ಬಳ್ಳಾರಿ : ಗಣಿನಾಡು ನಗರ ಬಳ್ಳಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿಯ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಜೆ.ಎಂ ತಿಪ್ಪೇಸ್ವಾಮಿ ಅವರು ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದು ಕರ್ತವ್ಯಕ್ಕೆ ನೇಮಕರಾಗಿದ್ದಾರೆ. ಹಾಗಾಗಿ 2010 ರಿಂದ 2012ನೇ ಸಾಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಶುಭಕೋರಿ, ಸನ್ಮಾನಿಸಿದರು. ಈ ಸಮಯದಲ್ಲಿ ಹಳೆಯ ವಿದ್ಯಾರ್ಥಿಗಳಾದ ಗಿರೀಶ್ ಕುಮಾರ್ ಗೌಡ, ಹುಲಿರಾಜ್, ಮರಿಸ್ವಾಮಿ, ಹನುಮೇಶ್ ಹಾಜರಿದ್ದರು.