ವಾಷಿಂಗ್ಟನ್, ಅಕ್ಟೋಬರ್ 30: ಚೀನಾ ಮೇಲೆ ಅಮೆರಿಕ ವಿಧಿಸುತ್ತಿರುವ ಶೇ. 57ರಷ್ಟು ಟ್ಯಾರಿಫ್ ಅನ್ನು ಶೇ. 47ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೌತ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ ಚೀನಾ ಮುಖ್ಯಸ್ಥ ಶಿ ಜಿನ್ಪಿಂಗ್ ಅವರನ್ನು ಡೊನಾಲ್ಡ್ ಟ್ರಂಪ್ ಭೇಟಿ ಮಾಡಿ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಳಿಸಿರುವುದು ತಿಳಿದುಬಂದಿದೆ. ಈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಚೀನಾ ಮೇಲಿನ ಟ್ಯಾರಿಫ್ ಅನ್ನು ಶೇ. 10ರಷ್ಟು ಇಳಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್


