ಡಾ, ಸುಶೀಲ್ ಕುಮಾರ್ ಕಲಾಲ್ ರಿಂದ ಬಡವರಿಗೆ ಆಹಾರ ಸಾಮಾಗ್ರಿ ಗಳ ಹಬ್ಬದ ಕಿಟ್ ವಿತರಣೆ 

MK HasiruKranti
ಡಾ, ಸುಶೀಲ್ ಕುಮಾರ್ ಕಲಾಲ್ ರಿಂದ ಬಡವರಿಗೆ ಆಹಾರ ಸಾಮಾಗ್ರಿ ಗಳ ಹಬ್ಬದ ಕಿಟ್ ವಿತರಣೆ 
WhatsApp Group Join Now
Telegram Group Join Now
ಕೊಪ್ಪಳ/ಡಾ, ಎಲ್,ಬಿ,ಕಲಾಲ್ ಮೆಮೋರಿಯಲ್ ತಾರಾ ಕ್ಲಿನಿಕ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ, ಸುಶೀಲ್ ಕುಮಾರ್ ಕಲಾಲ್ ರವರಿಂದ ರಮಜಾನ್ ಹಬ್ಬ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಬಡ ನಿರ್ಗತಿಕ ಹಿಂದೂ ಮುಸ್ಲಿಮ ಕುಟುಂಬ ದವರಿಗೆ ಆಹಾರ ಸಾಮಗ್ರಿಗಳ ಹಬ್ಬದ ಕಿಟನ್ನು ವಿತರಿಸಿದರು,
ಯುಗಾದಿ ಮತ್ತು ರಮಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಒಂದು ನೂರುಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸಿ ಬಡ ಕುಟುಂಬದವರು ತಮ್ಮ ತಮ್ಮ ಮನೆಯಲ್ಲಿ ಹಬ್ಬ ಆಚರಿಸಿ ಕೊಳ್ಳಲು ಅನುಕೂಲ ಮಾಡಿ ವ್ಯವಸ್ಥೆಗೊಳಿಸಿರುವ ಡಾ, ಸುಶೀಲ್ ಕುಮಾರ್ ಕಲಾಲ್ ರವರ ಈ ಸೇವಾ ಕಾರ್ಯಕ್ಕೆ ವಿವಿಧ ಸಂಘಟನೆಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಅಭಿನಂದಿಸಿದ್ದಾರೆ,
ಸೋಮವಾರದಂದು ಸಂಜೆ ವೇಳೆಗೆ ಸಾಂಕೇತಿಕವಾಗಿ ಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸಿದ ಈ ಸಂದರ್ಭದಲ್ಲಿ ವಾಗ್ಮಿ ಪ್ರವಚನಕಾರ ಇಲಕಲ್ ನ ಲಾಲ್ ಹುಸೇನ್ ಕಂದಗಲ್, ಲಿಂಗಾಯತ್ ಧರ್ಮ ಮಹಾಸಭಾ ರಾಜ್ಯ ಅಧ್ಯಕ್ಷ ಈಶಣ್ಣ  ಕೊಲ೯ ಹಳ್ಳಿ ,ಬಸವ ಸಮಿತಿ ಜಿಲ್ಲಾಅಧ್ಯಕ್ಷ ಬಸವರಾಜ್ ಬಳ್ಳೊಳ್ಳಿ, ವಿಜನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಾಹಿದ್ ಹುಸೇನ್ ತಹಸಿಲ್ದಾರ್, ಸಮಾಜದ ಮುಖಂಡ  ಮುಸ್ತಫಾ ಕುದುರೆಮೋತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
WhatsApp Group Join Now
Telegram Group Join Now
Share This Article