Bengaluru: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಡಿನ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಮುಂದಿನ ವರ್ಷದಿಂದ ಕೇವಲ ಸರ್ಕಾರಿ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಜೊತೆಗೆ ಎಲ್ಲಾ ಖಾಸಗಿ ಕಂಪನಿಗಳಲ್ಲೂ ಕನ್ನಡ ಭಾವುಟ ಹಾರಾಟ ನಡೆಸಲು ಸೂಚಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮುಂದಿನ ನವೆಂಬರ್ 1ರಂದು ಎಲ್ಲಾ ಖಾಸಗಿ ಕಂಪನಿಗಳು ಕೂಡ ಕನ್ನಡ ಧ್ವಜ ಹಾರಿಸುವಂತೆ ಆದೇಶ ಮಾಡುತ್ತೇವೆ, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಒಂದು ನಿರ್ಣಯ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ನಾಡಿನ ಜನರಿಗೆ ಕನ್ನಡ ರಾಜ್ಯೋತ್ವವದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ “ಈ ಶುಭ ಸಂದರ್ಭವನ್ನು ಎಲ್ಲರೂ ಆಚರಣೆ ಮಾಡಬೇಕು. ಮುಂದಿನ ವರ್ಷದಿಂದ ಎಲ್ಲಾ ಖಾಸಗಿ ಕಂಪನಿಗಳು ಕೂಡ ಕನ್ನಡ ಧ್ವಜ ಹಾರಿಸುವಂತೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ. ಇದು ಕನ್ನಡ ಗೌರವಕ್ಕೆ ಹೊಸ ಆಯಾಮ ತಂದಿದ್ದು, ಜನರಲ್ಲಿ ಸಂತೋಷ ಮೂಡಿಸಿದೆ.


