ಬೆಳಗಾವಿ ೫: ಸ್ಥಳೀಯ ಗಜು ವೈ. ಧರನಾಯಕ್ ಇವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .
ಕನ್ನಡ ಪರ ಹಾಗೂ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ನಿಮಿತ್ತ ನವಂಬರ್ ೧ ರಂದು ರಾಜೋತ್ಸವ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಗಣ್ಯರು ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದರು.
ಗಜು ಧರನಾಯಕ್ ಇವರು ಕರ್ನಾಟಕ ರಾಜ್ಯ ಎಸ್.ಸಿ. ವಿಭಾಗದ ಕಾಂಗ್ರೆಸ್ ಸಂಚಾಲಕರು, ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ವೆಲ್ಫೇರ್ ಆಂಡ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೈ ಕರ್ನಾಟಕ ಕನ್ನಡ ಒಕ್ಕೂಟದಿಂದ ಅನೇಕ ಕನ್ನಡಪರ ಕಾರ್ಯ ನಿರ್ವಹಿಸಿದ್ದಾರೆ ಮೊದಲಿನಿಂದಲೂ ಕನ್ನಡಪರ, ಸಮಾಜಪರ ಹಾಗೂ ರೈತ ಪರ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.


