ಯರಗಟ್ಟಿ,ಸೆ.೦೧ : ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಗಜಾನನ ಯುವಕ ಮಂಡಳಿಯವರು ವಿನೂತನ ಪ್ರಯೋಗ ದೊಂದಿಗೆ ಗಣೇಶ ವಿಸರ್ಜನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ನೂರಾರು ಸಂತ ಮಂಡಳಿ ಭಜನಾ ಮೂಲಕ ಗಣೇಶ ವಿಸರ್ಜನೆ ಮಾಡಿದ್ದಾರೆ.
ಗಣೆಶೋತ್ಸವ ನಿಮಿತ್ತ ಪಟ್ಟಣದ ಬಹುತೇಕ ಮನೆಗಳಲ್ಲಿ ೫ ದಿನಗಳ ವರೆಗೆ ಪ್ರತಿ?ಪಿಸಿದ್ದ ಗಣೇಶ ಮೂರ್ತಿಗಳನ್ನು ಭಕ್ತಿಬಾವದಿಂದ ಪೂಜಿಸಿ ಸಂಭ್ರಮದಿಂದ ವಿಸರ್ಜಿಸಲಾಯಿತು.
ಮನೆಯ ಸದಸ್ಯರೆಲ್ಲರೂ ೫ ದಿನಗಳ ಕಾಲ ಮನೆಯಲ್ಲಿ ಪ್ರತಿಷಪಿಸಲ್ಪಟ್ಟ ಗಣೇಶನಿಗೆ ದಿನಂಪ್ರತಿ ವಿವಿಧ ಹೂವುಗಳಿಂದ ಅಲಂಕರಿಸಿ ವಿವಿಧ ತೆರನಾದ ಮೋದಕಗಳನ್ನು, ಲಾಡು, ಹೋಳಿಗೆ, ಪಾಯಸ, ಕರಿಗಡುಬು, ಚಿತ್ರಾನ್ನ, ಅನೇಕ ತೆರನಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.
ಸಂಜೆ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿ, ಹಾಡಿನೊಂದಿಗೆ ಗಣಪತಿ ಬಪ್ಪಾ ಮೋರಯಾ, ಪುಡಚಾ ವರ್ಷಿ ಲವಕರ ಯಾ ಘೋ?ಣೆಗಳನ್ನು ಕೂಗುತ್ತಾ ಸಮೀಪದ ತಂಗಡಗಿ ರಸ್ತೆಯಲ್ಲಿರುವ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಕಾರ್ಯಕ್ಕೆ ಬೆಳಗಾವಿ ಪೊಲೀಸ್ ವರಿ?ಧಿಕಾರಿ ಡಾ. ಬಿಮಾಶಂಕರ ಗುಳೆದ ಹಾಗೂ ಮುರಗೋಡ ಸಿಪಿಐ ಆಯ್. ಎಂ. ಮಠಪತಿ ಯರಗಟ್ಟಿ ಪಟ್ಟಣದ ಎಲ್ಲಾ ಗಜಾನನ ಯುವಕ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹೇಳಿಕೆ: ಈ ಬಾರಿ ತಾಲೂಕಾ ಆಡಳಿತ ಹಾಗೂ ಪಟ್ಟಣ ಪಂಚಾಯಿತಿಯಿಂದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ ಮಾಡವು ಮೂಲಕ ಸಾರ್ವಜನಿಕ ಗಣೇಶ ವಿಸರ್ಜನೆ ಅನುಕೂಲ ಮಾಡಿದ್ದು ಸುಗಮ ವಿಸರ್ಜನೆ ಮಾಡಲಾಯಿತು ಹಾಗೂ ಪೊಲೀಸ್ ಇಲಾಖೆಯಿಂದ ಉತ್ತಮ ಬಂದೋಬಸ್ತ್ ವ್ಯವಸ್ಥೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಪೊಲೀಸ್ ಇಲಾಖೆಗೆ ಹಾಗೂ ತಾಲೂಕಾ ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು.ಈರಣ್ಣಾ ಮಠಪತಿ, ಮಾಜಿ ಗ್ರಾ. ಪಂ. ಸದಸ್ಯ, ಯರಗಟ್ಟಿ.
ಭಕ್ತಿಪೂರ್ವಕ ಗಣೇಶ ಮೂರ್ತಿ ವಿಸರ್ಜನೆ
