ಬಳ್ಳಾರಿ: ಮಹಾನಗರದ 36ನೇ ವಾರ್ಡ್ ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ 2024 25ನೇ ಸಾಲಿನ ಸರ್ಕಾರದ ವತಿಯಿಂದ ಕೊಡಲ್ಪಡುವ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜೆ ವಿ ಮಂಜುನಾಥ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಹಾಗೂ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಟಿ ರಾಜಶೇಖರ್, ಸಮಾಜ ಸೇವಕರು ಹಾಗೂ ಕನ್ನಡಪರ ಹೋರಾಟಗಾರರಾದ ಶಾಂತಿಧರ ದರಪ್ಪ, ದಾಸಪುರ ಅರುಣ್ ಕುಮಾರ್, ಮುಖ್ಯಸ್ಥರಾದ ಪ್ರವೀಣ್ ಗೌಡ, ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಅನ್ನಪೂರ್ಣ, ಪೋಷಕರುಗಳಾದ ಶ್ರೀ ಲಿಂಗಣ್ಣ, ಹುಲಿಗೆಮ್ಮ, ಛಾಯಾ ಮಂಜುನಾಥ್, ಸುಜಾತಾ, ನಾಗರಾಜ, ಶಾಲಾ ಸಿಬ್ಬಂದಿ ವರ್ಗವರಾದ ಕೆ ಎಂ ಬಸವರಾಜ, ಶ್ರೀಮತಿ ಛಾಯಾ ಶ್ರೀಮತಿ ದುರ್ಗಮ್ಮ ಶ್ರೀಮತಿ ಸುಜಾತ, ಹಾಗೂ ಅಡುಗೆ ಸಿಬ್ಬಂದಿಗಳಾದ ಕವಿತಾ ಶಿವಮ್ಮ ರಮೀಜಾ ಬಿ. ಹಾಗೂ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಉದ್ಯಮಿಗಳು ಹಾಗೂ ಸಮಾಜಸೇವಕರಾದ ಶ್ರೀ ಶಾಂತಿಧರ ದರಪ್ಪ ಅವರು ಶಾಲೆಗೆ 10000ಗಳನ್ನು ಕೊಡುಗೆಯಾಗಿ ನೀಡಿದರು, ಮತ್ತು ಬಿಲ್ವಾ ಸಂಸ್ಥೆಯ ಪ್ರವೀಣ್ ಗೌಡ ಹಾಗೂ ಅರುಣ್ ಕುಮಾರ್ ಅವರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ಬೆಲ್ಟು ಟೈ ಗಳನ್ನು ಕೊಡುಸುವುದಾಗಿ ಭರವಸೆ ನೀಡಿದರು.