ಬೈಲಹೊಂಗಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯನ್ನು ಸ್ಥಾಪಿಸಿ ಕರ್ನಾಟಕ ರಾಜ್ಯದ ಬಡವರ,ರೈತರ,ಹಾಗೂ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಕಾರಣೀಕರ್ತರಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಗೌರವಾನ್ವಿತ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಬೈಲಹೊಂಗಲದ ನಿರಾಶ್ರಿತರ ಸಂಸ್ಕೃತಿ ಪೌಂಡೆಷನ್ ನಿರಾಶ್ರಿತರ ಆಶ್ರಮ ಆಶ್ರಯನಗರದಲ್ಲಿ ವೃಧ್ಧರಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಪೂಜ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬೈಲಹೊಂಗಲ ನಗರಸಭೆ ಅಧ್ಯಕ್ಷರಾದ ವಿಜಯ ಬೋಳಣ್ಣವರ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹಾಂತೇಶ ತುರಮರಿ, ಜಿಲ್ಲಾ ನೀರ್ದೇಶಕರಾದ ಸತೀಶ ನಾಯ್ಕ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾರ ಉಮೇಶ ಮುಪ್ಪಯ್ಯನವರಮಠ, ರತ್ನಾ ಗೋಧಿ, ದಲಿತ ಸಂಘದ ಅಧ್ಯಕ್ಷರಾದ ಚಂದ್ರಿಕಾ ಕಳಂಕರ, ಸಂಸ್ಕೃತಿ ಪೌಂಡೆಷನ್ ಸಂಸ್ಥಾಪಕರಾದ ಶಿವಾನಂದ ಕೋಲಕಾರ ಬೈಲಹೊಂಗಲ ಯೋಜನಾಧಿಕಾರಿಗಳಾದ ವಿಜಯಕುಮಾರ ಎಮ್. ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶೈಲಾ ಜೆ. ಹಾಗೂ ಆಶ್ರಯನಗರ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಮೈರುನ್ನ ಅತ್ತರವಾಡ ಒಕ್ಕೂಟ ಅಧ್ಯಕ್ಷರು ಸೇವಾಪ್ರತಿನಿಧಿಗಳು ಹಾಗೂ ಸಮಸ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


