ಬೇಸಿಗೆ ಹಂಗಾಮಿನಲ್ಲಿ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ: ಸಲೀಂ ಸಂಗತ್ರಾಸ

Ravi Talawar
ಬೇಸಿಗೆ ಹಂಗಾಮಿನಲ್ಲಿ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ: ಸಲೀಂ ಸಂಗತ್ರಾಸ
WhatsApp Group Join Now
Telegram Group Join Now

ಯರಗಟ್ಟಿ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ತಾಲೂಕಿನಲ್ಲಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಗೆ ಅವಶ್ಯವಿರುವ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ, ತಿಳಿಸಿದ್ದಾರೆ.

ಪ್ರಸಕ್ತ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಬೇಕಾಗುವ ಕಡಲೆ, ಜೋಳ, ಗೋಧಿ, ಸೂರ್ಯಕಾಂತಿ ಹಾಗೂ ಕುಸುಬೆ ಬಿತ್ತನೆ ಬೀಜ ಈಗಾಗಲೇ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ತಾಲೂಕಿನಲ್ಲಿ ೨೦೨೫-೨೬ ನೇ ಸಾಲಿನ ಹಿಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯವನ್ನು ಸದರಿ ಹಂಗಾಮಿನಲ್ಲಿ ಲಭೈವಿರುವ ದಾಸ್ತಾನು ಬಗ್ಗೆ ಮಾಹಿತಿ ನೀಡುತ್ತಾ ಹೋಬಳಿಯ ಉಪ ಮಾರಾಟ ಕೇಂದ್ರದಲ್ಲಿ ಈಗಾಗಲೇ ಕಡಲೆ ೬೯೭ ಕ್ವಿ ಬೇಡಿಕೆ ಪೈಕಿ ೩೭೦ ಕ್ವಿ ಹಾಗೂ ಜೋಳ ೫೪ ಕ್ವಿ ಪೈಕಿ ೩೦ ಕ್ವಿ ದಾಸ್ತಾನು ಇದ್ದು ಮುಂದಿನ ದಿನಗಳಲ್ಲಿ ಸೂರ್ಯ್ರಕಾಂತಿ, ಗೋಧಿ ಹಾಗೂ ಮುಸುಕಿನ ಜೋಳ ಬೀಜ ದಾಸ್ತಾನು ಹಾಗೂ ವಿತರಣೆ ಮಾಡಲಾಗುವುದು.

ಕಡಲೆ ಪ್ರತಿ ೨೦ ಕೆ.ಜಿ ಪಾಕೆಟ್ ದರವು ರೂ.೧೧೬೦/- ಜೋಳ ಪ್ರತಿ ೩ ಕೆ.ಜಿ ಪಾಕೆಟ್ ದರವು ರೂ.೧೨೦/- ಹಾಗೂ ಗೋಧಿ ಪ್ರತಿ ೩೦ ಕೆ.ಜಿ ಪಾಕೆಟ್ ದರವು ರೂ.೧೮೩೦/- ಇದ್ದು ಯಾವುದೇ ದಾಸ್ತಾನು ಕೊರತೆ ಇರುವುದಿಲ್ಲ. ರೈತರು ಸಂಬಂದಿಸಿದ ಉಪ ಕೇಂದ್ರಕ್ಕೆ ಭೇಟಿ ನೀಡಿ ಬೀತ್ತನೆ ಬೀಜ ಪಡೆಯಲು ಸಾಹಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ತಿಳಿಸಿದರು.

ಈ ವೇಳೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಯರಗಟ್ಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿಗಳಾದ ಶ್ರವಣ ಶಿವಪೂಜಿ ,ಮಂಜು ಮುಂಡೆಶಿ ,ಬಸಪ್ಪ ದಳವಾಯಿ, ತುಕಾರಾಂ ಕಮತಗಿ, ಹಣಮಂತ ತಳವಾರ ರೈತರಾದ ಶಿವಾನಂದ ನಾಯಕಪ್ಪ, ಶಿ ಗೋಳ, ಸೋಮು ರೈನಾಪುರ, ಶಿವಾನಂದ ಕರಿಗೊನ್ನವರ, ಬಸವರಾಜ್ ಚಿಕಾಕಿ ಮತ್ತು ಧರ್ಮೇಶ್ ಚಿಕಾಕಿ ಹಾಜರಿದ್ದರು

 

WhatsApp Group Join Now
Telegram Group Join Now
Share This Article