ಬೆಳಗಾವಿ,24: ಬೆಳಗಾವಿ 1 ಜಿಲ್ಲಾ ಜನಜಾಗೃತಿ ವೇದಿಕೆ ಸಭೆ ಬೆಳಗಾಂ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಯೋಜನೆ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಬಸವರಾಜ ಸೊಪ್ಪಿನ್ ಮಠ ರವರು ವಹಿಸಿ 2023- 24ನೇ ಸಾಲಿನ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು. ಪ್ರಸ್ತುತ ವರ್ಷದ ಕ್ರಿಯಾ ಯೋಜನೆಯ ಬಗ್ಗೆ ಚರ್ಚಿಸಿ ಅನುಷ್ಠಾನದ ಕುರಿತು ವಿಮರ್ಶಿಸಲಾಯಿತು.
ಈ ಸಂದರ್ಭ ನೂತನವಾಗಿ ಆಗಮಿಸಿದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಯೋಜನೆಯ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಜನಜಾಗೃತಿ ಸದಸ್ಯರ ಪಾಲ್ಗೊಲ್ವಿಕೆ ಬಹಳ ಮುಖ್ಯವಾಗಿದೆ ಈ ನೆಲೆಯಲ್ಲಿ ಎಲ್ಲಾ ಸದಸ್ಯರು ಪೂಜ್ಯರ ಮೇಲೆ ನಂಬಿಕೆ ವಿಶ್ವಾಸದಿಂದ ಸಹಕರಿಸುತಿದ್ದೀರಿ ತಮಗೆ ಅಭಿನಂದನೆ ಎಂದರು ಹಾಗೂ ಜನಜಾಗೃತಿ ಕಾರ್ಯಕ್ರಮಗಳು ಯಶಸ್ವಿಗೆ ಪೂರಕವಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ವಿಕಟ ಪೂರ್ವ ಅಧ್ಯಕ್ಷರುಗಳಾದ ಮಲ್ಲಿಕಾರ್ಜುನ ವಾಲಿ, ಡಾಕ್ಟರ್ ಸುರಾಜ್ ಕುಮಾರ್, ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ಕ್, ಉಪಸ್ಥಿತರಿದ್ದರು.
ಮಧ್ಯ ಮುಕ್ತ ಚುನಾವಣೆಗೆ ಪೂರಕವಾಗಿ ಕರಪತ್ರವನ್ನು ಬಿಡುಗಡೆಗೊಳಿಸಿ ಧರ್ಮಸ್ಥಳದ ಪೂಜ್ಯ ಹೆಗ್ಗಡೆ ಯವರ ಕಣ್ಣೀರು ಒರೆಸುವ ಜನಜಾಗೃತಿ ಕಾರ್ಯಕ್ರಮದ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕನಸು ಈಡೇರಲು ಮಧ್ಯ ಮತ್ತು ಆಮಿಷ ಮುಕ್ತ ಚುನಾವಣೆ ಬಹಳ ಮುಖ್ಯವಾಗಿದೆ ಹಾಗಾಗಿ ನಾಗರಿಕರು ಆಮಿಷಕ್ಕೆ ಒಳಗಾಗದೇ ಜಾಗೃತರಾಗಲು ಜನಜಾಗೃತಿ ವೇದಿಕೆಯಿಂದ ಕರ ಪತ್ರ ಬಿಡುಗಡೆಗೊಳಿಸಲಾಯಿತು,
ಸಭೆಯ ನಿರೂಪಣೆಯನ್ನು ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ನಿರ್ವಹಿಸಿ, ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ರವರು ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ವ್ಯಾಪ್ತಿಯ ಜನಜಾಗೃತಿ ವೇದಿಕೆ ಗೌರವಾನ್ವಿತ ಸದಸ್ಯರು, ಜಿಲ್ಲಾ ವ್ಯಾಪ್ತಿಯ ಯೋಜನಾಧಿಕಾರಿಗಳು, ಜನಜಾಗೃತಿ ಮೇಲ್ವಿಚಾರಕರು, ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.