ಮುಧೋಳ:(ಡಿ.13), ತಾಲೂಕಿನ ಸೋರಗಾಂವ ಗ್ರಾಮದ ಪಿ ಎಮ್ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶುಕ್ರವಾರ ದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಮುಧೋಳ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ,ಜಿಲ್ಲಾ ಜನಜಾಗೃತಿ ವೇದಿಕೆ ಬಾಗಲಕೋಟೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು.
ಮುಖ್ಯ ಶಿಕ್ಷಕ ಬಿ ಆರ್ ಶಿರೂರ ಅಧ್ಯಕ್ಷತೆವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಪಂಚದ ಅದೃಶ್ಯ ಕೊಲೆಗಾರನಾಗಿ ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಮಾದಕ ವಸ್ತುಗಳಿಗೆ ಜನರು ಆಕರ್ಷಿತರಾಗುವುದು ಈ ಶತಮಾನದ ದುರಂತವೇ ಸರಿ.
ಆದ್ದರಿಂದ ಯಾವುದೇ ಮಾದಕ ವಸ್ತುವನ್ನು ನಾನು ಸೇವಿಸುವುದಿಲ್ಲ.ಇತರರಿಗೂ ಕೊಡುವುದಿಲ್ಲ ಎನ್ನುವ ನಿರ್ಧಾರದಲ್ಲಿ ಬಲಿಷ್ಠರಾಗಿರಬೇಕು.ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಮಾಡಿ.ಇದಕ್ಕೆ ಕಡಿವಾಣ ಹಾಕುವ ಮಾರ್ಗವೇ ಯೋಗ ಮಾರ್ಗ ಆದರಿಂದ ಪ್ರತಿನಿತ್ಯ ನಮ್ಮ ಶಾಲೆಯಲ್ಲಿ ಯೋಗ ಶಿಕ್ಷಣವನ್ನು ಸಂಪನ್ಮೂಲ ಯೋಗ ಶಿಕ್ಷಕರು ನಿತ್ಯ ಹೇಳಿಕೊಡುತ್ತಿದ್ದಾರೆ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ನೀಲನ್ನವರ ಯೋಗ ಶಿಕ್ಷಕರು ರನ್ನ ಬೆಳಗಲಿ ಅವರು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ,ಆರೋಗ್ಯ ಜೀವನಕ್ಕೆ ಯೋಗವನ್ನು ಮೈಗೂಡಿಸಿಕೊಳ್ಳಿ ಎಂದು ಹೇಳುವುದರ ಜೊತೆಗೆ ಮಾದಕ ವಸ್ತುವಿನ ಸೇವನೆ ಯೆಂದರೆ ಅದೊಂದು ನಿಧಾನ ಆತ್ಮಹತ್ಯೆ. ಮಾದಕ ವಸ್ತುಗಳ(ಡ್ರಗ್ಸ್)ಚಟ ಇಂದು ಹೆಚ್ಚಾಗಿ ಚರ್ಚೆಗೆ ಗ್ರಾಸವಾಗುತ್ತಿದೆ.ಮೊಬೈಲ್ ಕೂಡ ವಿದ್ಯಾರ್ಥಿ ಜೀವನಕ್ಕೆ ಮಾದಕ ವಸ್ತುವಾಗಿ ಪರಿಣಮಿಸುತ್ತಿದೆ.ಆದ್ದರಿಂದ ಶೈಕ್ಷಣಿಕ ಮಾಹಿತಿಗಾಗಿ ಮಾತ್ರ ಬಳಸಿ, ಪುಸ್ತಕವನ್ನು ಪ್ರೀತಿಸಿ ಪುಸ್ತಕವನ್ನೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ತಿಳಿಸಿದರು,
ವಲಯ ಮೇಲ್ವಿಚಾರಕ ಶಿವಾನಂದ ಅರಮನಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ದೈಹಿಕ ಶಿಕ್ಷಕರಾದ ಎಸ್ ಎಸ್ ಜೀರಗಾಳ ಸೇವಾಪ್ರತಿನಿಧಿ ಲಕ್ಷ್ಮೀ ಪೂಜಾರಿ, ವಿ.ಎಲ್.ಇ ಪ್ರಿಯಾಂಕ ದೇವದಾಸ ಮತ್ತು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


