ಶಿಕ್ಷಕಿ ರೇವಕ್ಕ ಹತ್ತಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ  ಪ್ರದಾನ

Ravi Talawar
ಶಿಕ್ಷಕಿ ರೇವಕ್ಕ ಹತ್ತಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ  ಪ್ರದಾನ
WhatsApp Group Join Now
Telegram Group Join Now

ಬೆಳಗಾವಿ:  ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಮಾದರಿ ಮರಾಠಿ ಶಾಲೆಯ ಕನ್ನಡ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇವಕ್ಕ ಗಂಗಪ್ಪ ಹತ್ತಿ ಇವರಿಗೆ  ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳಗಾವಿಯ ಕುಮಾರ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ  ಕಾರ್ಯಕ್ರಮದಲ್ಲಿ   ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025 ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ  ಶಿಕ್ಷಕಿ ಪ್ರಶಸ್ತಿಯನ್ನು   ರೇವಕ್ಕ ಗಂಗಪ್ಪ ಹತ್ತಿ ಇವರಿಗೆ   ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ಪ್ರಶಸ್ತಿ ಪ್ರದಾನ  ಮಾಡಿ, ಗೌರವಿಸಿದರು.

ರೇವಕ್ಕ  ಹಕ್ಕಿಯವರು ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ ಕನ್ನಡ ನಾಡು ನುಡಿ, ಸಂಸ್ಕೃತಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಕನ್ನಡವನ್ನು ಜಾಗೃತಗೊಳಿಸಿ  ಗಡಿ ಭಾಗದ ಶಾಲೆಯಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರ ಸುದೀರ್ಘ ಕ್ರೀಯಾಶೀಲ ಸೇವೆ ಪರಿಗಣಿಸಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.
ಶಿಕ್ಷಕಿ ರೇವಕ್ಕ ಅವರಿಗೆ ಶಾಲಾ ಶಿಕ್ಷಕರು, ಇಲಾಖೆಯ ಅಧಿಕಾರಿಗಳು  ಅಭಿನಂದನೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article