ಜಿಲ್ಲೆಯಾದ್ಯಂತ ಶೇ.104 ರಷ್ಟು ಪೋಲಿಯೋ ಲಸಿಕೆ ವಿತರಣೆ ಯಶಸ್ವಿ : ಡಿಹೆಚ್‌ಒ ಡಾ.ಶಂಕರ್ ನಾಯ್ಕ

A B
By A B
ಜಿಲ್ಲೆಯಾದ್ಯಂತ ಶೇ.104 ರಷ್ಟು ಪೋಲಿಯೋ ಲಸಿಕೆ ವಿತರಣೆ ಯಶಸ್ವಿ : ಡಿಹೆಚ್‌ಒ ಡಾ.ಶಂಕರ್ ನಾಯ್ಕ
WhatsApp Group Join Now
Telegram Group Join Now
ವಿಜಯನಗರ(ಹೊಸಪೇಟೆ) ಡಿಸೆಂಬರ್ 24 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಡಾ.ಎಲ್.ಆರ್.ಶಂಕರ್ ನಾಯ್ಕ ತಿಳಿಸಿದ್ದಾರೆ.
ಡಿಸೆಂಬರ್.21 ರಂದು ಪೋಲಿಯೋ ಲಸಿಕೆ ಬೂತ್‌ಗಳಲ್ಲಿ 1,27,366 ಮಕ್ಕಳಿಗೆ ಮತ್ತು ಡಿಸೆಂಬರ್.22 ರಿಂದ 24 ರ ವರಗೆ ಪೋಲಿಯೋ ಲಸಿಕೆ ಹಾಕಿಸದೇ ಇರುವ ಮಕ್ಕಳಿಗೆ ಮನೆ ಮನೆಗೆ ಭೇಟಿ ನೀಡಿ 6,843 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಜಿಲ್ಲೆಯಲ್ಲಿ ಒಟ್ಟು 1,34,209 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶೇ.104 ರಷ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜತೆಗೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ ಯಶಸ್ಸು ಸಾಧಿಸಲಾಗಿದೆ ಎಂದರು
WhatsApp Group Join Now
Telegram Group Join Now
Share This Article