ವಿಕಲ ಚೇತನರು ಸರ್ಕಾರದ ಸೌಲಭ್ಯ ಪಡೆದು ಮುಂದೆ ಬನ್ನಿ : ಬಾಬಾಸಾಹೇಬ ಪಾಟೀಲ 

Ravi Talawar
ವಿಕಲ ಚೇತನರು ಸರ್ಕಾರದ ಸೌಲಭ್ಯ ಪಡೆದು ಮುಂದೆ ಬನ್ನಿ : ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ.ಸರ್ಕಾರ ವಿಕಲ ಚೇತನರಿಗೆ  ವೇತನ, ಯಂತ್ರ ಚಾಲಿತ ದ್ವಿಚಕ್ರ ವಾಹನ, ಉದ್ಯೋಗಕ್ಕೆ ಅನೇಕ ಸಹಾಯ ಸಹಕಾರ ನೀಡುತ್ತಿದ್ದು ಇದರ ಸದುಪಯೋಗವನ್ನು  ನೀವೆಲ್ಲರೂ ಪಡೆದುಕೊಂಡು ಸಣ್ಣ ಉದ್ಯೋಗ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
      ಅವರು ಸಮೀಪದ ನೇಗಿನಹಾಳ ಗ್ರಾಮದ ಶಾಸಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದೈಹಿಕ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಿಂದ ವಿತರಿಸಲಾದ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು  ವಿಕಲಚೇತನರಿಗೆ ವಿತರಿಸಿ ಮಾತನಾಡಿದರು.      ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ವಿಕಲ ಚೇತನ ಪಲಾನುಭವಿಗಳು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article