ನಿಫಾ ವೈರಸ್ ಕಂಡು ಬಂದಿಲ್ಲ, ಆತಂಕ ಬೇಡ: ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ

Ravi Talawar
ನಿಫಾ ವೈರಸ್ ಕಂಡು ಬಂದಿಲ್ಲ, ಆತಂಕ ಬೇಡ:   ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ
WhatsApp Group Join Now
Telegram Group Join Now

ಮಂಗಳೂರು: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿನಿಂದ ಓರ್ವ ಬಾಲಕ ಮೃತಪಟ್ಟಿದ್ದಾನೆ. ಆದರೆ ದ.ಕ. ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಕಂಡು ಬಂದಿಲ್ಲ. ಆತಂಕ ಬೇಡ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.

‘ದ.ಕ.ಜಿಲ್ಲೆಯಲ್ಲಿ ನಿಫಾ ವೈರಸ್​ಗೆ ಸಂಬಂಧಪಟ್ಟ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ರಾಜ್ಯದಿಂದಲೂ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕೇರಳದಿಂದ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಬರುವವರ ಮೇಲೆ ನಿಗಾ ಇರಿಸಿಕೊಳ್ಳಲು ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಈಗಾಗಲೇ ಸುತ್ತೋಲೆ ಕಳುಹಿಸಿದ್ದೇವೆ. ಯಾರೂ ಅನಗತ್ಯ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಡಾ‌. ಹೆಚ್.ಆರ್. ತಿಮ್ಮಯ್ಯ ಹೇಳಿದರು.

ನಿಫಾ ವೈರಸ್​ ಮೊದಲು ಕಾಣಿಸಿಕೊಂಡದ್ದು ಕೇರಳ ರಾಜ್ಯದಲ್ಲಿ. ಹಣ್ಣು ತಿನ್ನುವ ಬಾವಲಿಗಳು ನಿಫಾ ವೈರಸ್​ನ ಮೂಲ ಮತ್ತು ಅವುಗಳೇ ನಿಫಾ ವೈರಸ್​ ಹರಡಲು ಕಾರಣ ಎಂದು ನಂಬಲಾಗಿದೆ. ಹೀಗಾಗಿ ಬಾವಲಿಗಳನ್ನು ಪರೀಕ್ಷೆ ಮಾಡಿದಾಗ ಕೆಲವು ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಇದೇ ವೈರಸ್​ ಬಾವಲಿಗಳಿಂದ ಮನುಷ್ಯರಿಗೆ ಹಬ್ಬುತ್ತದೆ. ನಿಫಾ ರೋಗದ ಲಕ್ಷಣವೆಂದರೆ ಜ್ವರ, ತಲೆನೋವು ಮತ್ತು ತಲೆತಿರುಗುವಿಕೆ. ಕೆಮ್ಮು, ಹೊಟ್ಟೆ ನೋವು, ವಾಕರಿಕೆ, ವಾಂತಿ, ಸುಸ್ತು ಮತ್ತು ಮಸುಕಾದ ದೃಷ್ಟಿ.

 

WhatsApp Group Join Now
Telegram Group Join Now
Share This Article