ಗದಗ ೧೬: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. ೧೫ ಸಿದ್ದಲಿಂಗ ನಗರ ಗದಗದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿಯಾದ ಶ್ರೀಕ್ಷೇತ್ರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ರಾ. ಮುಳಗುಂದ ಅವರ ಪತಿ ಶ್ರೀ ರಾಜೇಶ ಮುಳಗುಂದ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್ ವಿತರಣೆ ಮಾಡಿದರು.
ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಇತರಿಗೆ ಸಹಾಯ ಮಾಡುವ ಕೃತಜ್ಞತೆಯ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು ಶಾಲೆಯ ಪ್ರಧಾನ ಗುರುಗಳಾದ ಶ್ರೀಮತಿ ವಿ. ಎನ್. ಬಸಾಪುರ ಸ್ವಾಗತಿಸಿದರು. ಪಿ.ಎಸ್.ಬ್ಯಾಳಿ ಅವರು ನಿರುಪಿಸಿದರು.
ಶ್ರೀಮತಿ ಯಶೋಧಾ ವಂದನಾರ್ಪಣೆ ಮಾಡಿದರು. ಶ್ರೀಮತಿ ವಿ. ಬಿ. ಕರಬಸಗೌಡರ ದಾನಿಗಳಿಗೆ ಧನ್ಯವಾದಗಳನ್ನು ಹೇಳಿದರು. ಹಾಗೂ ಎಲ್ಲರು ಸೇರಿ ಬ್ಯಾಗ್ ವಿತರಣೆ ಮಾಡಿದರು.
ದಿ. ೧೬/೦೭/೨೦೨೫ ಶ್ರೀಮತಿ ವಿಜಯಾ ಬಸಾಪೂರ
ಮೊ : ೯೪೮೧೯ ೨೮೫೮೦