ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ವಿಜೇತರಿಗೆ ಸತ್ಕಾರ

Ravi Talawar
ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ವಿಜೇತರಿಗೆ ಸತ್ಕಾರ
WhatsApp Group Join Now
Telegram Group Join Now

ಬಾಗಲಕೋಟೆ: ಜು.23., ಬಾಗಲಕೋಟೆ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ, ಇನರ್ ವೀಲ್ ಕ್ಲಬ್ ಬಾಗಲಕೋಟೆ ಮತ್ತು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ರವಿವಾರ ದಂದು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗಳು ಜರುಗಿದವು.

ಉದ್ಘಾಟಿಸಿ ಮಾತನಾಡಿದ ಇನ್ನರ ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ವಾಘ್ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ಪ್ರತಿ ವ?ವೂ ಯೋಗಾಸನ ಸ್ಪರ್ಧಿಗಳು ಹಮ್ಮಿಕೊಳ್ಳುತ್ತಾ ನಮ್ಮ ಜಿಲ್ಲೆಯ ಯೋಗಾಸನ ಉತ್ತಮಪಟುಗಳನ್ನು ಗುರುತಿಸಿ ರಾ? ಅಂತರಾ? ಮಟ್ಟದಲ್ಲಿ ಪಾಲ್ಗೊಳ್ಳಲು ಉತ್ತಮ ವೇದಿಕೆ ನಿರ್ಮಿಸಿ ಕೊಡುತ್ತಿದೆ ಅದಕ್ಕೆ ನಾವು ಚಿರಋಣಿ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಸದಾಶಿವ ಹಂಚಿನಾಳ ಮಕ್ಕಳಿಗೆ, ಪುರು?ರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಯೋಗ ಸ್ಪರ್ಧೆಯು ಒಟ್ಟು ೧೦ ವಿಧದಲ್ಲಿ ಜರುಗುತ್ತದೆ ಎಂದು ತಿಳಿಸಿ, ಸ್ಪರ್ಧಾ ನಿಯಮಗಳನ್ನು ವಿವರಿಸಿದರು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಅವರು ಯೋಗದಲ್ಲಿ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಾಂಗಕ್ಕೆ ಮತ್ತು ಉದ್ಯೋಗಕ್ಕೆ ಮೀಸಲು ಕಲ್ಪಿಸಲಾಗಿದೆ.ಇದರ ಸದುಪಯೋಗಪಡಿಸಿಕೊಳ್ಳಿ, ಈಗ ಸ್ಪರ್ಧಾತ್ಮಕ ಕ್ರೀಡೆಯಾಗಿ ಗುರುತಿಸಲ್ಪಟ್ಟಿದ್ದು, ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಯೋಗಾಸನ, ಲಯಬದ್ಧ ಯೋಗಾಸನ ಒಟ್ಟು ೧೨ ಬಗೆಯ ಯೋಗಾಸನ ಸ್ಪರ್ಧೆಗಳಿದ್ದು, ಭಾಗವಹಿಸುವ ಯೋಗಪಟುಗಳು ಕ್ರೀಡಾಪಟುಗಳಾಗಿಯೂ ಕ್ರೀಡಾ ಕೋಟಾದಡಿಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ಸುವರ್ಣ ಅವಕಾಶ ಸಿಗಲಿದೆ. ಯೋಗಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಸಿಕ್ಕಿರುವುದು ಸಂತೋ?ದ ವಿ?ಯ.ಮಕ್ಕಳ ಉತ್ತಮ ಭವಿ?ಕ್ಕೆ ಯೋಗ ಸಹಕಾರಿಯಾಗಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತಿದ್ದು, ಏಕಾಗ್ರತೆ, ದೈಹಿಕ, ಮಾನಸಿಕ ಸದೃಢರಾಗುತ್ತಾರೆ ಎಂದು ತಿಳಿಸಿದರು.

ವಿಜಯನಗರ ಕೆ. ವಾಯ್.ಎಸ್.ಎ ಜಿಲ್ಲಾ ಅಧ್ಯಕ್ಷರು,ಸ್ಪರ್ಧಾ ವೀಕ್ಷಕರಾದ ಫಕ್ರುದ್ದೀನ್ ಆರ್ ಮಾತನಾಡಿ ಸದೃಢ ಆರೋಗ್ಯ, ನೆಮ್ಮದಿ, ಶಾಂತಿ ಪಡೆಯಲು ಯೋಗ ಮುಖ್ಯವಾಗಿದೆ, ಯೋಗಾ ಸ್ಪರ್ಧೆ ನಿರ್ಣಾಯಕರು ಅತ್ಯುತ್ತಮ ಯೋಗ ಪಟುಗಳನ್ನು ಆಯ್ಕೆ ಮಾಡುವಂತಾಗಲ್ಲಿ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಮೆಡಲ್ ವಿತರಿಸಿದರು. ಜಿಲ್ಲಾಧ್ಯಕ್ಷೆ ಸುಮಂಗಲಾ ಹದ್ಲಿ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ನಾಗಮ್ಮ,ಒಟ್ಟು ೧೬ ಯೋಗಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ತೀರ್ಪುಗಾರರಾಗಿ ಯೋಗಾಸನ ಕ್ರೀಡಾ ಸಂಸ್ಥೆಯ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಬಚಾಡಿ ಸದಸ್ಯರಾದ ಬಸವರಾಜ ಪಾಟೀಲ, ಮಲ್ಲಮ್ಮ ಬಜಪ್ನವರ, ರಂಗನಗೌಡ ಮತ್ತು ಇನ್ನರ್ ವ್ಹೀಲ್ ಕಾರ್ಯದರ್ಶಿ ಸಾವಿತಾ ಲಂಕೆನ್ನವರ ಮತ್ತು ಪಾಲಕ ಪೋ?ಕರು, ಯೋಗ ತರಬೇತಿದಾರರು, ಯೋಗ ಪಟುಗಳು ಮುಂತಾದವರು ಇದ್ದರು.

WhatsApp Group Join Now
Telegram Group Join Now
Share This Article