ಮಹಾಲಿಂಗಪುರ ಹೋರಾಟಗಾರರೊಂದಿಗೆ ಜಿಲ್ಲಾಡಳಿತದ ಸಂಧಾನ ಸಭೆ ವಿಫಲ

Hasiru Kranti
ಮಹಾಲಿಂಗಪುರ ಹೋರಾಟಗಾರರೊಂದಿಗೆ ಜಿಲ್ಲಾಡಳಿತದ ಸಂಧಾನ ಸಭೆ ವಿಫಲ
WhatsApp Group Join Now
Telegram Group Join Now

ಮಹಾಲಿಂಗಪುರ: ’ಜೀವ ಬಿಟ್ಟೇವು ತಾಲೂಕು ಬಿಡೆವು’ ಎಂಬ ಗಟ್ಟಿ ನಿಲುವಿನಿಂದ ಆರಂಭವಾದ ಮಹಾಲಿಂಗಪುರ ತಾಲೂಕು ಹೋರಾಟ ಶುಕ್ರವಾರ ೧೩೭೮ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಾಲೂಕು ಘೋ?ಣೆಗೆ ಆಗ್ರಹಿಸಿ ಜ.೧೯ರ ಸೋಮವಾರ ಮಹಾಲಿಂಗಪುರ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸುವ ತೀರ್ಮಾನ ಕೈಗೊಂಡಿದ್ದು, ಬಾದಾಮಿಯಲ್ಲಿ ಜ.೧೯ ರಿಂದ ಜರುಗುತ್ತಿರುವ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತದ ಪರವಾಗಿ ತಹಸಿಲ್ದಾರ ಗಿರೀಶ ಸ್ವಾದಿ ನೇತೃತ್ವದಲ್ಲಿ ನಡೆದ ಹೋರಾಟಗಾರರ ಮನ ಒಲಿಕೆಯ ಪ್ರಯತ್ನ ಸಂಪೂರ್ಣ ವಿಫಲವಾಯಿತು.
ಶುಕ್ರವಾರ ಸಂಜೆ ಸ್ಥಳೀಯ ಜಿ ಎಲ್ ಬಿ ಸಿ ಸಭಾಭವನದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಕೊಣ್ಣೂರ ಮತ್ತು ಪುರಸಭಾ ಮಾಜಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ನೇತೃತ್ವದಲ್ಲಿ ಜ.೧೯ ರಂದು ಹಮ್ಮಿಕೊಂಡಿರುವ ಮಹಾಲಿಂಗಪುರ ಬಂದ್ ಸ್ಥಗಿತಗೊಳಿಸುವಂತೆ ಅಥವಾ ಮುಂದೂಡುವಂತೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು.
ಮುಖಂಡ ಸಿದ್ದು ಕೊಣ್ಣೂರ ಅವರು ನೀಡಿದ ಯಾವುದೇ ಭರವಸೆಯನ್ನು ಪುರಸ್ಕರಿಸದ ಹೋರಾಟಗಾರ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಪರಪ್ಪ ಬ್ಯಾಕೋಡ, ಸಂಗಪ್ಪ ಹಲ್ಲಿ , ಶಿವಾನಂದ ಟಿರ್ಕಿ, ನಿಂಗಪ್ಪ ಬಾಳಿಕಾಯಿ, ಅರ್ಜುನ ಹಲಗಿಗೌಡರ ಮಾತನಾಡಿ, ಜ.೧೯ರೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಟಿಪಿ ತಯಾರಿಸಿ ಅವಕಾಶ ಒದಗಿಸಿ ಕೊಟ್ಟಲ್ಲಿ ಅದೇ ದಿನ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಇಲ್ಲದಿದ್ದರೆ ಉಗ್ರ ಹೋರಾಟ ಮುಂದುವರಿಸುವುದಾಗಿ ಹಾಗೂ ಸದ್ಯದ ಚಾಲುಕ್ಯ ಉತ್ಸವಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶಾಂತ ರೀತಿಯ ಹೋರಾಟವನ್ನು ನಡೆಸುತ್ತಾ ಚಾಲುಕ್ಯ ಉತ್ಸವದ ನಂತರ ಅಂದರೆ ಎಂಟಹತ್ತು ದಿನಗಳವರೆಗೆ ಕಾದು ನೋಡಿ ನಂತರ ಉಗ್ರ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಹೇಳಿದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿಯೂ ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಮಹಾಲಿಂಗಪುರ ತಾಲೂಕು ಘೋ?ಣೆ ಮಾಡುವುದಾಗಿ ಹೇಳಿದ್ದು ಈಗ ನಡೆಯುತ್ತಿರುವ ಸಂಧಾನ ಸಭೆ ಹೊಸದೇನಲ್ಲ, ಈ ಹಿಂದೆ ಉಪವಾಸ ಸತ್ಯಾಗ್ರಹ ನಿರತರಾದ ಸಂದರ್ಭದಲ್ಲಿ ಮತ್ತು ತದನಂತರ ಮಹಾಲಿಂಗಪುರದಿಂದ ನೂರಾರು ಜನರ ನಿಯೋಗ ಬೆಂಗಳೂರಿಗೆ ಹೋಗಿ ಅಲ್ಲಿ ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡದೆ ಹಾಗೆ ಕಳಿಸಿದ್ದು ಈ ತರಹದ ನೂರಾರು ನೋವುಗಳನ್ನು ಮತ್ತು ನಿರಾಸೆಗಳನ್ನು ಹೊಂದಿರುವ ನಾವು ಈಗ ಯಾವುದೇ ಭರವಸೆಗಳಿಗೆ ಬಗ್ಗುವುದಿಲ್ಲ ಬದಲಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಸಮಯ ಬಂದರೆ ನಾವು ಬೆಂಕಿ ಹಚ್ಚಲು ಸಿದ್ಧ, ಲಾಠಿ ಏಟು ತಿನ್ನಲು ಮತ್ತು ಜೈಲಿಗೆ ಹೋಗಲು ಸಿದ್ದ ಆದರೆ ತಾಲೂಕು ಹೋರಾಟನ್ನು ಬಿಟ್ಟು ಕೊಡುವುದಿಲ್ಲ ಎಂದು ಸಭೆಯನ್ನು ಬಹಿ?ರಿಸಿ ಹೊರ ನಡೆದುಬಿಟ್ಟರು ನಂತರ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ ಅಧಿಕಾರಿಗಳು ಮತ್ತು ಮುಖಂಡರು ಅಲ್ಲಿಂದ ನಿರ್ಗಮಿಸಿದರು.
ವೃತ ನಿರೀಕ್ಷಕ ಎಚ್. ಆರ್.ಪಾಟೀಲ, ಪಿಎ??? ಕಿರಣ್ ಸತ್ತಿಗೇರಿ ಮತ್ತು ತಾಲೂಕು ಹೋರಾಟಗಾರರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article