ನಿವೃತ್ತಿಯ ನಂತರ ಆರೋಗ್ಯವನ್ನು ಕಡೆಗಣಿಸಬೇಡಿ -ಟಿ ಹೆಚ್ ಎಂ  ಬಸವರಾಜ್ 

Ravi Talawar
ನಿವೃತ್ತಿಯ ನಂತರ ಆರೋಗ್ಯವನ್ನು ಕಡೆಗಣಿಸಬೇಡಿ -ಟಿ ಹೆಚ್ ಎಂ  ಬಸವರಾಜ್ 
WhatsApp Group Join Now
Telegram Group Join Now
 ಬಳ್ಳಾರಿ  ಜುಲೈ 01 : ನಿವೃತ್ತಿಯ ನಂತರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎತ್ತರವಾದ ಮೆಟ್ಟಲುಗಳನ್ನು ಹತ್ತಬಾರದು ವಾಕಿಂಗ್ ಮಾಡುವಾಗ  ಜೊತೆಗೆ ಇನ್ನೊಬ್ಬರು ಇರಲೇಬೇಕು   ನೆಲದ ಮೇಲೆ ಕಾಲಿಡುವಾಗ ಎಚ್ಚರದಿಂದ ಇರಬೇಕು ಬಚ್ಚಲು ಮನೆಯಲ್ಲಿ ಸ್ವಚ್ಛತೆ ಇರಬೇಕು ಕಾಲು ಜಾರಬಾರದು ಭಾರವಾದ ಸಾಮಾನುಗಳನ್ನು ಎತ್ತಬಾರದು ಒಂಟಿ ಜೀವನ ಇದ್ದರೆ ಒಬ್ಬ ಸಹಾಯಕ ನನ್ನ ಇಟ್ಟುಕೊಳ್ಳಬೇಕು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವ ಆಹಾರವನ್ನು ಸೇವಿಸದೆ ಮಿತ ಆಹಾರವನ್ನು ಸೇವಿಸಬೇಕು  ಆಗಾಗ ವೈದ್ಯರನ್ನು ಭೇಟಿಯಾಗಿ ಆರೋಗ್ಯ  ತಪಾಸಣೆ ಮಾಡಿಸಿಕೊಳ್ಳಬೇಕು  ದೂರ ಸಂಚಾರವನ್ನು ಮಾಡಬಾರದು ಕೆಟ್ಟ  ಚಟಗಳಿಂದ ದೂರವಿರಬೇಕು ಹೃದಯಾಘಾತದ ಕುರಿತು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ನಿವೃತ್ತ ನೌಕರರಿಗೆ ಕರೆ ನೀಡಿದರು.
 ಅವರು ನಗರದ ನಲ್ಲ ಚೆರುವು  ಪ್ರದೇಶದಲ್ಲಿರುವ ಕೆಇಬಿ ಭವನದಲ್ಲಿ ನಿವೃತ್ತರಾದ ಕೆಇಬಿ ನೌಕರರಿಗೆ ಏರ್ಪಡಿಸಿದ್ದ  ಬೀಳ್ಕೊಡುಗೆ ಸಮಾರಂಭದಲ್ಲಿ  ಹೆಚ್ ಕಂದಾರಪ್ಪ ಹಿರಿಯ ಸಹಾಯಕ ಡಿ ಲಕ್ಷ್ಮಿ ದೇವಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಶರ್ಮಾಸ್ ಅಲಿ ಕಿರಿಯ ಸಹಾಯಕರು ಇವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿ, ನಿವೃತ್ತ ಜೀವನದಲ್ಲಿ ಸಾಧ್ಯವಾದಷ್ಟು ಪರೋಪಕಾರದಿಂದ
ಪುಣ್ಯದ ಕೆಲಸಗಳನ್ನು ಮಾಡಬೇಕು ಸಾಧ್ಯವಾದರೆ ಬಡವರಿಗೆ ಸಹಾಯ ಮಾಡಬೇಕು ಕುಟುಂಬಸ್ಥರೊಂದಿಗೆ ಹೆಚ್ಚಾಗಿ ಕಾಲ ಕಳೆಯಬೇಕು ಅದರಲ್ಲೂ ಮಕ್ಕಳ ಜೊತೆ ಬೆರೆಯಬೇಕು ಈ ರೀತಿಯಾಗಿ ನಾವು  ಅರಳು ಮರಳು ಎನ್ನುತ್ತಾರೆ ಆದರೆ ನಾವು ಮರಳಿ ಅರಳಬೇಕು ಮಲಗಿದಾಗ ಹತ್ತಿರ ಕಾಲಿಂಗ್ ಬೆಲ್ ಇಟ್ಟುಕೊಳ್ಳಬೇಕು ಇದರಿಂದ ನಮಗೆ ಏನಾದರೂ ಆರೋಗ್ಯದಲ್ಲಿ ಏರುಪೇರದಲ್ಲಿ ಕುಟುಂಬದವರ ಗಮನಕ್ಕೆ ತರಲು ಅನುಕೂಲವಾಗುತ್ತದೆ  ಎಂದು ಹಿರಿಯ ನಾಗರಿಕರಿಗೆ ಕಿವಿಮಾತು ಹೇಳಿದರು.
 ಈ ಸಂದರ್ಭದಲ್ಲಿ  ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಡಿಸಿಎ ಆನಂದ್ ಲೆಕ್ಕಾಧಿಕಾರಿಗಳು ಕಾರ್ಮಿಕ ಮುಖಂಡರು ನಿವೃತ್ತ ನೌಕರರ ಕುಟುಂಬ ವರ್ಗದವರು ಕೆಇಬಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article