ಯರಗಟ್ಟಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ಯರಗಟ್ಟಿ ವತಿಯಿಂದ ಸುಜ್ಞಾನ ನಿಧಿ ಶಿ?ವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಪಟ್ಟಣದ ಯೋಜನಾ ಕಚೇರಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಹಿರಿಯರಾದ ಭಾಸ್ಕರ್ ಹಿರೇಮೆತ್ರಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರಾದ ರವಿಕುಮಾರ ಯೋಜನೆಯು ನಡೆದು ಬಂದ ದಾರಿ, ಪೂಜ್ಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳು, ಕ್ಷೇತ್ರದಿಂದ ನಡೆಯುವ ಸೇವಾ ಚಟುವಟಿಕೆಗಳು ಬಗ್ಗೆ ಮಾಹಿತಿ ನೀಡಿತ್ತಾ, ಬೆಳಗಾವಿ ಜಿಲ್ಲಾಧ್ಯಂತ ೮೯೧ ಮಕ್ಕಳಿಗೆ ಸುಜ್ಞಾನ ನಿಧಿ ಶಿ?ವೇತನ ಮಂಜೂರಾತಿ ಆದೇಶ ಪತ್ರವನ್ನು ನೀಡಲಾಗಿದೆ. ಒಟ್ಟು ೫೫,೧೪,೦೦೦ ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದರು.
ಹಿರಿಯರಾದ ಭಾಸ್ಕರ್ ಹಿರೇಮೆತ್ರಿ ಸುಜ್ಞಾನ ನಿಧಿ ಶಿ?ವೇತನ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿ ಧರ್ಮಸ್ಥಳದಿಂದ ಶಿಕ್ಷಣಕ್ಕೆ ಒತ್ತು ನೀಡಿ ನೀಡುವ ಜ್ಞಾನದೀಪ ಶಿಕ್ಷಕರು, ಬೆಂಚು ಡೆಸ್ಕ್ , ಶಾಲಾ ಕಟ್ಟಡ, ಶೌಚಾಲಯ, ಲೈಬ್ರರಿ, ಕಂಪ್ಯೂಟರ್, ನೈತಿಕ ಶಿಕ್ಷಣ ಮುಂತಾದ ಪ್ರೋತ್ಸಾಹ, ಸರಕಾರಿ ಶಾಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ವಿದ್ಯಾರ್ಥಿಗಳು ಶ್ರೀ ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಸಿಗುವಂತ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಭವಿ? ರೂಪಿಸಿಕೊಂಡು ಮುಂದೆ ತಾವುಗಳು ಸಮಾಜ ಸೇವೆ ಮಾಡುವ ಗುಣ ಹೊಂದಿ ಎಂದರು.
ತಾಲೂಕು ಯೋಜನಾಧಿಕಾರಿ ಶ್ರೀಕಾಂತ ಎಂ. ಮಾತನಾಡಿದ ಅವರು ಪ್ರಸ್ತುತ ವ? ಆಯ್ಕೆಯಾದ ೧೭೪ ಪೈಕಿ ೧೦೧ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಯಾದ ದಶರತ, ನಾಗರಾಜ ನಾಯ್ಕ, ಗೀತಾ ಹಟ್ಟಿ, ಬಿಬಿಜಾನ ನಧಾಪ, ಮಂಜುಳಾ ನರಗಟ್ಟಿ, ಫಕ್ಕೀರಮ್ಮಾ ಬಾಣಾವರ, ಮಹಾದೇವಿ ತುಪ್ಪದ, ಸೇವಾ ಪ್ರತಿನೀಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.