ವಿಜಯ ನಗರ ( ಹೊಸಪೇಟೆ ): ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘ ನಿಯಮಿತ (ರಿ) ಹೊಸಪೇಟೆ —ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ, 300 ಕ್ಕೂ ಮೇಲ್ಪಟ್ಟು ಅಮಾಯಕ ಮಹಿಳೆಯರಿಗೆ, ಸಣ್ಣ ಸಣ್ಣ ದಲಿತ ಸಮುದಾಯದ ರೈತರಿಗೆ, ತರಕಾರಿ ಮಾರುವವರಿಗೆ ವಂಚಿಸಿ ಹತ್ತಾರು ಕೋಟಿ ದೋಚಿರುವ, ಬಿಜೆಪಿ -ಕಾಂಗ್ರೆಸ್ ನಲ್ಲಿ ಹಲವಾರು ವರ್ಷಗಳಿಂದ ಸಂಪರ್ಕ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳು ಆಗಿರುವ ಪ್ರಿಯಾಂಕಾ ಜೈನ್,ಕವಿತಾ ಈಶ್ವರ ಸಿಂಗ್ ಮುಂತಾದವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೂಲೈ 20 ರಂದು ಶಾಸಕ ಗವಿಯಪ್ಪ ಇವರ ಮನೆ ಹತ್ತಿರ ನಡೆಸುವ ಸಿಪಿಎಂ ಪ್ರತಿಭಟನೆಗೆ ಬೆಂಬಲಿಸಿ, ದಲಿತ ಹಕ್ಕುಗಳ ಸಮಿತಿ ಹೊಸಪೇಟೆ ತಾಲೂಕು ಸಮಿತಿ ಭಾಗವಹಿಸಲು ಇಂದು ತೀರ್ಮಾನಸಿದೆ.
ಡಿ ಹೆಚ್ ಎಸ್ ತಾಲೂಕು ಅಧ್ಯಕ್ಷ ಎಂ.ಧನರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿ.ತಾಯಪ್ಪನಾಯಕ,ಎಸ್.ಸತ್ಯಮೂರ್ತಿ, ಬಿ.ರಮೇಶ್ ಕುಮಾರ್, ಮರಡಿ.ಜಂಬಯ್ಯನಾಯಕ ಮುಂತಾದವರು ಭಾಗವಹಿಸಿದ್ದರೆಂದು ಜಿಲ್ಲಾ ಅಧ್ಯಕ್ಷರಾದ ಮರಡಿ.ಜಂಬಯ್ಯನಾಯಕ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.