ಬಳ್ಳಾರಿ,ಡಿ.30…: ಕೆಐ.ಎ.ಡಿ.ಬಿ. ಅಭಿವೃದ್ಧಿ ಪ್ರದೇಶದಲ್ಲಿ ಕೆಐ.ಎ.ಡಿ.ಬಿ. ಹಾಗೂ ಜಿಂದಾಲ್ ನ ಜೆ. ಎಫ್. ಇ. ಸ್ಟೀಲ್ ಎಲೆಕ್ಟ್ರಿಕಲ್ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಯು. ಬಸವರಾಜ್ ತಿಳಿಸಿದರು.
ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಬೆಂಬಲಿಸಿದ ಸಂಘಟನೆಗಳ ನೇತೃತ್ವದಲ್ಲಿ ಮಿತ್ತಲ್ ಉದ್ದೇಶಿತ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟಿಸಿ ಮಾತನಾಡಿ, ಮಿತ್ತಲ್ ಕೈಗಾರಿಕೆ. ಬ್ರಾಹ್ಮಿಣಿ ಕೈಗಾರಿಕೆ. ಹಾಗೂ ಎನ್‌ಎಂಡಿಸಿ ಬೃಹತ್ ಕೈಗಾರಿಕಗಳು ಒಂದೇ ಕಟ್ಟಿನ ಆಯಾ ಭೂಮಿಗಳಾಗಿದ್ದು ಹಲವಾರು ನ್ಯಾಯಾಲಯಗಳ ಹೈಕೋರ್ಟ್ ನ ತೀರ್ಪಿನಂತೆ ಮೂರು ಕೈಗಾರಿಕೆಗೆ ನ್ಯಾಯಾಲಯ ಆದೇಶಗಳಂತೆ ವಂಚಕ ಭೂ ಬೆಲೆ ಸರಿಪಡಿಸಬೇಕು. ಹಾಗೂ ಮೂಲ ಉದ್ದೇಶಗಳಿಗೆ ಭೂಮಿ ಮಾತ್ರ ಬಳಸದೆ ಅಕ್ರಮವಾಗಿ ಕೆಐಎಡಿಬಿ. ಕಾನೂನುಗಳನ್ನು ಉಲ್ಲಂಘನೆ ಮಾಡಿ. ಮಿತ್ತಲ್ ಕೈಗಾರಿಕೆ ಭೂಮಿಯನು ತುಂಡು ತುಂಡಾಗಿ ಸಣ್ಣ ಕೈಗಾರಿಕೆಗಳಿಗೆ ಮಾರಿ ರಿಯಲ್ ಎಸ್ಟೇಟ್ ದಂಧೆಯನ್ನು ನಿಲ್ಲಿಸಲು ಒತ್ತಾಯಿಸಿದರು. ಬೃಹತ್ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಿಗೆ ಕೆ .ಐ. ಎ. ಡಿ .ಬಿ. ಸೆಕ್ಷನ್ ೨೮(ಂ)ಪ್ರಕಾರ ಕೋರ್ಟ್ ಆದೇಶದಂತೆ ಭೂ ಬೆಲೆ ನಿಗದಿಗೆ ಒತ್ತಾಯಿಸಿ ಕುಡತನಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ದಿನಾಂಕ ೧೨.೦೧.೨೦೨೫. ಬೃಹತ್ ಪಾದಯಾತ್ರೆಯನ್ನು ಮಿತ್ತಲ್ ಕೈಗಾರಿಕೆ . ಬ್ರಾಹ್ಮಿಣಿ ಕೈಗಾರಿಕೆ. ಹಾಗೂ ಎನ್‌ಎಂಡಿಸಿ ಕೈಗಾರಿಕೆ ಭೂಮಿ ಕಳೆದುಕೊಂಡಿರುವ ೭ ಗ್ರಾಮದ ರೈತರ ಯುವಕರು ರೈತ ಮಹಿಳೆಯರು ನೇತೃತ್ವದಲ್ಲಿ ಭೂ ಸಂತ್ರಸ್ತರ ರೈತರ ಬೆಂಬಲವಾಗಿ ಬೆಂಬಲಿಸಿದ ಸಂಘಟನೆಗಳ ನೇತೃತ್ವದಲಿ ಬೃಹತ್ ಪ್ರತಿಭಟನ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬೃಹತ್ ಸಭೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ ಸತ್ಯ ಬಾಬು ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಹಿರಿಯ ಮುಖಂಡ ಜಂಗ್ಲಿ ಸಾಬು, ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. ಎಂ ತಿಪ್ಪೇಸ್ವಾಮಿ, ರೈತ ಮುಖಂಡರಾಗಿರುವ ಹೋಳಿಗೆ ಸಿದ್ದಪ್ಪ, ಗೌನೂರ್ ಅಂಜಿನಪ್ಪ. ಕೃಷ್ಣಪ್ಪ ಹಟ್ಟಿ ಪಂಪಾಪತಿ . ಸೆಕ್ಷಾವಲಿ. ಶ್ರೀಧರ . ಕೊಳಗಲ್ ಮಲ್ಲಿಕಾರ್ಜುನ. ಹುಚ್ಚಪ್ಪ. ತೆಗೆ ಸ್ವಾಮಿ. ರಮೇಶ. ಕನ್ನಿಕೇರಿ ಭೀಮಣ್ಣ. ಧರ್ಮಣ್ಣ. ಜಂಬಣ್ಣ ಶಿವರಾಮ ರೆಡ್ಡಿ. ಬಿಳಿ ಬಾಯಪ್ಪ . ವಾಲ್ಮೀಕಿ ಶೇಖರ್. ಗೋವರ್ಧನ ರೆಡ್ಡಿ. ತಿಮ್ಮಾರೆಡ್ಡಿ. ಜಾನೆ ಕುಂಟೆ ಶೇಖರ್. ದೊಡ್ಡಬಸಪ್ಪ. ಲಕ್ಷ್ಮಣ. ಮಹಿಳಾ ಮುಖಂಡರು. ಹಂಪಮ್ಮ. ನಾಯಕರ ಮಲ್ಲಮ್ಮ. ಉಪ್ಪಾರ ದ್ಯಾವಮ್ಮ. ಹನುಮಕ್ಕ. ನೀಲಮ್ಮ. ಮೊದಲಾದ ನೂರಾರು ರೈತ ಮುಖಂಡರು ಮಹಿಳಾ ಮುಖಂಡರು ಪಾಲ್ಗೊಂಡಿದ್ದರು.


