ವಿಜಯನಗರ(ಹೊಸಪೇಟೆ), : ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದೇಶದ ಸ್ವಾಂತAತ್ರö್ಯಕ್ಕಾಗಿ ವೀರಸೇನಾನಿಗಳನ್ನು ಬಡಿದೆಬ್ಬಿಸಿದ ಕೀರ್ತಿ ಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಾರ ಅವರು ಮಾತನಾಡಿದರು,
ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಇಂದಿಗೂ ಮಹಿಳಾ ಸಮುದಾಯಕ್ಕೆ ದೊಡ್ಡ ಪ್ರೇರಣಾ ಶಕ್ತಿ ಆಗಿದ್ದಾರೆ. ಅವರ ಧೃಡ ನಿರ್ಧಾರ ಮತ್ತು ಹೋರಾಟದ ಮನೋಭಾವ ಪ್ರತಿಯೊಬ್ಬ ಮಹಿಳೆಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸ್ಫೂರ್ತಿ ನೀಡುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿಯೂ ಅವರು ದಕ್ಷತೆಯಿಂದ ರಾಜ್ಯಭಾರ ನಡೆಸಿ, ಕಠಿಣ ಪರಿಸ್ಥಿತಿಗಳಲ್ಲಿ ರಾಜ್ಯ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡಿದ್ದರು. ಮಹಿಳೆಯರು ಆಡಳಿತ, ರಾಜಕೀಯ ಸೇರಿ ಯಾವುದೇ ಕ್ಷೇತ್ರದಲ್ಲಿ ಸಫಲ ನಾಯಕರಾಗಬಲ್ಲರು ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ. ಚಿಕ್ಕಂದಿನಿAದಲೂ ಕುದುರೆ ಸವಾರಿ, ಕತ್ತಿವರಸೆ ಹಾಗೂ ಬಿಲ್ಲುಗಾರಿಕೆ ಕೌಶಲ್ಯಗಳಲ್ಲಿ ನಿಪುಣರಾಗಿದ್ದರು. ಇಂದಿನ ಮಹಿಳೆಯರಿಗೂ ಸ್ವಯಂರಕ್ಷಣೆಗೆ ಕೆಲವು ಕೌಶಲ್ಯಗಳ ಕಲಿಕೆ ಅಗತ್ಯವಿದೆ. ಕಲಿಯಲು ಹೆಣ್ಣುಮಕ್ಕಳು ಮುಂದಾಗಬೇಕು ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ್, ಪ್ರಧಾನ ಕಾರ್ಯದರ್ಶಿ ನೀಲಕಂಠ ಗೌಡ, ಪ್ರಮುಖರಾದ ಕಿಚಡಿ ಕೊಟ್ರೇಶ್, ಮಧುರಚನ್ನಶಾಸ್ತಿç, ರವಿಶಂಕರ್, ಶರಣು ಸ್ವಾಮಿ, ಎಲ್.ಬಸವರಾಜ್, ಸೋಮಶೇಖರ್, ಶಿವಶಂಕರ್, ಅಶ್ವಿನ್ ಕೊತ್ತಂಬರಿ, ಶಿವಪುತ್ರಪ್ಪ, ಕಾಶಿನಾಥಯ್ಯ, ಚಿತ್ತಪ್ಪ, ಮಲ್ಲಿಕಾರ್ಜುನ್ ಮೆಟ್ರಿ, ವಿಶ್ವನಾಥ್, ಗೌಳಿ ರುದ್ರಪ್ಪ, ಮಲ್ಲೇಶಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕಿತ್ತೂರು ರಾಣಿ ಚೆನ್ನಮ್ಮರ ಧೈರ್ಯ, ಸಾಹಸ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ. ಜಯಂತಿಯಲ್ಲಿ ಪುಷ್ಪನಮನ ಸಲ್ಲಿಸಿ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿಕೆ.
