ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಪರ ಬಿರುಸಿನ ಪ್ರಚಾರ: ಕಾರ್ಯಕರ್ತರಿಂದ ಮನೆಮನೆ ಪ್ರಚಾರ

Ravi Talawar
ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಪರ ಬಿರುಸಿನ ಪ್ರಚಾರ: ಕಾರ್ಯಕರ್ತರಿಂದ ಮನೆಮನೆ ಪ್ರಚಾರ
WhatsApp Group Join Now
Telegram Group Join Now

ವಿಜಯಪುರ ,30:  ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ  33 ನೇ ವಾರ್ಡ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.

ವಿಜಯಪುರ ನಗರದ ವಾರ್ಡ್ ನಂ.  33 ನೇ ವಾರ್ಡಿನ ಶಾಸ್ತ್ರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳ ಸಾಧನೆಗಳು, ಜನಪರ ಯೋಜನೆಗಳು, ದೇಶದಲ್ಲಾದ ಸಕಾರಾತ್ಮಕ ಬದಲಾವಣೆಗಳ ಜೊತೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟು, ವಿಕಸಿತ ಭಾರತದ ಸಂಕಲ್ಪದೊಂದಿಗೆ ದೇಶವಾಸಿಗಳ ರಕ್ಷಣೆಗೆ ಪಣತೊಟ್ಟಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಪ್ರತಿ ಮನೆಗಳಲ್ಲಿ ಸಿಕ್ಕ ಅದ್ಬುತ ಸ್ಪಂದನೆ ಹಾಗೂ ಬೆಂಬಲದಾಯಕ ಮಾತುಗಳು ಕಾರ್ಯಕರ್ತರ ಚುನಾವಣಾ ಪ್ರಚಾರದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದವು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಧುರೀಣರಾದ ಸಂದೀಪ ಪಾಟೀಲ,ಕುಮಾರ ಪೂಜಾರಿ,ಗುರು ಹೂಗಾರ,ಸಂಜಯ ಅರ್ಜುಣಗಿ ವಿಠ್ಠಲ ನಡುವಿನಕೇರಿ ,ಸುಧೀನಂಧ್ರ ಕುಲಕರ್ಣಿ,ಅರುಣ ಕೆಂಭಾವಿ ,ಜಟ್ಟೆಪ್ಪ ಹುಲ್ಲೂರ,ಸತೀಶ ಹೂಗಾರ,ಸಾಗರ ಮಸ್ಕೆ,ವೀರೇಶ ನಾಗುರ,ಪ್ರತೀಕ ಮುಪ್ಪಯಿನಮಠ ಹರೀಶ ಸೂತ್ರವೇ,ರಾಜು ಸೂರ್ಯವಂಶಿ ,ದೇವಪ್ರಸನ್ನ ತಿಕೋಟಾ ,ಅಭಿಷೇಕ್ ಹಿರೇಮಠ,ಸೇರಿದಂತೆ ವಾರ್ಡಿನ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದ.

WhatsApp Group Join Now
Telegram Group Join Now
Share This Article