ತುಪ್ಪರಿಹಳ್ಳ-ಬೆಣ್ಣಿಹಳ್ಳ ಪ್ರವಾಹದ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

Ravi Talawar
ತುಪ್ಪರಿಹಳ್ಳ-ಬೆಣ್ಣಿಹಳ್ಳ  ಪ್ರವಾಹದ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
WhatsApp Group Join Now
Telegram Group Join Now
ಧಾರವಾಡ  ಜೂನ್.14: ಜಿಲ್ಲೆಯ ಎರಡು ಪ್ರಮುಖ ಹಳ್ಳಗಳಾದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಹರಿಯುವ ಮಾರ್ಗದ ಗ್ರಾಮಗಳಲ್ಲಿ ಪ್ರವಾಹದ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಪ್ರವಾಹ ಉಂಟಾದಲ್ಲಿ ಜನ, ಜಾನುವಾರು ರಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
 ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಮಾತನಾಡಿದರು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ. ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಪ್ರವಾಹ  ಉಂಟುಮಾಡಬಹುದು. ತಹಶೀಲ್ದಾರರು ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದಿಂದ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
 ಆರೋಗ್ಯ ಇಲಾಖೆ ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.
 ಜಿಲ್ಲೆಯಲ್ಲಿ ಜೂನ್ 12 ರವರೆಗೆ 1.17 ಲಕ್ಷ ಹೆಕ್ಟರ್ ಭೂಮಿ ಬಿತ್ತನೆ ಆಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಆಗಿರುವ ಬೆಳೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಅಗತ್ಯ ಸಲಹೆಗಳನ್ನು ರೈತರಿಗೆ ನೀಡಬೇಕೆಂದು ಅವರು ಹೇಳಿದರು.
ಬಿತ್ತನೆ ಬೀಜ ಮಾರಾಟ ಮತ್ತು ವಿತರಣೆ ವಿವರ: ಜಿಲ್ಲೆಯಲ್ಲಿ ಉದ್ದು 520.4 ಕ್ವಿಂಟಲ್ ದಷ್ಟು ದಾಸ್ತಾನಿದೆ. ಈಗಾಗಲೇ 491.85 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 28.55 ಕ್ವಿಂಟಲ್ ದಷ್ಟು ಲಭ್ಯವಿದೆ. ಹೆಸರು 1,166.8 ಕ್ವಿಂಟಲ್ ದಷ್ಟು ದಾಸ್ತಾನಿದೆ. 971.55 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 195.25 ಕ್ವಿಂಟಲ್ ದಷ್ಟು ಲಭ್ಯವಿದೆ. ಶೇಂಗಾ 1,479.9 ಕ್ವಿಂಟಲ್ ದಷ್ಟು ದಾಸ್ತಾನಿದೆ.
1,230.3 ಕ್ವಿಂಟಲ್ ನಷ್ಟು ವಿತರಣೆ ಮಾಡಲಾಗಿದ್ದು, 249.6 ಕ್ವಿಂಟಲ್ ದಷ್ಟು ಲಭ್ಯವಿದೆ. ಭತ್ತ 200 ಕ್ವಿಂಟಲ್ ದಷ್ಟು ದಾಸ್ತಾನಿದೆ. 132.25 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 67.75 ಕ್ವಿಂಟಲ್ ದಷ್ಟು ಲಭ್ಯವಿದೆ. ತೊಗರಿ 62.4 ಕ್ವಿಂಟಲ್ ದಷ್ಟು ದಾಸ್ತಾನಿದೆ. 39.45 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 22.95 ಕ್ವಿಂಟಲ್ ದಷ್ಟು ಲಭ್ಯವಿದೆ. ಸೋಯಾಅವರೆ 11,160.9 ಕ್ವಿಂಟಲ್ ದಷ್ಟು ದಾಸ್ತಾನಿದೆ.
9,902.2 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 1,258.7 ಕ್ವಿಂಟಲ್ ದಷ್ಟು ಲಭ್ಯವಿದೆ. ಮೆಕ್ಕೆಜೋಳ 2,557.24 ಕ್ವಿಂಟಲ್ ದಷ್ಟು ದಾಸ್ತಾನಿದೆ. 1,751.5 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 805.74 ಕ್ವಿಂಟಲ್ ದಷ್ಟು ಲಭ್ಯವಿದೆ. ಒಟ್ಟಾರೆಯಾಗಿ 17,147.64 ಕ್ವಿಂಟಲ್ ದಷ್ಟು ದಾಸ್ತಾನಿದೆ. 14,519.1 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದ್ದು, 2628.54 ಕ್ವಿಂಟಲ್ ದಷ್ಟು ಮಾರಾಟಕ್ಕೆ ಲಭ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣಕುಮಾರ ಸಭೆಯಲ್ಲಿ ತಿಳಿಸಿದರು.
ರಸಗೊಬ್ಬರ ಮಾರಾಟ ಮತ್ತು ದಾಸ್ತಾನು ವಿವರ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಯೂರಿಯಾ ಗೊಬ್ಬರವು  27562 ಮೆಟ್ರಿಕ್ ಟನ್ ಬೇಡಿಕೆ ಇದೆ. ಏಪ್ರಿಲ್ ದಿಂದ ಇಲ್ಲಿಯವರೆಗೆ 12642.95 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಮತ್ತು  9252.87 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ.
16898 ಮೆಟ್ರಿಕ್ ಟನ್ ಡಿಎಪಿ ಗೊಬ್ಬರವು ಬೇಡಿಕೆ ಇದೆ. ಏಪ್ರಿಲ್ ದಿಂದ ಇಲ್ಲಿಯವರೆಗೆ 10418.18 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಮತ್ತು 1744.50 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ಪೆÇೀಟಾμï ಗೊಬ್ಬರವು 1752 ಮೆಟ್ರಿಕ್ ಟನ್ ರಸ ಗೊಬ್ಬರವು ಬೇಡಿಕೆ ಇದೆ. ಏಪ್ರಿಲ್ ದಿಂದ ಇಲ್ಲಿಯವರೆಗೆ 284.90 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 1607.95 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ಕಾಂಪ್ಲೆಕ್ಸ್  ಗೊಬ್ಬರವು 8,756 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಏಪ್ರಿಲ್ ದಿಂದ ಇಲ್ಲಿಯವರೆಗೆ 5586.76 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 13222.67 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ಎಸ್.ಎಸ್.ಪಿ ಗೊಬ್ಬರವು 1275 ಮೆಟ್ರಿಕ್ ಟನ್ ಬೇಡಿಕೆ ಇದೆ. ಏಪ್ರಿಲ್ ದಿಂದ ಇಲ್ಲಿಯವರೆಗೆ 202.95 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 470.15 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 56243 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಏಪ್ರಿಲ್ ನಿಂದ ಇಲ್ಲಿಯವರೆಗೆ 29135.74 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳು ಮಾರಾಟವಾಗಿದೆ. ಈಗ 26298.14 ಮೆಟ್ರಿಕ್ ರಸ ಗೊಬ್ಬರಗಳ ದಾಸ್ತಾನು ಇದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಪಶುಪಾಲನೆ, ಅಗ್ನಿಶಾಮಕ, ಆರೋಗ್ಯ, ಮಹಾನಗರ ಪಾಲಿಕೆ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article