ಅಭ್ಯಾಸದ ವಿಧಾನ: ವಜ್ರಾಸನದಲ್ಲಿ ಕುಳಿತುಕೊಳ್ಳಿ. ವಿಶ್ವಾಸವನ್ನು ಮಾಡುತ್ತ ಎದೆಯನ್ನು ತೊಡೆಯ ಮೇಲಕ್ಕೆ ತನ್ನಿ. ಹಣೆಯನ್ನು ನೆಲಕ್ಕೆ ತಾಗಿಸಿ. ಕೈಗಳನ್ನು ಪಾದದ ಬಳಿಗೆ ಇರಿಸಿ. ಮಧ್ಯ ಮತ್ತು ಕೆಳಗಿನ ಶ್ವಾಸಕೋಶ ಮುಚ್ಚಲ್ಪಟ್ಟು, ಮೇಲಿನ ಸ್ವಾಸಕೋಶ ಮಾತ್ರ ಕ್ರಿಯಾಶೀಲವಾಗಿರುತ್ತದೆ. ನಿಮಗೆ ಸಾಧ್ಯವಾದ? ಕಾಲ ಈ ಬಂಗಿಯಲ್ಲಿರಿ. ಪ್ರಾರಂಭಿಕ ಸ್ಥಿತಿಗೆ ಮರಳಿ ವಿರಮಿಸಿ. ಉಸಿರಾಟವು ಸಹಜವಾಗಿರಲಿ. ನಂತರ ವಿಶ್ರಾಂತಿ ಪಡೆಯಿರಿ.
ಪ್ರಯೋಜನಗಳು: ಬೆನ್ನೆಲುಬನ್ನು ಬಾಗಿಸುತ್ತದೆ. ಬೆನ್ನಿನ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಮೈಗ್ರೇನ್ ಅಥವಾ ತಲೆನೋವುಳ್ಳವರಿಗೆ ಪ್ರಯೋಜನಕಾರಿ ಆಸನ ವಾಗಿದೆ. ಎಚ್ಚರಿಕೆ:ಹೊಟ್ಟೆ ಮತ್ತು ಹರ್ನಿಯಾ ಸಮಸ್ಯೆಯಿರುವವರು ಅಥವಾ ಬೆನ್ನಿನಲ್ಲಿ ನೋವಿರುವವರು ಎಚ್ಚರಿಕೆ ಯಿಂದ ಮಾಡಬೇಕು.