ಬಳ್ಳಾರಿ, ಫೆ.03: ಬಳ್ಳಾರಿಯ ಐತಿಹಾಸಿಕ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ಅಂಗವಾಗಿ ಫೆ.01 ಮತ್ತು 02 ರಂದು ನಗರದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರು ರಥೋತ್ಸವಕ್ಕೆ ಆಗಮಿಸಿದ ಭಕ್ತ ಸಮೂಹಕ್ಕೆ10 ಸಾವಿರ ವಿಭೂತಿ ಹಾಗೂ ರುದ್ರಾಕ್ಷಿಗಳನ್ನು ವಿತರಿಸಿದರು.
ಪ್ರತಿ ವರ್ಷ ಸಾಮಾನ್ಯವಾಗಿ ಮಹಾ ಶಿವರಾತ್ರಿ ಸಂದರ್ಭದಲ್ಲಿ ರುದ್ರಾಕ್ಷಿ ವಿಭೂತಿ ವಿತರಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ಸಂದರ್ಭದಲ್ಲಿ ಲಡ್ಡು ಪ್ರಸಾದ ಹಾಗೂ ನೀರಿನ ಬಾಟಲಿ ವಿತರಿಸಲಾಗಿತ್ತು. ಈ ಸಲ ರಥೋತ್ಸವದಲ್ಲಿ ಭಾಗಿಯಾಗುವ ಭಕ್ತರಿಗೆ ರುದ್ರಾಕ್ಷಿ ಹಾಗೂ ವಿಭೂತಿ ವಿತರಿಸಲಾಯಿತು.


