ನೇಸರಗಿ. ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವದು, ಬಿಂದಾಸ ಮೋಜು, ಪಾರ್ಟಿ ಆಚರಿಸುವ ಈ ಕಾಲದಲ್ಲಿ ತಮ್ಮ 50 ನೇ ವರ್ಷದ ಜನ್ಮ ದಿನದಂದು ಸುಮಾರು ನಲವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಸಮೀಪದ ಮಲ್ಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಬೇಕಾದ ಲೇಖನಿ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಅರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ ರಾಚಪ್ಪ. ಗಣಾಚಾರಿ ಇವರು ವಿತರಿಸಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡು ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಒಂದು ಕಿಟ್ ನಲ್ಲಿ ಕಂಪಾಸ ಬಾಕ್ಸ್, ಸ್ಕೇಲ್, ಪೆನ್ನು, ಪೆನ್ಸಿಲ್ ಬಾಕ್ಸ್, ನೋಟಬುಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ ಒಕ್ಕುಂದ, ಬಸವರಾಜ ಬುಗಡಿಗಟ್ಟಿ, ಗೌಡಪ್ಪ ಶಿವಬಸನವರ, ಪ್ರಕಾಶ ಚಿಕ್ಕಬಸನವರ, ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೀಮತಿ ರೇಖಾ ಚಿಕ್ಕಬಸನವರ, ಬಸಪ್ಪ ಬುರುಡಿ, ಕಾವೇರಿ ಗಣಾಚಾರಿ, ಪ್ರಧಾನ ಗುರುಗಳಾದ ಪ್ರಕಾಶ ದೇಶನೂರ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.