ಭರವಸೆ ಕಳೆದುಕೊಳ್ಳಬೇಡಿ, ಇನ್ನಷ್ಟು ಬಲಿಷ್ಠರಾಗಿ ಬನ್ನಿ: ಕುಸ್ತಿಪಟು ವಿನೇಶ್ ಫೋಗಟ್ ಗೆ ಪ್ರಧಾನಿ ಸಾಂತ್ವನ

Ravi Talawar
ಭರವಸೆ ಕಳೆದುಕೊಳ್ಳಬೇಡಿ, ಇನ್ನಷ್ಟು ಬಲಿಷ್ಠರಾಗಿ ಬನ್ನಿ: ಕುಸ್ತಿಪಟು ವಿನೇಶ್ ಫೋಗಟ್ ಗೆ ಪ್ರಧಾನಿ ಸಾಂತ್ವನ
WhatsApp Group Join Now
Telegram Group Join Now

ನವದೆಹಲಿ: ಕೇವಲ 100 ಗ್ರಾಂ ತೂಕದ ಕಾರಣಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ, ಭರವಸೆ ಕಳೆದುಕೊಳ್ಳಬೇಡಿ, ಮತ್ತಷ್ಟು ಬಲಿಷ್ಠರಾಗಿ, ಗಟ್ಟಿ ಮನಸ್ಸಿನಿಂದ ದೇಶಕ್ಕೆ ಬನ್ನಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೆ ಸ್ಫೂರ್ತಿ. ಇಂದಿನ ಹಿನ್ನಡೆ ನೋವುಂಟುಮಾಡುತ್ತದೆ. ನಾನು ಅನುಭವಿಸುತ್ತಿರುವ ಹತಾಶೆಯ ಭಾವ ಪದಗಳಲ್ಲಿ ಹೇಳುವುದು ಕಷ್ಟವಾಗುತ್ತಿದೆ. ನಿಮ್ಮಲ್ಲಿ ಸ್ಥಿತಿಸ್ಥಾಪಕತ್ವ ಶಕ್ತಿ ಪರಿಸ್ಥಿತಿಯನ್ನು ಎದುರಿಸುವ ಧೈರ್ಯವಿದೆ. ಇನ್ನಷ್ಟು ಬಲಿಷ್ಠರಾಗಿ ಬನ್ನಿ. ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ ಎಂದು ಭರವಸೆ ತುಂಬುವ ಶಬ್ದಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article