ಘಟಪ್ರಭಾ.ಮಹಾವೀರ ಜಯಂತಿ ನಿಮಿತ್ತವಾಗಿ ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಮಹಾವೀರ ಜಯಂತಿ ಮತ್ತು ವಿಶ್ವಣಮೋಕಾರ ದಿವಸದ ನಿಮಿತ್ತವಾಗಿ ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ವತಿಯಿಂದ ಘಟಪ್ರಭಾ ಹತ್ತಿರದ ಡಾ ನಾಯಿಕವಾಡಿ ಮೆಡಿಕಲ್ ಸೆಂಟರ್ ಶಿರಢಾಣದಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾದ ಸ್ಥಾಪಕ ಅಧ್ಯಕ್ಷರಾದ ಡಾ. ವಿಲಾಸ ಬಿ ನಾಯಿಕವಾಡಿ, ಹಾಲಿ ಅಧ್ಯಕ್ಷರಾದ ಆನಂದ ದೇಶಪಾಂಡೆ, ಮಾಜಿ ಅಧ್ಯಕ್ಷರಾದ ಶ್ರೀಕಾಂತ ವಿ ಮಹಾಜನ, ಜಿ ಎಸ್ ಕರ್ಪೂರಮಠ, ಉಪಾಧ್ಯಕ್ಷ ಶ್ರೀಕಾಂತ ಬಿ ಕುಲಕರ್ಣಿ, ಸುಭಾಷ್ ದಡ್ಡೀಕರ, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು


