ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಲೀಜು ವಾತಾವರಣ : ಮಕ್ಕಳ  ಆರೋಗ್ಯದ ಮೇಲೆ ಪರಿಣಾಮ

Ravi Talawar
ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಲೀಜು ವಾತಾವರಣ : ಮಕ್ಕಳ  ಆರೋಗ್ಯದ ಮೇಲೆ ಪರಿಣಾಮ
WhatsApp Group Join Now
Telegram Group Join Now
ಸವದತ್ತಿ :  ಪಟ್ಟಣದ  ಪುರಸಭೆ  ವ್ಯಾಪ್ತಿಯಲ್ಲಿ ಬರುವ ಹಗ್ಗದೇವರ ಓಣಿಯ ಸಂಬಂಧಿಸಿದ ಅಂಗನವಾಡಿ ಕೇಂದ್ರ ಪ್ರಸ್ತುತ ಎಪಿಎಮಸಿ ಎದುರುಗಡೆ ಗೌರಿ ಕೆರೆ ಓಣಿಯಲ್ಲಿ ನಡೆಸಲಾಗುತ್ತಿದೆ. ಕಾರಣ ಹಗ್ಗದೇವರ ಓಣಿಯಿಂದ ಕಲಿವು ಮಕ್ಕಳು ಎಪಿಎಮಸಿ ರಸ್ತೆ ಬಸ್ ಮತ್ತು ವಾಹನಗಳ ಓಡಾಡುವ ಹೆಚ್ಚಾಗಿದ್ದು ಅಲ್ಲದೆ ಜಾತ್ರೆ ದಿನಗಳಲ್ಲಿ  ವಾಹನ ಸಂಚಾರ ದಟ್ಟವಾದರಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಆಗುತ್ತಿಲ್ಲ ಅಲ್ಲದೇ ಈಗಾಗಲೇ ಇರುವ ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಲೀಜು ವಾತಾವರಣ ಇದ್ದು ಮಕ್ಕಳ  ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕಾರಣ ಸಾರ್ವಜನಿಕರ ಬೇಡಿಕೆ ಮೇರೆಗೆ ಅಂಗನವಾಡಿಯನ್ನು ಹಗ್ಗದೇವರ ಓಣಿ ಹಾಗೂ ಗೊಲ್ಲರ ಓಣಿಗೆ ಹೊಂದಿಕೊಂಡಿರುವ ಮಟನ ಮಾರುಕಟ್ಟೆ ಖಾಲಿ ಇದ್ದು ಅಲ್ಲಿ ಹಂದಿಗಳ ವಾಸಸ್ಥಾನ ಆಗಿದೆ. ಮಟನ ಮಾರುಕಟ್ಟೆ ಬೇಡವಾಗಿದ್ದು ಈ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ಸ್ಥಳಾಂತರಿಸಲು ಸಾರ್ವಜನಿಕರ ಮನವಿ ಈ ಕುರಿತಂತೆ ಈಗಾಗಲೇ ಡಿಸೆಂಬರ್ 20 ರಂದು ಸಲ್ಲಿಸಲಾಗಿತ್ತು.
ಪುರಸಭೆಯವರು ಯಾವುದೇ ರೀತಿ ಕ್ರಮಕೈಕೊಂಡಿರುವದಿಲ್ಲ.ಎಂದು ಸಾರ್ವಜನಿಕರು ಆಗ್ರಹಿಸಿ ಪುನಃ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ  ಸಾರ್ವಜನಿಕರಿಂದ ಮನವಿ ಸ್ವೀಕರಿಸಿ  ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ಆಶ್ವಾಸನೆ ನೀಡಿದರು.
ಈ ವೇಳೆ ಕೆ.ಕೆ.ಪುಣೇದ, ದಾವಲ ಚೂರಿಖಾನ,ಅಮೀರ ಗೋರಿಖಾನ, ಮೌಲಾಸಾಬ ತಬ್ಬಲಜಿ, ದೀಪಕ ಜಾನವೇಕರ,ರಾಜು ಬಳ್ಳಾರಿ, ಮಲ್ಲಿಕಾರ್ಜುನ ಪುರದಗುಡಿ, ಬಾಪು ಚೂರಿಖಾನ, ಬಾಪು ಆನಿ, ಹುಸೇನ ಮಾಲದಾರ, ಡಿ.ಡಿ.ಸಣಕ್ಕಿ,ಲಾಲಸಾಬ ಅಪರಾದನವರ, ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article