ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ: ಆಯ್ಕೆ ಪತ್ರ ವಿತರಣೆ

Ravi Talawar
ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ: ಆಯ್ಕೆ ಪತ್ರ ವಿತರಣೆ
WhatsApp Group Join Now
Telegram Group Join Now

ಬೆಳಗಾವಿ,ಮಾ28:ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಬಿಜೆಪಿ ಮಾಧ್ಯಮ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಬಿಜೆಪಿ ವಕ್ತಾರ ಶಹಝಾನ ಪೊನಾವಾಲೆ ಅವರು ರಾಜ್ಯಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ, ರಾಜ್ಯ ಮಾಧ್ಯಮ ಸಂಚಾಲಕ ಕರುನಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ ಕಡೆಂಜಿ, ರಾಜ್ಯ ಪ್ರಧಾನ‌ಕಾರ್ಯದರ್ಶಿಗಳಾದ ಪಿ.ರಾಜೀವ, ಪ್ರೀತಂಗೌಡ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಫ್.ಎಸ್. ಸಿದ್ದನಗೌಡರ ಅವರಿಗೆ ಆಯ್ಕೆ ಪತ್ರ ನೀಡಿ ಗೌರವಿಸಿದರು.

ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದಲ್ಲಿ ಎರಡು ದಶಕಗಳಿಂದ ಸೇವೆಸಲ್ಲಿಸುತ್ತಾ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದ ಎಫ್‌ಎಸ್.ಸಿದ್ದನಗೌಡರ ರಾಜ್ಯ ಬಿಜೆಪಿ ಮಾಧ್ಯಮ ಸದಸ್ಯರನ್ನಾಗಿ ಪಕ್ಷ ಆಯ್ಕೆ ಮಾಡಿತ್ತು.

ಜಿಲ್ಲಾ ಮಾಧ್ಯಮ ಸಂಚಲಕರಾಗಿ ನಾಲ್ಕು ವರ್ಷ ಪಕ್ಷದಲ್ಲಿ ಸಲ್ಲಿಸಿದ ಸೇವೆ ರಾಜ್ಯದಲ್ಲಿಯೆ ಅತ್ಯತ್ತಮವಾಗಿತ್ತು.‌ ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಪಕ್ಷದಲ್ಲಿ ಮಾಡಿದ ಸೇವಾಕಾರ್ಯಗಳನ್ನು ರಾಜ್ಯ ಬಿಜೆಪಿ ಪರಿಗಣಿಸಿ ರಾಜ್ಯ ಪದಾಧಿಕಾರಿಯನ್ನಾಗಿ ಆಯ್ಕೆಮಾಡಿದ್ದು ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಸಂದ ಗೌರವವಾಗಿದೆ.

ರಾಜ್ಯದ ಪದಾಧಿಕಾರಿಗಳು ಪ್ರತಿ ಜಿಲ್ಲೆಯ ಮಾಧ್ಯಮ ವಕ್ತಾರರು ಸಂಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article