ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್

Ravi Talawar
ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್
WhatsApp Group Join Now
Telegram Group Join Now

ಬೆಂಗಳೂರು, ಡಿಸೆಂಬರ್ 3: ಡಿಸೆಂಬರ್ 5ರಂದು ಹಾಸನದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ವಾಭಿಮಾನಿ ಸಮಾವೇಶದ ದಿಕ್ಕು ದೆಸೆಯೇ ಬದಲಾಗಿದೆ. ‘ಸಿದ್ದರಾಮೋತ್ಸವ 2.0’ ಎಂದೇ ಶುರುವಾಗಿದ್ದ ಈ ಸಮಾವೇಶ ಮುಖ್ಯಮಂತ್ರಿಗಳ ಪವರ್‌ ಶೋ ಎಂದೇ ಬಿಂಬಿತವಾಗುತ್ತಿತ್ತು.

ಸಿದ್ದರಾಮಯ್ಯ ಬಣದ ಸಚಿವರೇ ಮುಂದೆ ನಿಂತು ಈ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡುತ್ತಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬರೆದ ಅನಾಮಧೇಯ ಪತ್ರದ ನಂತರ ಎಲ್ಲವೂ ಬದಲಾಯಿತು. ನಂತರ ಪಕ್ಷದ ವತಿಯಿಂದಲೇ ಕಾರ್ಯಕ್ರಮ ಮಾಡುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದರು. ಈ ಎಲ್ಲಾ ಬೆಳವಣಿಗೆ ಬಳಿಕ ಇಡೀ ಕಾರ್ಯಕ್ರಮವನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡಿದ್ದಾರೆ.

ಸಿದ್ದರಾಮಯ್ಯ ಬಣಕ್ಕೆ ಬಿಗ್ ಶಾಕ್ ಕೊಟ್ಟಿರುವ ಕನಕಪುರ ಬಂಡೆ, ಇದು ಪಕ್ಷದ ಸಮಾವೇಶ ಎಂದು ಹೇಳಿದ್ದಾರೆ. ನಿನ್ನೆ ಹಾಸನದಲ್ಲಿ ಖದ್ದು ಸಮಾವೇಶದ ಸ್ಥಳ ಪರಿಶೀಲಿಸಿದ್ದಾರೆ. ಸ್ವಾಭಿಮಾನಿ ಸಮಾವೇಶ ಎಂದಿದ್ದ ಹೆಸರನ್ನು ಜನಕಲ್ಯಾಣ ಸಮಾವೇಶ ಎಂದು ಬದಲಿಸಲಾಗಿದೆ.

WhatsApp Group Join Now
Telegram Group Join Now
Share This Article