ಧಾರವಾಡ ರಂಗಾಯಣ ನಿರ್ದೇಶಕ ದಿ. ರಾಜು ತಾಳಿಕೋಟಿ ಪಾರ್ಥಿವ ಶರೀರದ ಅಂತಿಮ ದರ್ಶನ 

Ravi Talawar
ಧಾರವಾಡ ರಂಗಾಯಣ ನಿರ್ದೇಶಕ ದಿ. ರಾಜು ತಾಳಿಕೋಟಿ  ಪಾರ್ಥಿವ ಶರೀರದ ಅಂತಿಮ ದರ್ಶನ 
WhatsApp Group Join Now
Telegram Group Join Now
ಧಾರವಾಡ :  ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ದಿ.ರಾಜು ತಾಳಿಕೋಟಿ ಅವರ ಪಾರ್ಥಿವ ಶರೀರಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಸಿಇಓ ಭುವನೇಶ ಪಾಟೀಲ ಅವರು ಪುಷ್ಪಾಚರಣೆ ಮಾಡಿ, ಅಂತಿಮ ನಮನ ಸಲ್ಲಿಸಿದರು.
 ನಗರದ ರಂಗಾಯಣದಲ್ಲಿ ರಂಗಾಯಣ ನಿರ್ದೇಶಕರಾಗಿದ್ದ ದಿ.ರಾಜು ತಾಳಿಕೋಟಿ ಅವರ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಂಗಭೂಮಿ ಕಲಾವಿದರು, ಅಭಿಮಾನಿಗಳು ಹಾಗೂ ಸಾಂಸ್ಕøತಿಕ ಕ್ಷೇತ್ರದ ಅನೇಕ ಗಣ್ಯರು, ಹಾಗೂ ಸಾರ್ವಜನಿಕರು ದಿ.ರಾಜು ತಾಳಿಕೋಟಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧಾರವಾಡದ ವಿವಿಧ ರಾಷ್ಟ್ರೀಯ ಟ್ರಸ್ಟ್‍ಗಳ ಅಧ್ಯಕ್ಷರು, ಸದಸ್ಯರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ, ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಹಾಗೂ ರಂಗಾಯಣದ ಎಲ್ಲ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article