ಜಿಲ್ಲಾ ಮಟ್ಟದ ಸಾಮಾಜಿಕ ನ್ಯಾಯ ಅರಿವು ಕಾರ್ಯಕ್ರಮ —————- ಸಾಮಾಜಿಕ ನ್ಯಾಯದ ಅರಿವು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ : ಸಿದ್ರಾಮೇಶ್ವರ್

MK HasiruKranti
ಜಿಲ್ಲಾ ಮಟ್ಟದ ಸಾಮಾಜಿಕ ನ್ಯಾಯ ಅರಿವು ಕಾರ್ಯಕ್ರಮ —————- ಸಾಮಾಜಿಕ ನ್ಯಾಯದ ಅರಿವು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ : ಸಿದ್ರಾಮೇಶ್ವರ್
WhatsApp Group Join Now
Telegram Group Join Now
—————
ಕೊಪ್ಪಳ ಮಾರ್ಚ್ 27, (ಕರ್ನಾಟಕ ವಾರ್ತೆ): ಸಮಾಜದಲ್ಲಿ ಸಾಮಾಜಿಕ ಸಮಾನತೆ, ಹಕ್ಕುಗಳ ರಕ್ಷಣೆ ಹಾಗೂ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಸಾಮಾಜಿಕ ನ್ಯಾಯ ಅತ್ಯಂತ ಅಗತ್ಯ, ಅಧಿಕಾರಿಗಳು ಕಛೇರಿ ಸಿಬ್ಬಂದಿಯನ್ನು ಸಮಾನ ರೀತಿಯಲ್ಲಿ ಕಾಣಬೇಕು. ನಾವು ಸಾಮಾಜಿಕ ಸಮಾನತೆಯ ಜೊತೆಗೆ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು  ಹೇಳಿದರು.
ಅವರು ಶುಕ್ರವಾರದಂದು ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ಪ್ರಾಯೋಜಕತ್ವದಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ  ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಅರಿತುಕೊಳ್ಳಬೇಕು, ಸಾಮಾಜಿಕ ನ್ಯಾಯವೆಂದರೆ ಕೇವಲ ಕಾನೂನಿನ ಅಂಶವಲ್ಲ, ಅದು ಸಮಾಜದ ಪ್ರಗತಿಗೆ ಮೂಲಭೂತ ಸ್ತಂಭವಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ತಿಳಿಸಬೇಕು ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದರು.
ಗದಗಿನ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರಾದ ಪಾಪಣ್ಣ ಐ.ಜಿ ಅವರು ಮಾತನಾಡಿ, ಸುಸ್ಥಿರ ಸಮಾಜ, ಸಾಮಾಜಿಕ ನ್ಯಾಯದ ಮಹತ್ವ ಮತ್ತು ಪರಿಕಲ್ಪನೆಗಳು ಕುರಿತು ಹಾಗೂ ಸಮಾಜದಲ್ಲಿನ ಜಾತಿ, ಲಿಂಗ, ಧರ್ಮ ಮತ್ತು ವರ್ಗ ಆಧಾರಿತ ಭೇದಭಾವವನ್ನು ನಿವಾರಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಆರ್ಥಿಕ ಅವಕಾಶಗಳು ದೊರೆಯಬೇಕು ಎಂಬುದು ಆರ್ಥಿಕ ನ್ಯಾಯದ ಮೂಲ ತತ್ವ, ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು, ಸಮಾನ ರಾಜಕೀಯ ಭಾಗವಹಿಸುವಿಕೆ ಹಾಗೂ ಆಡಳಿತದಲ್ಲಿ ಪ್ರತಿನಿಧಿತ್ವ ಸಿಗುವುದು ರಾಜಕೀಯ ನ್ಯಾಯದ ಮೂಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಸಂವಿಧಾನ ನೀಡಿರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಅವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989ರ ಇತ್ತೀಚಿನ ತಿದ್ದುಪಡಿಗಳನ್ನು ಮತ್ತು ಸಂವಿಧಾನದ 17ನೇ ವಿಧಿ, ಮಕ್ಕಳ ಹಕ್ಕುಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012, ಭಾರತ ಸಂವಿಧಾನದ ಭಾಗ-3ರಲ್ಲಿ ಅನುಚ್ಛೇದ 12 ರಿಂದ 35 ರವರೆಗೆ ಮೂಲಭೂತ ಹಕ್ಕುಗಳು, ಭಾಗ-4 ರಲ್ಲಿ (ಎ) ಅನುಚ್ಛೇದ 51(ಎ) 11 ಮೂಲಭೂತ ಕರ್ತವ್ಯಗಳು (1976ರ 42ನೇ ತಿದ್ದುಪಡಿ) ಸೇರಿದಂತೆ ವಿವಿಧ ಸಾಮಾಜಿಕ ನ್ಯಾಯದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ ಸೋಮಶೇಖರ್, ಕೊಪ್ಪಳದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಗಂಗಾವತಿಯ ಕ್ಷೇತ್ರ ಶಿಕ್ಷಣ ಅಧಿಕಾರಿ ನಟೇಶ್, ಜಿಲ್ಲಾ ಪಂಚಾಯತ ಯೋಜನಾ ವಿಭಾಗದ ಬಸಪ್ಪ, ಗಂಗಾವತಿಯ ತೋಟಗಾರಿಕಾ ಇಲಾಖೆಯ ಮಣಿಕಂಠ, ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಬಿ.ಎಸ್. ಸತ್ಯನಾರಾಯಣ, ಯಲಬುರ್ಗಾ ಸಾಮಾಜಿಕ ಅರಣ್ಯ ವಲಯದ ಬಸವರಾಜ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article