ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರರನ್ನು ಸತ್ಕರಿಸಿದ ಪುರಸಭಾ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ. 

Pratibha Boi
ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರರನ್ನು ಸತ್ಕರಿಸಿದ ಪುರಸಭಾ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ. 
WhatsApp Group Join Now
Telegram Group Join Now
ಅಥಣಿ.ಉಪ್ಪಾರ ನಿಗಮದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಿವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣಾ ಉಪ್ಪಾರ ಹೇಳಿದರು. ಅವರು ಅಥಣಿ ತಾಲೂಕಾ ಉಪ್ಪಾರ ಸಮಾಜ ಬಂಧುಗಳಿಂದ ಪುರಸಭಾ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ನಿವಾಸದಲ್ಲಿ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
         ನಿಗಮದಿಂದ ಉಪ್ಪಾರ ಸಮಾಜ ಬಂಧುಗಳಿಗೆ ಗಂಗಾ ಕಲ್ಯಾಣ, ನೇರ ಸಾಲ, ವಾಹನ ಸಾಲ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳನ್ನು ಸ್ಥಳೀಯ ಶಾಸಕರ ಮೂಲಕ ಅನುಷ್ಢಾನಗೊಳಿಸುತ್ತಿರುವೆ ಎಂದ ಅವರು ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಉಪ್ಪಾರ ಸಮಾಜ ಸಂಘಟನೆಗೆ ಶ್ರಮಿಸುತ್ತಿದ್ದು, ನಾನು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಸಮಾಜ ಸಂಘಟನೆಗಾಗಿ ಶ್ರಮಿಸುವುದಾಗಿ ಹೇಳಿದರು.
       ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪುರಸಭಾ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ಮಾತನಾಡಿ, ಉಪ್ಪಾರ ಸಮಾಜ ಸಂಘಟನೆಗಾಗಿ ತನು, ಮನ, ಧನದಿಂದ ಸಹಕಾರ ನೀಡುತ್ತೇನೆ‌. ಉಪ್ಪಾರ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ ಮೇಲಿಂದ ಮೇಲೆ ಭೇಟಿ ನೀಡಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
          ಅತಿಥಿಗಳಾಗಿ ಆಗಮಿಸಿದ್ದ ರಾಯಬಾಗ ತಹಶೀಲ್ದಾರ ಸುರೇಶ ಮುಂಜೆ, ಭರಮಣ್ಣಾ ಉಪ್ಪಾರ ಕಳೆದ 15 ವರ್ಷಗಳಿಂದ ಸಮಾಜ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಇಂತಹ ವ್ಯಕ್ತಿಯನ್ನು ಗುರುತಿಸಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ಘೋಶಿಸಿದೆ ಎಂದ ಅವರು ಗ್ರಾಮೀಣ ಭಾಗದಲ್ಲಿ ಉಪ್ಪಾರ ಸಮಾಜ ಬಂಧುಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಇವರ ಏಳಿಗೆಗಾಗಿ ಭರಮಣ್ಣಾ ಉಪ್ಪಾರ ನೇತೃತ್ವದಲ್ಲಿ ಪ್ರಯತ್ನಿಸೋಣ ಎಂದರು.
     ಉಪ್ಪಾರ ಸಮಾಜ ಅಥಣಿ ತಾಲೂಕಾ ಅಧ್ಯಕ್ಷ ರಾಜಶೇಖರ ಮೊಪಗಾರ, ಧುರೀಣರಾದ ಭರತ ಲೋಣಾರೆ, ವಿಜಯ ಮೋಪಗಾರ, ಟಿ.ವೈ.ಇಂಗಳೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಶಾಂತಾ ಲೋಣಾರೆ,  ವಸಂತ ಗೆರಡೆ, ತಿಪ್ಪಣ್ಣಾ ಗುಗ್ಗರಿ, ಚಂದ್ರಕಾಂತ ಚೋರಗೆ, ಹಣಮಂತ ಟೊಣ್ಣಿ, ಉಮೇಶ ಟೊಣ್ಣಿ, ಕೃಷ್ಣಾ ಹರಗೆ, ಪ್ರಜ್ವಲ ಲೋಣಾರೆ ಪುನೀತ ಲೋಣಾರೆ,ನೀಕಿತ ಲೋಣಾರೆ,ರಾಕೇಶ ಚೋರಗೆ,
ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದರಾಯ ಮುಂಜೆ ನಿರೂಪಿಸಿ, ವಂದಿಸಿದರು.
WhatsApp Group Join Now
Telegram Group Join Now
Share This Article