ಬಳ್ಳಾರಿ, ಜ, 6: ಇಡೀ ಕರ್ನಾಟಕದಲ್ಲೇ ಅತೀ ಹೆಚ್ಚು ವಾಲ್ಮೀಕಿ ಜನಾಂಗದವರು ಇರುವ ಜಿಲ್ಲೆ ಬಳ್ಳಾರಿ ಆದ ಕಾರಣ ಇಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ತಳಿಯ ಅನಾವರಣ ಕಾರ್ಯಕ್ರಮ ಪಕ್ಷಾತೀತವಾಗಿ ಬಹಳ ಅದ್ದೂರಿಯಿಂದ ಹಬ್ಬದ ವಾತಾವರಣದಲ್ಲಿ ಮಾಡಬೇಕೆಂಬ ಕನಸು ನಮ್ಮೆಲ್ಲರದ್ದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಕೆಲವು ದಿನಗಳ ಕಾಲ ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ, ಇಲ್ಲಿಯ ಜನ ಬಹಳ ಒಳ್ಳೆಯವರು ಶಾಂತಿ ಪ್ರಿಯರು ಇದುವರೆಗೂ ಯಾವುದೇ ಗುಂಪು ಗರ್ಷಣೆ ಎಂದು ಕಂಡಿಲ್ಲ, ಉದ್ಯೋಗಗಳು ಇಲ್ಲದಿದ್ದರೂ ನೆಮ್ಮದಿಯಿಂದ ಜೀವನ ನಡೆಸ್ತಾ ಇದ್ದಾರೆ, ಬ್ಯಾನರ್ ಗಾಗಿ ಗಲಾಟೆಯಾಗಿ ನಮ್ಮ ಕಾರ್ಯಕರ್ತನ ಸಾವು ಮನಸ್ಸಿಗೆ ನೋವನ್ನುಂಟು ಮಾಡಿದೆ, ಆ ಗಲಭೆ ಬಗ್ಗೆ ಶಾಸಕರನ್ನು ಹೊರಗಡೆ ಕಳುಹಿಸಿ ಇಲ್ಲಿನ ಮುಖ್ಯ ಅಧಿಕಾರಿಗಳಿಂದ ಮಾಹಿತಿ ಮಾಹಿತಿ ಪಡೆದು, ಶಾಸಕರುಗಳ ಅಭಿಪ್ರಾಯ ಪಡೆದಿದ್ದೇನೆ, ನನ್ನದೇ ಆದ ಟೀಮ್ ಅನ್ನು ಕಳಿಸಿ ಇಲ್ಲಿನ ಪ್ರಕರಣದ ಗುಪ್ತವಾಗಿ ಮಾಹಿತಿ ಪಡೆದಿದ್ದೇನೆ ಸತ್ಯವನ್ನು ಯಾರು ಮುಚ್ಚಿ ಹಾಕಲು ಸಾಧ್ಯವಿಲ್ಲ ಅದೇನೇ ಇರಲಿ ವಾಲ್ಮೀಕಿ ಪುತ್ತಳಿಯ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಗಲಾಟೆ ಮಾಡಿ ಇದರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದು ಸರಿಯಲ್ಲ, ಇನ್ನು ಇನ್ನೂ ಆಮಂತ್ರಣ ಪತ್ರಿಕೆ ಮುದ್ರಣವಾಗಿರಲಿಲ್ಲ, ಪಕ್ಷಾತೀತವಾಗಿ ಗೌರವದ ಪ್ರತಿಮೆಯಾಗಬೆಕು ಎನ್ನುವ ಅಭಿಪ್ರಾಯ ಭರತ್ ರೆಡ್ಡಿದು ನಮ್ಮದು ಎಂದರು.
ಕಳೆದ 25ನೇ ತಾರೀಕು ನಂದು ಬಿಜೆಪಿಯ ಮಾಜಿ ಎಂಪಿ ಸೇರಿದಂತೆ ಬಿಜೆಪಿಯ ವಾಲ್ಮೀಕಿ ಸಮುದಾಯದ ಎಲ್ಲರೂ ಪಾಲ್ಗೊಂಡು ಹೋಮ, ಪುತ್ತಳಿಯ ಮೆರವಣಿಗೆ, ಸಾವಿರಾರು ಮಹಿಳೆಯರು ಕುಂಭಗಳ ಮೆರವಣಿಗೆ ನಡೆದಿದ್ದು ಇಡೀ ಬಳ್ಳಾರಿ ಜನತೆಗೆ ಗೊತ್ತಿರೋ ವಿಚಾರ. ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಕಟ್ಡುವುದು ಸಹಜ, ಬ್ಯಾನರ್ ವಿಚಾರದಲ್ಲಿ ಜನಾರ್ದನ ರೆಡ್ಡಿ ಶ್ರೀರಾಮುಲು
ಸಮಾಧಾನ ಇಲ್ಲವಾಗಿದೆ ಎಂದ್ರೇ ದೂರು ಕೊಡಬಹುದಿತ್ತು ಬ್ಯಾನರ್ ತೆಗೆಯಿರಿ ಅಂದ್ರೇ ತೆಗೆದು ಹಾಕ್ತಿದ್ದರು, ಆದರೆ ಇಲ್ಲಿನ ವಾಲ್ಮೀಕಿ ಜನಾಂಗದವರು ಕಾಂಗ್ರೆಸ್ಗೆ ಗೆಲ್ಲಿಸಿರುವುದು ಅಸಮಾಧಾನವಾಗಿ ಅವರ ಮುಖಂಡತ್ವದಲ್ಲಿ ಹರಿದು ಹಾಕಿದ್ದಾರೆ. ಯಾರನ್ನು ದೋಷಿಸಲು ಇಲ್ಲಿಗೆ ಬಂದಿಲ್ಲ ಕಾನೂನು ತನ್ನ ಕೆಲಸ ಮಾಡ್ತದೆ, ಸರಿ ತಪ್ಪು ಯಾವುದು ಹೇಳಲ್ಲ, ಗನ್ ಮ್ಯಾನ್ ಸೇರಿದಂತೆ ಎಲ್ಲರನ್ನು ಬಂಧಿಸಿದ್ದಾರೆ ಕಾನೂನಿನ ಕೆಲಸಕ್ಕೆ ನಾವು ಅಡ್ಡಿಯಾಗಲ್ಲ ಎಂದರು.
