳಿತ, ಕ.ವಿ.ವಿ, ಕರ್ನಾಟಕ ವಿದ್ಯಾವರ್ಧಕ ಸಂಘ ಇತರೇ ಸಂಘ ಸಂಸ್ಥೆಗಳ ಸಹಕಾರದಿಂದ ಮತ್ತು ಮಾಧ್ಯಮ ಪ್ರತಿನಿಧಿಗಳ ಪ್ರಚಾರದಿಂದ ನಮ್ಮ ಸಂಸ್ಥೆ ಸಮಗ್ರವಾಗಿ ಬೆಳೆದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು. ನನ್ನ ಮಡದಿಯ ತ್ಯಾಗ, ತಾಳ್ಮೆ ಮನೆಯ ಜವಬ್ದಾರಿ ವಹಿಸಕೊಂಡು ನನ್ನ ಸಾಧನೆ ಹಾದಿಗೆ ಜೊತೆಯಾಗಿ ನಡೆದು ನನ್ನ ಯಶಶ್ಸಿನಲ್ಲಿ ಅವಳ ಪಾಲು ಕೂಡ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಥಣಿಯ ಮೋಟಗಿ ಮಠದ ಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿಯವರು ಮಾತನಾಡಿ ಅಮೃತ ಮಹೋತ್ಸವ ಹರ್ಷದ ಸಮಯ, ಒಬ್ಬ ವ್ಯಕ್ತಿಯ ಸಾಧನೆ ಮಾತನಾಡುವ ಸಮಯ. ನಾನು ಎಂಬ ಅಹಂ ಇರುವ ಕಾಲದಲ್ಲೂ ನನ್ನದೇನು ಇಲ್ಲ ಎಲ್ಲ ಸಮಾಜಕ್ಕಾಗಿಯೆ ಎಂದು ಸೇವಾ ಕೈಂಕರ್ಯವನ್ನು ಡಾ. ಅಜಿತ ಪ್ರಸಾದರವರು ಸಮಾಜಕ್ಕೆ ಸಲ್ಲಿಸಿದ್ದಾರೆ. ಆತ್ಮ ಸಾಕ್ಷಿಯಾಗಿ ನಿಸ್ವಾರ್ಥತೆಯಿಂದ ಬೆಳಿಗ್ಗೆಯಿಂದ ರಾತ್ರಿಯವರಗೆ ಸಂಸ್ಥೆಯ ವಿವಿಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯ ಪ್ರತಿಬಿಂಬವೇ ಈ ಅಮೃತ ಮಹೋತ್ಸವ ಅವರಿಗೆ ಇನ್ನು ಹೆಚ್ಚಿನ ಕೆಲಸ ನಿರ್ವಹಿಸಲು ಶ್ರೀ ಮಂಜುನಾಥ ಸ್ವಾಮಿ ಶಕ್ತಿ ಮತ್ತು ಸ್ಪೂರ್ತಿಯನ್ನು ನೀಡಲಿ ಎಂದು ಆಶೀರ್ವದಿಸಿದರು.
ಧಾರವಾಡದ ಮುರುಘಾಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಜೆ.ಎಸ್.ಎಸ್ ನಲ್ಲಿ ಓದಿದರೇ ನಾನು ಮಠದಲ್ಲಿ ವಸತಿ ಊಟದ ವ್ಯವಸ್ಥೆಯನ್ನು ಮಾಡುತ್ತೇನೆಂದು ಪೂಜ್ಯರಿಗೆ ನಾನು ಮಾತನ್ನು ನೀಡಿದ್ದೆ. ಅಂದಿನಿAದ ಈ ಸಂಸ್ಥೆಯೊಡನೆ ನಿಖಟವಾದ ಸಂಭAದ ಬೆಳೆಯಿತು ಡಾ. ಅಜಿತ ಪ್ರಸಾದರವರ ಕಾರ್ಯಾದಕ್ಷತೆ ಸಮಾಜಸೇವಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವನ್ನು ಬಿತ್ತುತ್ತಿದೆ. ಹಲವಾರು ಸವಾಲು ಸಂಘರ್ಷಗಳ ನಡುವೆ ಬೆಳೆದು ತನ್ನದೇ ಆದ ಚಾಪ ಮೂಡಿಸಿದೆ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ದೇವಾಲಯಗಳನ್ನು ಕಟ್ಟಿದಷ್ಟೆ ಪುಣ್ಯದ ಕೆಲಸ ಇಂತಹ ದೇವರ ಕೆಲಸ ನಿರ್ವಹಿಸುತ್ತಿರುವ ಡಾ. ಅಜಿತ ಪ್ರಸಾರವರಿಗೆ ದೇವರು ಧೀರ್ಘಾಯುಷ್ಯ ನೀಡಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಕ.ವಿ.ವಿ ಕುಲಪತಿಗಳಾದ ಡಾ. ಪಿ. ಎಲ್. ಪಾಟೀಲ್, ಶ್ರೀಕಾಂತ ಕೆಮ್ತೂರ, ಎಸ್ಶ್ರೀ ಜೀವಂಧರಕುಮಾರ, ಚಂದ್ರಕಾAತ ಬೆಲ್ಲದ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಜೆ.ಎಸ್.ಎಸ್ ಮುಂಭಾಗದಿAದ ಸನ್ನಿಧಿ ಕಲಾಕ್ಷೇತ್ರದವರೆಗೆ ಡಾ. ಅಜಿತ ಪ್ರಸಾದರವರವರನ್ನು ಮೆರವಣಿಗೆಯ ಮೂಲಕ ಕಾಯಕ್ರಮದ ವೇದಿಕೆಗೆ ಕರೆ ತರಲಾಯಿತು.
ಜೆ.ಎಸ್.ಎಸ್ ಪದವಿ ಕಾಲೇಜಿನ ಲಲಿತ ಕಲಾ ವಿದ್ಯಾಥಿಗಳ:ಉ ಪ್ರಾರ್ಥಿಸಿದರು. ಡಾ. ಸೂರಜ ಜೈನ್ ಸ್ವಾಗತಿಸಿದರು. ಶ್ರೀ ಮಹಾವೀರ ಉಪಾದ್ಯೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನ್ನಪ್ಪ ಕುಂದಗೋಳ ವಂದಿಸಿದರು.


