ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆ; ಲಕ್ಷ್ಮಿ ಚುಳಕಿ ಪ್ರಥಮ ಸ್ಥಾನ

Ravi Talawar
ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆ; ಲಕ್ಷ್ಮಿ ಚುಳಕಿ ಪ್ರಥಮ ಸ್ಥಾನ
WhatsApp Group Join Now
Telegram Group Join Now

ಬೆಳಗಾವಿ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಣವಂ ಯೋಗ ಗುರುಕುಲ ಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆ 2025 ದಿನಾಂಕ 27 ರಂದು ಕನ್ನಡ ಸಾಹಿತ್ಯ ಭವನ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆ 2025 ರಲ್ಲಿ ಮುನವಳ್ಳಿಯ ಜೆ ಎಸ್ ಪಿ ಎಸ್ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮುನವಳ್ಳಿ ಯ ಯೋಗಪಟುಗಳಾದ ಕುಮಾರಿ ಲಕ್ಷ್ಮಿ ಚುಳಕಿ ಸಾಂಪ್ರದಾಯಕ ಯೋಗಾಸನ  ಸ್ಪರ್ಧೆಯಲ್ಲಿ ಪ್ರಥಮ ಮತ್ತು ಬ್ಯಾಕ್ ಬೆಂಡಿಂಗ್ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು  ಮತ್ತು ಗಾಯತ್ರಿ ಸಿಂಗನ್ನವರ ಫಾರ್ವರ್ಡ್ ಬೆಂಡಿಂಗ್ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ದಿನಾಂಕ 21 22 23 ರಂದು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟ ಯೋಗಾಸನ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ. ಇವರನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಎಂ ಆರ್ ಗೋಪಶೆಟ್ಟಿ ಮತ್ತು ಕಾರ್ಯದರ್ಶಿಗಳಾದ ವಿ ಎಸ್ ಯಕ್ಕುಂಡಿ ಖಜಾಂಚಿಗಳಾದ ರವೀಂದ್ರ ಯಲಿಗಾರ ಆಡಳಿತ ಅಧಿಕಾರಿಗಳಾದ ಅಮಿತ ಕರಿಕಟ್ಟಿ ಪ್ರಾಚಾರ್ಯರಾದ ಎಂ ಎಸ್ ಬಾಗೇವಾಡಿ  ಯೋಗ ತರಬೇತುದಾರರಾದ ಆರ್ ಎಚ್ ಪಾಟೀಲ ಮತ್ತು ಶ್ರೀಶೈಲ ಗೋಪಶೆಟ್ಟಿ ಮತ್ತು ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article