ಹಾರ್ಮಿಸ್ ಕಾರ್ಪೊರೇಟ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ

Ravi Talawar
ಹಾರ್ಮಿಸ್ ಕಾರ್ಪೊರೇಟ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ
WhatsApp Group Join Now
Telegram Group Join Now

ಅಥಣಿ: ದಿ ಫೆಡರಲ್ ಬ್ಯಾಂಕ್ ಅಥಣಿ ಇವರು ಸಂಸ್ಥೆಯ ಹಾರ್ಮಿಸ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ ಸಂಕೋನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಗೆ ೭೮ನೇ ಸ್ವಾತಂತ್ರೋತ್ಸವದ ನಿಮಿತ್ಯ ೧ ಸಾವಿರ ಲಿಟರ್ ಸಾಮರ್ಥದ ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದರು.

ಗುರುವಾರ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರದಲ್ಲಿ ಫೆಡರಲ್ ಬ್ಯಾಂಕ್ ಬೆಳಗಾವಿ ವಿಭಾಗದ ಸ್ಯಾಂಜೋ ಜೋಸೆಫ್ ಅವರು ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದರು.

ನಂತರ ಸ್ಯಾಂಜೋ ಜೋಸೆಫ್ ಅವರು ಮಾತನಾಡಿ ಮುಂದಿನ ಪೀಳಿಗೆಗೆ ಆರೋಗ್ಯದಲ್ಲಿ ಯಾವುದೆ ವ್ಯತ್ಯಾಸ ಆಗಬಾರದು, ಅಶುದ್ದ ನೀರು ಕುಡಿಯುವದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತರೀಕ್ತ ಪರಿಣಾಮ ಬಿರುತ್ತದೆ. ಇದನ್ನು ಅರಿತು ಸಂಕೋನಟ್ಟಿಯ ಶಾಲೆಗೆ ೧ ಲಕ್ಷ ೭೫ ಸಾವಿರ ರೂ.ಗಳ ಮೌಲ್ಯದ ೧ ಸಾವಿರ ಲಿಟರ್ ಸಾಮರ್ಥದ ಶುದ್ದ ಕುಡಿಯುವ ನೀರಿನ ಘಟಕವನ್ನು ಸಮರ್ಪಿಸಿದ್ದು, ಇದನ್ನು ಒಳ್ಳಯ ರೀತಿಯಲ್ಲಿ ನಿರ್ವಹಣೆ ಮಾಡಿ ಮಕ್ಕಳಿಗೆ ಉತ್ತಮ ಕುಡಿಯುವ ನೀರನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ವಿ ಬಿ ಮೈತ್ರಿ ಸ್ವಾಗತಿಸಿದರು, ಎಂ ಬಿ ಭೋಸಲೆ ವಂದಿಸಿದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಅಥಣಿ ಫೆಡರಲ್ ಬ್ಯಾಂಕ್‌ನ ವ್ಯವಸ್ಥಾಪಕ ಸುನಿಲ್ ಮಾಚಕನೂರ್, ವರ್ಧಮಾನ ಅರ್ಬನ್ ಕೊ ಆಫ್ ಸೊಸೈಟಿಯ ವ್ಯವಸ್ಥಾಪಕ ಬಾಹುಬಲಿ ಉಪಾಧ್ಯೆಯ, ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಅಸ್ಕಿ, ಮುಖಂಡರಾದ  ಆರ್ ಬಿ ಪಾಟೀಲ್, ವಿ ಆರ್ ಬಾಳೋಜ, ಎ ಸಿ ಪಾಟೀಲ್, ಅರುಣ ಯಲಗುದ್ರಿ, ಬ್ಯಾಂಕಿನ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮೇಟಿ, ಸುರೇಶ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article