ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸ್ವದೇಶಿಯೇ ಮೂಲಮಂತ್ರ – ಡಾ.ಅಜಯ ಕುಲಕರ್ಣಿ

Hasiru Kranti
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸ್ವದೇಶಿಯೇ ಮೂಲಮಂತ್ರ – ಡಾ.ಅಜಯ ಕುಲಕರ್ಣಿ
WhatsApp Group Join Now
Telegram Group Join Now

ಜಮಖಂಡಿ –ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸ್ವದೇಶಿ ವಸ್ತುಗಳ ಬಳಕೆಯೇ ಮೂಲವಂತ್ರವಾಗಬೇಕು, ಸ್ವದೇಶಿ ಉತ್ಪನ್ನಗಳ ಬಳಕೆ ಯಿಂದ ದೇಶ ಎಲ್ಲಾ ಧೃಷ್ಠಿಯಿಂದಲೂ ಸದೃಢವಾಗಲು ಸಾಧ್ಯ ಎಂದು ಡಾ.ಅಜಯ ಕುಲಕರ್ಣಿ ಅಭಿಪ್ರಾಯ ಪಟ್ಟರು. ನಗರದ ಹುಲ್ಯಾಳ ಕ್ರಾಸ್‌ನ ವಿದ್ಯಾಭವನ ಶಾಲೆಯಲ್ಲಿ ಭಾಜಪ ಮಹಿಳಾ ಮೋರ್ಚಾದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾವಲಂಬಿ ಭಾರತ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸ್ವದೇಶಿ ಉತ್ಪನ್ನಗಳ ಬಳಕೆ ದೇಶ ಸೇವೆ ಮಾಡಿದಂತೆ ಎಲ್ಲರೂ ಗಡಿ ಕಾಯುವ ಸೈನಿಕರಾಗಲು ಸಾಧ್ಯವಿಲ್ಲ ಆದರೆ ನಮ್ಮ ಪರಿಧಿಯೊಳಗಿದ್ದು ದೇಶ ಸೇವೆ ಮಾಡಬಹುದು .ಭಯೋತ್ಪಾದಕರ ವಿರುದ್ಧ ಆಪರೇಶನ್‌ ಸಿಂಧೂರದ ಮೂಲಕ ಭಾರತದೇಶ ಕೊಟ್ಟ ಉತ್ತರ ವಿಶ್ವವೇ ದೇಶದಕಡೆಗೆ ತಿರುಗಿ ನೋಡುವಂತೆ ಮಾಡಿದೆ. ವಿಜ್ಞಾನಿಗಳು ಸೇನಾ ಪ್ರಮುಖರು ತಂತ್ರಜ್ಞಾನ ಬಳಸಿಕೊಂಡು ಇಲ್ಲಿಂದಲೆ ಪಾಕಿಸ್ತಾನದ 9 ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ್ದು ಚೈನಾ ಮತ್ತು ಅಮೇರಿಕಾ ದೇಶಗಳನ್ನು ನಿಬ್ಬೆರಗಾಗಿಸಿದೆ. ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುವ ಈ ದೇಶಗಳಿಗೆ ನಮ್ಮ ಸಾಧನೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ ಎಂದು ಹೇಳಿದರು.

ಸನಾತನ ಸಂಸ್ಕೃತಿಯ ಮೇಲೆ ದಾಳಿ ನಡೆಸಲಾಗುತ್ತಿದ್ದು ದಾರಾವಾಹಿಗಳ ಮೂಲಕ ದೇಶದ ಸಂಸ್ಕೃತಿಯ ಮೇಲೆ ದಾಳಿ ನಿರಂತರವಾಗಿ ನಡೆದಿದೆ. ಕೇವಲ ಹಿಂದುಗಳನ್ನಾಧರಿಸಿದ ದಾರಾವಾಹಿಗಳನ್ನು ಬಿತ್ತರಿಸಲು ಕೊಕಾಕೋಲಾ, ಕೊಲ್ಗೆಟ್‌ ನಂತಹ ವಿದೇಶಿ ಕಂಪನಿಗಳು ಆರ್ಥಿಕ ಸಹಾಯ ಮಾಡುತ್ತಿವೆ. ದೇಶದ ಮಹಾ ಪಿಡುಗು ಎನ್ನ ಬಹುದಾದ ಮತಾಂತರಕ್ಕೆ ವಿದೇಶಗಳಿಂದ ಆರ್ಥಿಕ ಸಹಾಯ ದೊರೆಯುತ್ತಿದೆ. ನಮ್ಮ ಸಂಸ್ಕೃತಿ, ಹಾಗೂ ಪೂರ್ವಜರು ಆಚರಿಸಿಕೊಂಡು ಬಂದಿರುವ ಪ್ರತಿಯೊಂದು ಆಚರಣೆಗಳು ವೈಜ್ಞಾನಿಕವಾಗಿವೆ. ಮೊಬೈಲ್‌, ಟಿವಿಗಳಿಂದ ಪ್ರಚೊದಿತರಾದ ಯುವ ಪೀಳಿಗೆ ನಮ್ಮ ಆಚರಣೆಗಳಿಂದ ದೂರ ಉಳಿಯುತ್ತಿರುವದು ಆತಂಕಕಾರಿ ಬೆಳವಣಿಗೆ ಯಾಗಿದೆ. ನಮ್ಮದೇಶ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಪ್ರತಿಯೊಬ್ಬರು ಸ್ವದೇಶಿ ವಸ್ತುಗಳ ಬಳಕೆ ಪ್ರಾರಂಭಿಸಬೇಕು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಮಹಿಳಾ ಮೊರ್ಚಾದ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸರ್ವತೋನ್ಮುಖ ಅಭಿವೃದ್ಧಿಗೆ ಸ್ವದೇಶಿ ಚಿಂತನೆ, ಸ್ವದೇಶಿ ವಸ್ತುಗಳ ಬಳಕೆ ಹಾಗೂ ದೇಶಸೇವೆಯ ಮನೊಬಾವ ಹೊಂದಿರ ಬೇಕು ಕೈಲಾದ ಮಟ್ಟಿಗೆ ನಮ್ಮ ಪ್ರತಿಯೊಂದು ಕೆಲಸವು ದೇಶಕ್ಕಾಗಿ ಎಂಬ ಭಾವನೆಯಿಂದ ಮಾಡಬೇಕೆಂದು ಹೇಳಿದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀನಿವಾಸ ಅಪರಂಜಿ ಅವರು ಮಾತನಾಡಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರತಿಯೊಬ್ಬರು ಮನಸ್ಸು ಮಾಡಬೇಕು ಇದರಿಂದ ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡಬಹುದು ಎಂದು ಹೇಳಿದರು. ಅಜಯ ಕಡಪಟ್ಟಿ, ಮಲ್ಲುದಾನಗೌಡ, ಗಣೇಶ ಶಿರಗಣ್ಣವರ, ರಾಜು ಚಿಕನಾಳ, ಶ್ರೀಧರ ಕಂಬಿ, ಶಿವಯ್ಯ ತುಂಗಳ ವೇದಿಕೆಯಲ್ಲಿದ್ದರು. ಗೀತಾ ಸೂರ್ಯವಂಶಿ ಸ್ವಾಗತಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article