ಜನಾರ್ಧನ್ ರೆಡ್ಡಿ ಝೆಡ್ ಕ್ಯಾಟಗೇರಿ ಭದ್ರತೆ ಕೇಳಿದ್ರೆ ಕೊಡೋದು ಕೇಂದ್ರ ಅವರು ಕೊಡಲಿ ಇವರು ಪಡೆಯಲಿ, ನಮ್ಮ ಸರ್ಕಾರ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲರಿಗೂ ಗನ್ ಮ್ಯಾನ್ ಗಳ ಭದ್ರತೆ ಕೊಟ್ಟಿದೆ.
ನಮ್ಮವರಿಗೆ ಬುದ್ದವಾದ ಹೇಳಿದ್ದೆನೆ, ಬಿಜೆಪಿ ದೊಡ್ಡವರಾಗಿದ್ದಾರೆ ನಾನು ಅವರಿಗೆ ಹೇಳುವಷ್ಟು ದೊಡ್ಡವನಲ್ಲ ಎಂದು ತಿಳಿಸಿ, ಕುಮಾರ ಸ್ವಾಮಿ ದೊಡ್ಡವರು ಯಾವ ರೀತಿ ರಿಸರ್ಚ್ ಮಾಡಿದ್ದಾರೋ ಗೊತ್ತಿಲ್ಲ, ಪೋಸ್ಟ್ ಮಾರ್ಟಂ ಒಂದೇ ಬಾರಿ ಮಾಡಿರೋದು ರಿಪೋರ್ಟ್ ನನಗೆ ಬಂದಿದೆ, ಒಬ್ಬ ಕೇಂದ್ರ ಸಚಿವರಾಗಿ ಕುಮಾರ ಸ್ವಾಮಿ ತಪ್ಪು ಸಂದೇಶ ಕೊಟ್ಟಿದ್ದಾರೆ. ಸರ್ಕಾರದ ಮೇಲೆ ತಪ್ಪು ಹೊರಿಸೋ ವಿಚಾರಕ್ಕೆ ಕುಮಾರ ಸ್ವಾಮಿ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ, ಜನಾರ್ದನ ರೆಡ್ಡಿ ಶ್ರೀರಾಮುಲು ಕುಮಾರ ಸ್ವಾಮಿ ಮಧ್ಯೆ ಎನಿತ್ತು ಗೊತ್ತಿದೆ, ಜನರಿಗೆ ತಪ್ಪು ಮಾಹಿತಿ ಕೊಟ್ಟರೇ ತಮ್ಮ ಘನತೆ ಕೆಡಿಮೆಯಾಗ್ತದೆ ಅನ್ನೋದು ಮರೆತಿದ್ದಾರೆ, ಕುಮಾರ ಸ್ಚಾಮಿಗೆ ಚಟ ಪ್ರೆಸ್ ಮುಂದೆ ಮಾತನಾಡೋದು ಎಂದು ವ್ಯಂಗ್ಯವಾಡಿದರು.
ಜನಾರ್ದನ ರೆಡ್ಡಿ ಕೈಯಲ್ಲಿ ಬುಲೆಟ್ ಹೇಗೆ ಬಂತು..
ಯಾವ ಪಾರ್ಟ್ ಗೆ ಬಿತ್ತು ಅನ್ನೋ ಬಗ್ಗೆ ಮಾಹಜಾರ್ ಮಾಡಿಸಲಿ, ಹೊರಗೆ ಬಿದ್ದಿರೋದು ಬುಲೆಟ್ ತಂದು ತೋರಿಸಿದ್ದಾರೆ, ಜನಾರ್ದನ ರೆಡ್ಡಿ ತಪ್ಪು ಮಾಹಿತಿ ನೀಡೋದು ಅಗತ್ಯವಿಲ್ಲ, ಅವರು ಹೇಳಿದ್ದಕ್ಕೆ ಉತ್ತರ ಕೊಡಲ್ಲ ಎಂದು ಟೀಕಿಸಿದರು.
ಏನೇ ಇರಲಿ ಬಳ್ಳಾರಿಗೆ ತನ್ನದೇ ಆದ ಇತಿಹಾಸ ಇದೆ ಈ ಊರಿನ ಜನತೆಗೆ ನೆಮ್ಮದಿ ಕೆಡಿಸುವ ಕೆಲಸ ಆಗಬಾರದು, ಶಾಂತಿಯುತ ಬಳ್ಳಾರಿ ಬೇಕಿದೆ ಎಂದು ಡಿಕೆಶಿ ಹೇಳಿದರು.


