ಸದ್ಗುರು ಎರ‍್ರಿತಾತನವರ 111ನೇ ಪುಣ್ಯಾರಾಧನೆ: ಪುರಾಣ ಪ್ರವಚನ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಆದೇಶ

Ravi Talawar
ಸದ್ಗುರು ಎರ‍್ರಿತಾತನವರ 111ನೇ ಪುಣ್ಯಾರಾಧನೆ: ಪುರಾಣ ಪ್ರವಚನ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಆದೇಶ
WhatsApp Group Join Now
Telegram Group Join Now
ಬಳ್ಳಾರಿ,ಸೆ.04 ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದಲ್ಲಿ ಸೆ.13 ರವರೆಗೆ ನಡೆಸಲು ಉದ್ದೇಶಿಸಿರುವ ಸದ್ಗುರು ಶ್ರೀ ಎರ‍್ರಿತಾತನವರ 111ನೇ ಪುಣ್ಯಾರಾಧನೆ, ಪುರಾಣ ಪ್ರವಚನ ಹಾಗೂ ಎರ‍್ರಿತಾತನವರ 12ನೇ ಪುಣ್ಯಾರಾಧನೆ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು ಗ್ರಾಮದಲ್ಲಿ ಸದ್ಗುರು ಶ್ರೀ ಎರ‍್ರಿತಾತನವರ ದೇವಸ್ಥಾನದ ಆಡಳಿತ ಹಾಗೂ ಆಸ್ತಿ ಸಂಬAಧ ವಿವಾದಗಳಿದ್ದು, ಸಮುದಾಯಗಳ ಮಧ್ಯ ವೈಷ್ಯಮ್ಯ ಇರುವುದರಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಮೇಲ್ಕಂಡ ಕಾರ್ಯಕ್ರಮಗಳನ್ನು ನಡೆಸದಂತೆ ಇತ್ತೀಚೆಗೆ ಬಳ್ಳಾರಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿಸಭೆಯ ನಡವಳಿಗಳನ್ವಯ ಸಹಾಯಕ ಆಯುಕ್ತರು ಕೋರಿದ್ದರು.
ಹಾಗಾಗಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ  ಕೊಳಗಲ್ ಗ್ರಾಮದಲ್ಲಿ ಸೆ.13 ರವರೆಗೆ ನಡೆಯುವ ಸದ್ಗುರು ಶ್ರೀ ಎರ‍್ರಿತಾತನವರ 111ನೇ ಪುಣ್ಯಾರಾಧನೆ, ಪುರಾಣ ಪ್ರವಚನ ಹಾಗೂ ಎರ‍್ರಿತಾತನವರ 12ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಡೆಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
WhatsApp Group Join Now
Telegram Group Join Now
Share This Article