ಧಾರವಾಡ”* ಹಾಗೂ *ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ”* ಇವರ ಸಹಯೋಗದಲ್ಲಿ *”ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಚೆಸ್ ಪಂದ್ಯಾವಳಿ”* ಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶ್ರೀಮತಿ ಡಾ. ತೇಜಸ್ವಿನಿ ನಾರಾಯಣಕರ ಮೇಡಂ ಅವರು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಚೆಸ್ ಆಟವು ಚಾಕ ಚಕ್ಯತೆಯಿಂದ ಕೂಡಿದ್ದು, ಮೆದುಳನ್ನು ಚುರುಕು ಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಕವಾದ ಶಕ್ತಿ ನೀಡುವ ಆಟವಾಗಿದೆ ಎಂದರು.
ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಿದ ಹಾಗೂ ಶ್ರೀ ಸಾಯಿ ಕಾಲೇಜಿನ ಅಧ್ಯಕ್ಷರಾದ ಶ್ರೀಮತಿ ಡಾ. ವೀಣಾ ಬಿರಾದಾರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಹೊರಾಂಗಣ ಕ್ರೀಡೆಗಳ ಜೊತೆಗೆ ಒಳಾಂಗಣ ಕ್ರೀಡೆಗಳು ಅತಿ ಮುಖ್ಯ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ನಂದೀಶ ಕಾಖಂಡಕಿ ಪ್ರಾಚಾರ್ಯರು, ಜಿಲ್ಲಾ ಕ್ರೀಡಾ ಸಂಚಾಲಕರು, ಶ್ರೀ ಆಯ್. ಆರ್. ಹುಬ್ಬಳ್ಳಿ ಅಧ್ಯಕ್ಷರು, ಧಾರವಾಡ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಜಿಲ್ಲಾ ಕ್ರೀಡಾ ಸಹ ಸಂಚಾಲಕರು, ಆಗಮಿಸಿದ್ದರು. ಸಂಸ್ಥೆಯ ನಿರ್ದೇಶಕರಾದ, ಡಾ. ಎಸ್.ಬಿ. ಗಾಡಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಸ್ಪರ್ಧಾಳುಗಳು, ನಿರ್ಣಾಯಕರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರು ಉಪಸ್ಥಿತರಿದ್ದರು. ಶ್ರೀ ಮಂಜುನಾಥ ಸೋಲಾರಗೊಪ್ಪ ಕಾರ್ಯಕ್ರಮ ನಿರೂಪಿಸಿದರು, ಡಾ. ಬಾಪುಸಾಬ ಮೊರಂಕರ ಸ್ವಾಗತಿಸಿದರು ಮತ್ತು ಪ್ರಾಚಾರ್ಯರಾದ ನಾಗರಾಜ ಶಿರೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಮಂಜುನಾಥ ವಂದಿಸಿದರು.
*ಸ್ಪರ್ಧೆಗಳ ಫಲಿತಾಂಶ*
*ಬಾಲಕಿಯರ ವಿಭಾಗ* ದಲ್ಲಿ ಪ್ರಥಮ ಸ್ಥಾನ – ಕುಮಾರಿ ಪ್ರಗತಿ ದೊಡ್ಡಮನಿ, ದ್ವಿತೀಯ ಸ್ಥಾನ – ಕುಮಾರಿ ಐಶ್ವರ್ಯ ಎಸ್ ಎಚ್, ತೃತೀಯ ಸ್ಥಾನ – ಶಿವಾನಿ ಹಿರೇಮಠ, ನಾಲ್ಕನೇ ಸ್ಥಾನ – ಸೃಷ್ಟಿ ಪೂಜಾರ, ಐದನೇ ಸ್ಥಾನ – ಪ್ರತಿಭಾ ಚೋಪ್ರಾ.
*ಬಾಲಕರ ವಿಭಾಗ* ದಲ್ಲಿ ಪ್ರಥಮ ಸ್ಥಾನ – ಶರವಿಲ್ ನವಲೆ, ದ್ವಿತೀಯ ಸ್ಥಾನ – ಸುಭಾನ ದೇವಸ್ಥಲ್, ತೃತೀಯ ಸ್ಥಾನ – ಅಕಿಲೇಶ ಕಾಮತ, ನಾಲ್ಕನೇ ಸ್ಥಾನ – ಆದರ್ಶ ಬಿ, ಐದನೇ ಸ್ಥಾನ – ಕೃಷ್ಣಾ ಬಾಪತ್, ಈ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಗೌರವಿಸಿದ ಸುಂದರ ಕ್ಷಣಗಳು.

ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಡಾ. ವೀಣಾ ಬಿರಾದಾರ* ಹಾಗೂ *ಡಾ. ತೇಜಸ್ವಿನಿ ನಾರಾಯಣಕರ ಇವರು ಚಾಲನೆ ನೀಡಿದರು.
ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಡಾ. ವೀಣಾ ಬಿರಾದಾರ* ಹಾಗೂ *ಡಾ. ತೇಜಸ್ವಿನಿ ನಾರಾಯಣಕರ ಇವರು ಚಾಲನೆ ನೀಡಿದರು.