ರಸಗೊಬ್ಬರ, ಬೀಜ ರೋಗ ಮತ್ತು ಕೀಟನಾಶಕಗಳನ್ನು ಒದಗಿಸುವ ಕಂಪನಿಗಳೊಂದಿಗೆ ಚರ್ಚೆ

Ravi Talawar
ರಸಗೊಬ್ಬರ, ಬೀಜ ರೋಗ ಮತ್ತು ಕೀಟನಾಶಕಗಳನ್ನು ಒದಗಿಸುವ  ಕಂಪನಿಗಳೊಂದಿಗೆ ಚರ್ಚೆ
WhatsApp Group Join Now
Telegram Group Join Now

ಹುಲಕೋಟಿ 04: ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ, ಕರ್ನಾಟಕ ನೀರಾವರಿ ನಿಗಮ ನಿ. ಗದಗ, ಎಂ.ಇ.ಐ.ಎಲ್ ಮತ್ತು ನೆಟಾಫೀಮ್(ಎಗಿ) ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮ ಸಿಂಗಟಾಲೂರ ಸಮುದಾಯ ಹನಿ ನೀರಾವರಿ ಯೋಜನೆಗಳಲ್ಲಿ ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳಾದ ರಸಗೊಬ್ಬರ, ಬೀಜ ರೋಗ ಮತ್ತು
ಕೀಟನಾಶಕಗಳನ್ನು ಒದಗಿಸುವ ಕಂಪನಿಗಳ ಪಾತ್ರ ಮತ್ತು ಭಾಗವಹಿಸುವಿಕೆಯ ಕುರಿತು ಕೆ.ಎಚ್.ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಇತ್ತೀಚಿಗೆ
ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯ ಮುಖ್ಯಸ್ಥಿಕೆಯನ್ನು ಡಾ. ರಾಜೇಂದ್ರ ಪೊದ್ದಾರ, ನಿರ್ದೇಶಕರು ವಾಲ್ಮಿ ಸಂಸ್ಥೆ ಧಾರವಾಡ ಮತ್ತು ಶ್ರೀ. ಐ. ಪ್ರಕಾಶ ಮುಖ್ಯ ಕಾರ್ಯ ನಿರ್ವಾಹಕ ಅಭಿಯಂತರರು ಕ.ನೀ.ನಿ.ನಿ. ಮುಂಡರಗಿ ಇವರು ವಹಿಸಿದ್ದರು.

ಸಿಂಗಟಾಲೂರು ಏತ ವ ಹನಿ ನೀರಾವರಿ ಯೋಜನೆ ಪ್ಯಾಕೇಜ್- ೧ &ಚಿmಠಿ; ೩ ರಲ್ಲಿ ಪ್ರಸಕ್ತ ೨೦೨೪ರ ಮುಂಗಾರು ಹಂಗಾಮಿನಲ್ಲಿ ನೀರಾವರಿಯನ್ನು ಒದಗಿಸಲಾಗುವುದು. ಮತ್ತು ಅದರ ಅವಕಾಶಗಳ ಕುರಿತು ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸುವ ಕಂಪನಿಗಳೊಂದಿಗೆ ಚರ್ಚಿಸಲಾಯಿತು. ಹನಿ ನೀರಾವರಿ ಪದ್ದತಿಯ ಜೊತೆಗೆ ಉತ್ತಮ ಗುಣಮಟ್ಟದ ಬೀಜ, ರಸಾವರಿ ಪದ್ದತಿ, ಸಮಗ್ರ ರೋಗ &ಚಿmಠಿ; ಕೀಟ ನಿರ್ವಹಣೆ ಮತ್ತು ಸೂಕ್ತ ಬೇಸಾಯಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ರೈತರು ಉತ್ತಮ ಇಳುವರಿಯನ್ನು ನೀರಿಕ್ಷಿಸಬಹುದು. ಸಿಂಗಟಾಲೂರು ಹನಿ ನೀರಾವರಿ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ಸಭೆಯ ಮುಖ್ಯ ಉದ್ದೇಶವನ್ನು ಶ್ರೀ. ಗಿರೀಶ ದೇಶಪಾಂಡೆ, ಸಹಾಯಕ ಜೆನರಲ್ ಮ್ಯಾನೇಜರ್, ನೆಟಾಫಿಮ್ ಇವರು ಪ್ರಸ್ತಾಪಿಸಿದರು.

ಹನಿ ನೀರಾವರಿ ಪದ್ದತಿಯನ್ನು ಉಪಯೋಗಿಸಿಕೊಂಡು ರೈತರು ಮಾರುಕಟ್ಟೆಗೆ ಅವಶ್ಯಕತೆ ಇರುವ ಬೆಳೆಗಳನ್ನು ಬೆಳೆಯಬೇಕು. ಈ ಯೋಜನೆಗಳ ಯಶಸ್ಸಿಗೆ ರೈತರು, ನೀರು ಬಳಕೆದಾರರ ಸಹಕಾರ ಸಂಘ ಸದಸ್ಯರು ಮತ್ತು ಕೃಷಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸುವ ಕಂಪನಿಗಳು ದೊಡ್ಡ ಪ್ರಮಾಣದ ವಿವಿಧ ಬೆಳೆಗಳ ಪ್ರಾತ್ಯೇಕ್ಷಿತೆಗಳಲ್ಲಿ ಇವರ
ಪಾತ್ರ ಮತ್ತು ಸಹಭಾಗಿತ್ವ ಬಹುಮುಖ್ಯವಾಗಿರುತ್ತದೆಂದು ಡಾ. ರಾಜೇಂದ್ರ ಪೊದ್ದಾರ, ನಿರ್ದೇಶಕರು ವಾಲ್ಮಿ ಸಂಸ್ಥೆ ಇವರು ತಿಳಿಸಿಕೊಟ್ಟರು.

WhatsApp Group Join Now
Telegram Group Join Now
Share This Article